WhatsApp Float Button

ಬಿಪಿಎಲ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ! 1 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಕ್ಯಾನ್ಸಲ್! BPL Ration Card Update

ಬಿಪಿಎಲ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ! 1 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಕ್ಯಾನ್ಸಲ್! BPL Ration Card Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ 2023ರ ಚುನಾವಣೆಯನ್ನು ಗೆದ್ದು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿತು. ಹೀಗೆ ಅಧಿಕಾರಕ್ಕೆ ಬಂದ ನಂತರ ಅವರು ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು, ಇದಾದ ಮೇಲೆ ಅವರು ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳ ಲಾಭವನ್ನು ಜನಸಾಮಾನ್ಯರು ಮತ್ತು ಫಲಾನುಭವಿಗಳು ಇಲ್ಲಿಯವರೆಗೂ ಕೂಡ ಪಡೆದುಕೊಳ್ಳುತ್ತಾ ಬಂದಿದ್ದಾರೆ.

ಆದರೆ ಈಗ ಗ್ಯಾರೆಂಟಿ ಯೋಜನೆಗಳ ಹೊರಯನ್ನು ತಪ್ಪಿಸಲು ರಾಜ್ಯ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಏಕೆಂದರೆ ರಾಜ್ಯ ಸರ್ಕಾರ ನೀಡುತ್ತಿರುವಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹತೆ ಇಲ್ಲದೆ ಇರುವವರು ಕೂಡ ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದಕಾರಣ ಬಿಪಿಎಲ್ ರೇಷನ್ ಕಾರ್ಡ್ (BPL Ration Card Cancelled) ಗಳನ್ನು ರದ್ದು ಮಾಡುವ ನಿರ್ಧಾರವನ್ನ ರಾಜ್ಯ ಸರ್ಕಾರವು ಮಾಡುತ್ತಿದೆ. ಹೀಗೆ ಮಾಡಿದರೆ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹತೆಯುಳ್ಳ ಫಲಾನುಭವಿಗಳು ಮಾತ್ರ ಸ್ವೀಕರಿಸುತ್ತಾರೆ ಎಂದು ಸರ್ಕಾರದ ಉದ್ದೇಶ.

ನಿಮ್ಮ (BPL Ration Card Cancelled) ಬಿಪಿಎಲ್ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗದೇ ಇರಲು ನೀವು ಯಾವ ಕ್ರಮಗಳನ್ನು ಪಾಲಿಸಬೇಕು ಮತ್ತು ಯಾವೆಲ್ಲ ನಿಯಮಗಳನ್ನು ನೀವು ಪಾಲಿಸಬೇಕು ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ ಹಾಗೂ ಆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ. ಹೀಗೆ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದನ್ನು ನೀವು ತಪ್ಪಿಸಬಹುದು.

ರದ್ದಾಗಿರುವ ರೇಷನ್ ಕಾರ್ಡ್ ಗಳ ಮಾಹಿತಿ:

ನಮ್ಮ ಕರ್ನಾಟಕ ರಾಜ್ಯದ ಆಹಾರ ಇಲಾಖೆಯಿಂದ ಹೊರ ಬಿದ್ದಿರುವ ಮಾಹಿತಿಯ ಪ್ರಕಾರ 2023 ಮತ್ತು 24ನೇ ಸಾಲಿನಲ್ಲಿ ಸುಮಾರು 74,342 ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿತ್ತು. ಅದೇ ರೀತಿ 2024 ಮತ್ತು 25ನೇ ಸಾಲಿನಲ್ಲಿ ಸುಮಾರು 16,710 ಕಾರ್ಡುಗಳನ್ನು ರದ್ದು ಮಾಡಲಾಗಿತ್ತು. ಅದೇ ರೀತಿ ಕಳೆದ 2025 ನೇ ವರ್ಷದಲ್ಲಿ ಆಗಸ್ಟ್ ತಿಂಗಳ ಅಂತ್ಯದ ಒಳಗೆ ಸುಮಾರು 10,809 ಕಾರ್ಡ್ಗಳನ್ನು ರದ್ದು ಮಾಡಲಾಗಿದೆ.

ಹೀಗೆ ಒಟ್ಟಾರೆಯಾಗಿ ಸುಮಾರು 1,10,800 ಕಾರ್ಡುಗಳನ್ನು ಆಹಾರ ಇಲಾಖೆಯು ರದ್ದುಪಡಿಸಿದೆ. ಇದಲ್ಲದೆ ಸಾಕಷ್ಟು ಜನ (BPL Ration Card) ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಸುಳ್ಳು ಮಾಹಿತಿ ನೀಡುವ ಮೂಲಕ ಮಾಡಿಸಿಕೊಂಡಿದ್ದರು, ಹೀಗೆ ಮಾಡಿಸಲಾಗಿರುವ ರೇಷನ್ ಕಾರ್ಡುಗಳ ಪೈಕಿ ಸುಮಾರು 7,76,206 ಕಾರ್ಡ್ಗಳನ್ನು ಆಹಾರ ಇಲಾಖೆ ಹಾಗೂ ರಾಜ್ಯ ಸರ್ಕಾರ “ಸಂಶಯಾಸ್ಪದ” ಪಟ್ಟಿಯಲ್ಲಿ ಸೇರಿಸಿದೆ. ಮುಂದೆ ಈ ರೇಷನ್ ಕಾರ್ಡ್ ಗಳ ಮೇಲೆ ಕೂಡ ಪರಿಶೀಲನೆ ಮಾಡಿ ಕಠಿಣ ಕ್ರಮ ಜರಗಿಸಲಾಗುವುದು ಎಂದು ಆಹಾರ ಇಲಾಖೆ ಮುನ್ಸೂಚನೆ ನೀಡಿದೆ.

ಯಾರ ಯಾರ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ?

  • ಸರ್ಕಾರದ ಮಾನದಂಡಗಳ ಪ್ರಕಾರ ಈ ಲಕ್ಷಣಗಳು ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಬಹುದು ಅಥವಾ APL ಎಪಿಎಲ್ ಕಾರ್ಡ್ಗೆ ಬದಲಿಸಬಹುದು.
  • ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳ ವಾರ್ಷಿಕ ಆದಾಯವು 1.20 ಲಕ್ಷಕ್ಕಿಂತ ಮೇಲಿದ್ದರೆ ಅಂತಹವರ ಕಾರ್ಡ್ ರದ್ದಾಗಲಿದೆ.
  • ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಹತ್ತಿರ ಮನೆಯಲ್ಲಿ ನಿಮ್ಮ ಹೆಸರಿನ ಮೇಲೆ ಸ್ವಂತ ಕಾರ್ ಇದ್ದರೆ ನಿಮ್ಮ ಕಾರ್ಡ್ ರದ್ದಾಗುತ್ತದೆ.
  • ನಿಮ್ಮ ಕುಟುಂಬದಲ್ಲಿ ನಿಮ್ಮ ಮನೆಯವರ ಪೈಕಿ ಯಾರಾದರೂ ಕೂಡ (GST) ಆದಾಯ ತೆರಿಗೆ ಪಾವತಿಸುತ್ತಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದೆ.
  • ಅದೇ ರೀತಿ ನಿಮ್ಮ ಬಳಿ 7.5 ಎಕರೆಗಿಂತ ಹೆಚ್ಚಿಗೆ ಜಮೀನುವನ್ನು ನೀವು ಹೊಂದಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದೆ.
  • ಹಾಗೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೂಡ ಸರಕಾರಿ ಕೆಲಸದಲ್ಲಿ ಇದ್ದರೆ ಅಥವಾ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹವರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಲಿದೆ.

ನಿಮ್ಮ ಬಿಪಿಎಲ್ ಕಾರ್ಡ್ ಆದರೆ ಈ ಸೌಲಭ್ಯಗಳು ನಿಮಗೆ ಸಿಗೋಲ್ಲ!

  • ಮೊದಲನೇದಾಗಿ ಗೃಹಲಕ್ಷ್ಮಿ ಯೋಜನೆಯ ₹2000 ಸಾವಿರ ರೂಪಾಯಿ ನಿಮಗೆ ಸಿಗೋಲ್ಲ.
  • ಎರಡನೆಯದಾಗಿ ವೃದ್ಧಾಪ್ಯ ವೇತನವೂ ಕೂಡ ಸಿಗುವುದಿಲ್ಲ.
  • ಅತಿ ಮುಖ್ಯವಾಗಿ ನಿಮಗೆ (ತಿಂಗಳು-ತಿಂಗಳು) ಸಿಗುವ ಪಡಿತರ ಅಂದರೆ ರೇಷನ್ ಕೂಡ ಸಿಗುವುದಿಲ್ಲ.

ರೇಷನ್ ಕಾರ್ಡ್ ರದ್ದಾದರೆ ಏನು ಮಾಡಬೇಕು?

ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದ ತಕ್ಷಣ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟಂತಹ ತಹಶೀಲ್ದಾರ್ ಅವರಿಗೆ ದಾಖಲೆಗಳ ಸಮೇತ ಕಾರ್ಡ್ ರದ್ದಾದ ದಿನದಿಂದ ಹಿಡಿದು 45 ದಿನಗಳ ಒಳಗೆ ಅರ್ಜಿ ನೀಡಿ. ಇಲ್ಲವಾದರೆ ನಿಮ್ಮ ಕಾರ್ಡನ್ನು ಮರು ಸಕ್ರಿಯಗೊಳಿಸಲು ಕಷ್ಟವಾಗಬಹುದು.

ಇದೇ ರೀತಿ ಇನ್ನೂ ಹೆಚ್ಚಿನ ಹೊಸ ಹೊಸ ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ಗೆ ಭೇಟಿ ನೀಡಿ. ಹಾಗೂ ನಮ್ಮ ಟೆಲಿಗ್ರಾಮ್ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ ಕೂಡಲೇ ಜಾಯಿನ್ ಆಗಿ.

Leave a Comment