WhatsApp Float Button

ಮಹಿಳೆಯರಿಗೆ ಗುಡ್ ನ್ಯೂಸ್! ಉದ್ಯೋಗ ಪ್ರಾರಂಭಿಸಲು ಕೇಂದ್ರದಿಂದ ₹1.5 ಲಕ್ಷ ಸಹಾಯಧನ! Udyogini Yojana

ಮಹಿಳೆಯರಿಗೆ ಗುಡ್ ನ್ಯೂಸ್! ಉದ್ಯೋಗ ಪ್ರಾರಂಭಿಸಲು ಕೇಂದ್ರದಿಂದ ₹1.5 ಲಕ್ಷ ಸಹಾಯಧನ! Udyogini Yojana

ಮಹಿಳೆಯರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಆಸೆ ಇರುತ್ತದೆ ಅದೇ ರೀತಿ ಏನಾದರೂ ಒಂದು ಉದ್ಯೋಗವನ್ನು ಮಾಡಿ ನಾವು ಕೂಡ ಸಮಾಜದಲ್ಲಿ ಮುಂಬರಬೇಕು ಎಂಬ ಮಹದಾಕಾಂಕ್ಷೆ ಎಲ್ಲಾ ಮಹಿಳೆಯರ ಮನಸ್ಸಲ್ಲಿ ಇದ್ದೇ ಇರುತ್ತದೆ. ಹೀಗೆ ಆಲೋಚಿಸುವ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಏಕೆಂದರೆ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಇರಬೇಕು?
ಮತ್ತು ಸಹಾಯಧನ ಎಷ್ಟು ಸಿಗಲಿದೆ? ಹಾಗೂ ಅಜ್ಜಿ ಹೇಗೆ ಸಲ್ಲಿಸುವುದು? ಈ ಎಲ್ಲಾ ವಿವರಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ ಸ್ನೇಹಿತರೆ ಹಾಗೂ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕಡ್ಡಾಯವಾಗಿ ನಮ್ಮ ಭಾರತದ ಖಾಯಂ ನಿವಾಸಿಗಳಾಗಿರಬೇಕು.
  • ಅದೇ ರೀತಿ ಅರ್ಜಿ ಸಲ್ಲಿಸುವಂತಹ ಅರ್ಹ ಮಹಿಳೆಯರಿಗೆ ಕನಿಷ್ಠ ವರ್ಷ 18 ರಿಂದ ಹಿಡಿದು ಗರಿಷ್ಠ ವರ್ಷ 55 ವರ್ಷದ ಒಳಗಿನ ಎಲ್ಲಾ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವಂತಹ ಮಹಿಳೆಯರ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಅವರ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು.
  • ಅದೇ ರೀತಿ ಅರ್ಜಿ ಸಲ್ಲಿಸುವಂತಹ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ವಿಧವೆಯರಿಗೆ ಹಾಗೂ ಅಂಗವಿಕಲತೆಯುಳ್ಳ ಮಹಿಳೆಯರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಕಡ್ಡಾಯವಾಗಿ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.

  • ಆಧಾರ್ ಕಾರ್ಡ್
  • ವೋಟರ್ ಐಡಿ (Voter ID)
  • ಪಾಸ್ಪೋರ್ಟ್ ಸೈಜ್ ಫೋಟೋ (Photo)
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್

ನೀವು ಮಾಡುವ ಉದ್ಯೋಗದ ಸಂಪೂರ್ಣ ವಿವರ ಹೊಂದಿರುವ ರಿಪೋರ್ಟ್ ಸಲ್ಲಿಸಬೇಕು!

  • ನೀವು ಯಾವ ಉದ್ಯೋಗವನ್ನು ಪ್ರಾರಂಭಿಸಬೇಕೆಂದು ಅಂದುಕೊಂಡಿದ್ದೀರಾ ಆ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಇರುವಂತಹ ರಿಪೋರ್ಟನ್ನು ನೀವು ಅರ್ಜಿಯ ಜೊತೆ ಸಲ್ಲಿಕೆ ಮಾಡಬೇಕು.
  • ಅದೇ ರೀತಿ ನೀವು ಮಾಡುತ್ತಿರುವ ಉದ್ಯೋಗಕ್ಕೆ ಯಾವೆಲ್ಲ ಸಲಕರಣೆಗಳು ಬೇಕು ಹಾಗೂ ಮಷೀನ್ ಗಳು ಮತ್ತು ಯಾವಲ್ಲ ಉಪಕರಣಗಳು ಬೇಕು ಮತ್ತು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಬೇಕು.
  • ಟ್ರೈನಿಂಗ್ ಅಥವಾ ನಿಮಗೆ ಆ ಉದ್ಯೋಗದ ಅನುಭವ ಇರುವ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ (Experience Certificate) ಅನ್ನು ಸಲ್ಲಿಸಬೇಕು.

ಸಹಾಯಧನ ಎಷ್ಟು ಸಿಗಲಿದೆ?

ಎಸ್ಸಿ/ಎಸ್‌ಟಿ SC/ST ಮಹಿಳೆಯರಿಗೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ಎಲ್ಲ ಮಹಿಳೆಯರಿಗೆ ಸುಮಾರು: 1 ಲಕ್ಷದಿಂದ 2 ಲಕ್ಷದವರೆಗೆ ಸಹಾಯಧನ ಸಿಗಲಿದೆ.
  • ಇದರಲ್ಲಿ ಸುಮಾರು 50% ಸಬ್ಸಿಡಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.

OBC (ಒಬಿಸಿ) ಅಥವಾ ಸಾಮಾನ್ಯ ವರ್ಗದ ಮಹಿಳೆಯರಿಗೆ:

  • ಸಾಮಾನ್ಯ ವರ್ಗಕ್ಕೆ ಸೇರಿರುವಂತಹ ಮಹಿಳೆಯರಿಗೆ ಸುಮಾರು: 3 ಲಕ್ಷದವರೆಗೆ ಸಹಾಯಧನ ಸಿಗಲಿದೆ.
  • ಇದರಲ್ಲಿ ಸುಮಾರು 50% ನಷ್ಟು ಸಬ್ಸಿಡಿ ಅನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.

ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ಮಹಿಳೆಯರು ಆನ್ಲೈನ್ನಲ್ಲಿಯೇ ನಾವು ಕೆಳಗೆ ತಿಳಿಸಿರುವಂತೆ ಸರಳವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು:

ಮೊದಲನೆಯದಾಗಿ ತಮ್ಮ ಹತ್ತಿರದಲ್ಲಿರುವ(ಗ್ರಾಮ ಒನ್) ಅಥವಾ(ಬೆಂಗಳೂರು ಒನ್) ನಂತಹ ಅಥವಾ ಕಂಪ್ಯೂಟರ್ ಸೆಂಟರ್ ಗೆ / ಯಾವುದೇ ಒಂದು ಸಹಾಯ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಅರ್ಜಿಯನ್ನು “ಸೇವಾ ಸಿಂಧು” ಸರ್ಕಾರದ ಅಧಿಕೃತ ವೆಬ್ಸೈಟ್ನ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಈ ಉದ್ಯೋಗಿನಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾದರೆ ಮಹಿಳೆಯರು ಈ ಒಂದು ಯೋಜನೆ ಅಡಿಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಲು ಸಹಾಯಧನವನ್ನು ಸಬ್ಸಿಡಿ ರೂಪದಲ್ಲಿ ಪಡೆದುಕೊಳ್ಳಬಹುದು ಹಾಗೂ ಕೇಂದ್ರ ಸರ್ಕಾರವು ಸಬ್ಸಿಡಿ ಯೋಜನೆ ಪ್ರಾರಂಭಿಸಿ ಮಹಿಳೆಯರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಏನೇನು ಬೇಕು ಆ ಎಲ್ಲಾ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಅದೇ ರೀತಿ ಈ ಯೋಜನೆಯಲ್ಲಿ ಯಾವೆಲ್ಲ ಮಹಿಳೆಯರು ಅರ್ಜಿಯನ್ನು ಸಲ್ಲಿಸಿ ಲಾಭವನ್ನು ಪಡೆದುಕೊಂಡಿದ್ದರು ಆ ಎಲ್ಲಾ ಮಹಿಳೆಯರು ಕೂಡ ಇನ್ನೊಮ್ಮೆ ಬೇರೆಯವರಿಗೆ ಸಾಲವನ್ನು ಕೊಡುವಷ್ಟು ಉದ್ಯಮದಲ್ಲಿ ಮುಂದೆ ಬಂದು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ ಎಂದು ಇಂದು ಸರ್ಕಾರವು ಉತ್ತಮ ಅಭಿಪ್ರಾಯವನ್ನು ಕೊಟ್ಟಿದೆ.

ಅದೇ ರೀತಿ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿಯಲ್ಲಿ ಸಹಾಯಧನ ದ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಕೇಂದ್ರ ಸರ್ಕಾರದ ಕೆಲವು ನಿಯಮ ಮತ್ತು ಶರತ್ತುಗಳು ಅನ್ವಯ ಅವರು ಸಬ್ಸಿಡಿ ಯೋಜನೆಯ ಸಹಾಯ ಧನವನ್ನು ಪಡೆದುಕೊಳ್ಳಬಹುದು ಆದುದರಿಂದ ಈ ಯೋಜನೆಗೆ ಬೇಕಾಗುವಂತಹ ಎಲ್ಲಾ ದಾಖಲೆಗಳನ್ನು ಮತ್ತು ಇನ್ನು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಕೂಡ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ದೊರೆಯಲಿದೆ.

ಉದ್ಯೋಗಿನಿ ಯೋಜನೆಯ ಒಂದು ರೀತಿಯಲ್ಲಿ ಉದ್ಯೋಗದಿಂದ ನಾವು ಜೀವನದಲ್ಲಿ ಮುಂದೆ ಬರಬೇಕು ಎಂಬ ಮಹತ್ ಆಕಾಂಕ್ಷೆಯನ್ನು ಇಟ್ಟುಕೊಂಡಿರುವಂತಹ ಎಲ್ಲಾ ಮಹಿಳಾ ಫಲಾನುಭವಿಗಳ ಜೀವನವನ್ನು ಬದಲಿಸುವುದಲ್ಲದೆ ಅವರ ಆರ್ಥಿಕ ಪರಿಸ್ಥಿತಿಯನ್ನು ಕೂಡ ಈ ಯೋಜನೆಯ ಸರಿಪಡಿಸಿ ಮಹಿಳೆಯರು ಮುಂಬರುವ ದಿನಗಳಲ್ಲಿ ತಮ್ಮ ಎಲ್ಲಾ ಕಷ್ಟಗಳಿಗೂ ಕೂಡ ತಾವು ನಡೆಸುತ್ತಿರುವ ಉದ್ಯಮದಿಂದ ಬರುವಂತಹ ಲಾಭದಲ್ಲಿ ಅವರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಹುದು.

ಸಾಕಷ್ಟು ಜನ ಮಹಿಳೆಯರು ಈ ಯೋಜನೆಯಿಂದ ಸಾಲದ ರೂಪದಲ್ಲಿ ಮತ್ತು ಸಬ್ಸಿಡಿ ದರದಲ್ಲಿ ಸಾಲವನ್ನು ಪಡೆದುಕೊಂಡು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಆ ಉದ್ಯಮದಲ್ಲಿ ಒಳ್ಳೆಯ ಲಾಭವನ್ನು ಕಂಡುಕೊಂಡು ಇನ್ನು ಅನೇಕ ಜನರಿಗೆ ಮಾದರಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಅದೇ ರೀತಿ ಸಾಕಷ್ಟು ಜನ ಕೆಲಸ ಇಲ್ಲದವರಿಗೆ ಕೆಲಸವನ್ನು ಕೂಡ ನೀಡಿ ಉದ್ಯೋಗವನ್ನು ಕೂಡ ಸೃಷ್ಟಿ ಮಾಡಿದ್ದಾರೆ.

ಇದರ ಬೆನ್ನಲ್ಲೇ ಈ ಉದ್ಯೋಗಿನಿ ಯೋಜನೆ ಮೂಲಕ ಅರ್ಜಿ ಸಲ್ಲಿಸಲು ನಮ್ಮ ಭಾರತದಾದ್ಯಂತ ಮಹಿಳೆಯರಿಗೆ ಅವಕಾಶ ನೀಡಿದ್ದು ಕೇಂದ್ರ ಸರ್ಕಾರದಿಂದ ನೀಡುವ ಸಬ್ಸಿಡಿ ಹಣ ಪಡೆಯಲು ನವ ಭಾರತ ದೇಶದ ಎಲ್ಲ ರಾಜ್ಯಗಳ ಮಹಿಳೆಯರು ಕೂಡ ಈ ಒಂದು ಸಬ್ಸಿಡಿ ಹಣಕ್ಕೆ ಮತ್ತು ಸಾಲಕ್ಕೆ ನಮ್ಮ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇದೇ ರೀತಿ ಇನ್ನೂ ಹೊಸ ಹೊಸ ಯೋಜನೆಗಳ ಬಗ್ಗೆ ಮತ್ತು ತಾಜಾ ಸುದ್ದಿಗಳ ಬಗ್ಗೆ ನಾವು ಪ್ರತಿನಿತ್ಯ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಮಾಹಿತಿಗಳನ್ನು ನಿಮಗಾಗಿ ಹಂಚಿಕೊಳ್ಳುತ್ತೇವೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಬೇಕೆಂದರೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ ಅನ್ನು ಜಾಯಿನ್ ಆಗಿ.

Leave a Comment