WhatsApp Float Button

Karnataka Weather: ರಾಜ್ಯದ ಈ 7 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಆಗಲಿದೆ! ಇಲ್ಲಿದೆ ನೋಡಿ ಮಾಹಿತಿ!

Karnataka Weather: ರಾಜ್ಯದ ಈ 7 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಆಗಲಿದೆ! ಇಲ್ಲಿದೆ ನೋಡಿ ಮಾಹಿತಿ!

ಇಷ್ಟು ದಿನ ಚಳಿಯಿಂದ ಕದಲಿಹೋದ ಜನರಿಗೆ ಇಂದಿನಿಂದ ಚೂರು ಹೊಸ ಅನುಭವ ಸಿದ್ಧವಾಗಲಿದೆ, ಚೂರು ಮಳೆ ಅಲ್ಲಲ್ಲಿ ಮತ್ತಷ್ಟು ಚಳಿ ಹಾಗೆಯೇ ಎಲ್ಲೋ ಅಡಗಿದ್ದ ಸೂರ್ಯ ಮೋಡದಿಂದ ಹೊರಗೆ ಬಂದು ನಿಮಗೊಂದು ಹಿತವಾದ ಹಾಯ್‌ ಹೇಳಲಿದ್ದಾನೆ, ಎಳೆ ಬಿಸಿಲು ಮೈ ಮೇಲೆ ಬಿದ್ದು ಮೈ-ಕೈ ಚುರುಕ್‌ ಎನ್ನಲಿದೆ!

ಹೌದು, ಹವಾಮಾನ ತಜ್ಞ ಸಿಎಸ್ ಪಾಟೀಲ್ ಹೇಳಿಕೆಯ ಪ್ರಕಾರ ಚಳಿಗಾಲದಲ್ಲಿ ಉಷ್ಣ ವಲಯದಲ್ಲಿ ಸಾಮಾನ್ಯವಾಗಿ ಪೂರ್ವದಿಂದ ಪಶ್ಚಿಮದ ಕಡೆ ಅಲೆಗಳು ಚಲಿಸುತ್ತ ಇರುತ್ತವೆ ಇದಕ್ಕೆ ಪೂರ್ವದ ಅಲೆಗಳು ಎಂದು‌ ಕರೆಯಲಾಗುತ್ತದೆ. ಪೂರ್ವದ ಅಲೆಗಳ ಪ್ರಭಾವದಿಂದ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೋಡಕವಿದ ವಾತವರಣ‌ ಇರಲಿದೆ.

ಶಿವಮೊಗ್ಗ , ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಮಂಡ್ಯ ಜಿಲ್ಲೆಗಳಲ್ಲಿ ಕೆಲವು ಕಡೆ ಅಲ್ಲಲ್ಲಿ ತುಂತುರು ಮಳೆಯಾಗಲಿದೆ, ಕರ್ನಾಟಕದ ಉಳಿದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತು ತಂಪಾದ ವಾತಾವರಣ ಮುಂದುವರೆಯಲಿದೆ, ಆಗಸ್ಟ್ 28 ರಿಂದ ಆಗಸ್ಟ್ 31 ವರೆಗೆ ಮಳೆಯ ತಂಪಾದ ವಾತಾವರಣ ಮುಂದುವರೆಯಲಿದೆ.

ಕರ್ನಾಟಕದ ಉತ್ತರ ಒಳನಾಡು, ಮಲೆನಾಡಿನ ಜಿಲ್ಲೆಗಳಲ್ಲಿಯೂ ಮುಂದಿನ ಒಂದುವಾರ ಒಣ ಹವೆ ಇರಲಿದೆ. ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಮೋಡ ಕವಿದ ವಾತಾವರಣದಿಂದ ಸೂರ್ಯನ ಬೆಳಕು ಭೂಮಿಗೆ ತಲುಪದ ಕಾರಣ ಗಣನೀಯವಾಗಿ ಉಷ್ಣಾಂಶದಲ್ಲಿ ಇಳಿಕೆ ಕಾಣಲಿದೆ. ಹಾಗೆಯೇ ಕರ್ನಾಟಕದದಲ್ಲಿ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಏರಿಕೆಯಾಗಿ ನಾಳೆಯಿಂದ ಬಿಸಿಲು ಸಹ ಹೆಚ್ಚಾಗುವ ಸಾಧ್ಯತೆ ಇದೆ.

IMD ಯ ಅಖಿಲ ಭಾರತ ಹವಾಮಾನ ಸಾರಾಂಶದ ಪ್ರಕಾರ, ಉತ್ತರ ಭಾರತದಲ್ಲಿ ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ (Western Disturbance) ಪ್ರಭಾವವಿದ್ದರೂ, ಇದು ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯವು ಒಣ ಈಶಾನ್ಯ ಮಾರುತಗಳ ಪ್ರಭಾವಕ್ಕೆ ಒಳಗಾಗಿದ್ದು, ಇದರಿಂದಾಗಿ ಆಕಾಶವು ಸ್ಪಷ್ಟವಾಗಿರುತ್ತದೆ ಮತ್ತು ತಾಪಮಾನವು ಸ್ಥಿರವಾಗಿರುತ್ತದೆ.

ಗರಿಷ್ಠ ತಾಪಮಾನವು 27°C ನಿಂದ 35°C ವರೆಗೆ ಇರಲಿದ್ದು, ರಾಯಚೂರು ಮತ್ತು ಕಲಬುರಗಿಯಂತಹ ಉತ್ತರ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಿರಬಹುದು. ಕನಿಷ್ಠ ತಾಪಮಾನವು 9°C ನಿಂದ 21°C ನಡುವೆ ಇರಲಿದ್ದು, ಚಿಕ್ಕಮಗಳೂರು ಮತ್ತು ಕೊಡಗಿನಂತಹ ಮಲೆನಾಡು ಪ್ರದೇಶಗಳಲ್ಲಿ ಮುಂಜಾನೆ ಚಳಿ ಹೆಚ್ಚಿರಬಹುದು. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28-30°C ಮತ್ತು ಕನಿಷ್ಠ 17-18°C ಇರುವ ಸಾಧ್ಯತೆಯಿದೆ.

IMD ಪ್ರಕಾರ, ಅಗಸ್ಟ್ 30 2026 ರಂದು ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶಗಳು 11°C ಯಿಂದ 21°C ವರೆಗೆ ಇರಲಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತಿ ಕಡಿಮೆ 11°C ನಿರೀಕ್ಷೆಯಿದೆ. ಈ ಪ್ರದೇಶಗಳು ಉನ್ನತ ಭೂಪ್ರದೇಶಗಳಲ್ಲಿರುವುದರಿಂದ ಚಳಿ ಹೆಚ್ಚು ಅನುಭವವಾಗಬಹುದು, ಆದರೆ ಒಟ್ಟಾರೆ ರಾಜ್ಯದಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಅರಸೀಕೆರೆ (ಹಾಸನ ಜಿಲ್ಲೆ) ಯಲ್ಲಿ ಕನಿಷ್ಠ ಉಷ್ಣಾಂಶ ಸುಮಾರು 13°C ಇರಬಹುದು, ಇದು ರಾಜ್ಯದ ಸರಾಸರಿಗಿಂತ ಸ್ವಲ್ಪ ತಂಪು.

Leave a Comment