WhatsApp Float Button

50% ಸಬ್ಸಿಡಿ ದರದಲ್ಲಿ ನಮ್ಮ ಕರ್ನಾಟಕದ ರೈತರಿಗೆ ಸಿಗಲಿದೆ ಹೊಸ ಟ್ರ್ಯಾಕ್ಟರ್! Kisan Tractor Subsidy

50% ಸಬ್ಸಿಡಿ ದರದಲ್ಲಿ ನಮ್ಮ ಕರ್ನಾಟಕದ ರೈತರಿಗೆ ಸಿಗಲಿದೆ ಹೊಸ ಟ್ರ್ಯಾಕ್ಟರ್! Kisan Tractor Subsidy

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಉತ್ತಮ ಮಾಹಿತಿ ಉಳ್ಳ ಲೇಖನಕ್ಕೆ ತಮ್ಮೆಲ್ಲರಿಗೂ ಕೂಡ ಆದರದ ಸ್ವಾಗತ, ಇಂದು ನಾವು ನಮ್ಮ ಕರ್ನಾಟಕ ರೈತರಿಗೆಲ್ಲರಿಗೂ ಕೂಡ ಒಂದು ಒಳ್ಳೆಯ ಮತ್ತು ಲಾಭದಾಯಕ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಅದೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಎಲ್ಲಾ ರೈತರಿಗೂ ಕೂಡ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಲು ಸಹಾಯಧನವನ್ನು ನೀಡಲು ಹೊರಟಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.

ಸ್ನೇಹಿತರೆ ನಮ್ಮ ದೇಶದಲ್ಲಿ ಕೃಷಿಗೆ ಮೊದಲ ಆದ್ಯತೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಲೇ ಬರುತ್ತವೆ ಆದರೆ ರೈತರಿಗೆ ಆರ್ಥಿಕ ಆ ಭಾವ ಇರುವುದರಿಂದ ಅವರಿಗೆ ಕೃಷಿ ಉಪಕರಣಗಳನ್ನು ಕೊಳ್ಳಲು ಬೇಕಾಗುವ ಎಲ್ಲಾ ಸಲಕರಣೆಗಳನ್ನು ಮತ್ತು ಮಶೀನರಿಗಳನ್ನು ಅಂದರೆ ಟ್ರ್ಯಾಕ್ಟರ್ ಗಳಂತಹ ದೊಡ್ಡ ವಾಹನಗಳು ರೈತರಿಗೆ ಅವರು ಕೃಷಿಯಲ್ಲಿ ಮಾಡುವ ಕೆಲಸಗಳನ್ನು ಅತ್ಯಂತ ಸುಲಭವಾಗಿ ಮಾಡುವಲ್ಲಿ ಸಹಾಯವನ್ನು ಮಾಡುತ್ತವೆ ಆದರೆ ಆರ್ಥಿಕವಾಗಿ ಹಿಂದುಳಿದಿರುವಂತಹ ರೈತರಿಗೆ ಇಂತಹ ಉಪಕರಣಗಳನ್ನು ಮತ್ತು ಉಪಯುಕ್ತ ಸಲಕರಣೆಗಳನ್ನು ಕೊಳ್ಳಲು ಹಣ ಇಲ್ಲದ ಕಾರಣ ರೈತರು ಇನ್ನು ಕೃಷಿಯಲ್ಲಿ ಲಾಭ ತೆಗೆಯುವ ವಿಷಯದಲ್ಲಿ ಹಿಂದೆ ಉಳಿಯುತ್ತಿದ್ದಾರೆ.

ಈಗ ನಾವು ತಿಳಿಸಲು ಹೊರಟಿರುವ ಯೋಜನೆಯ ಸಹಾಯ ಪಡೆದುಕೊಂಡು ನೀವು 50% ಸಬ್ಸಿಡಿ ದರದಲ್ಲಿ ರೈತರು ಟ್ರ್ಯಾಕ್ಟರ್ ಅನ್ನು ಕೊಳ್ಳಬಹುದು. ಈ ಯೋಜನೆಗೆ ರೈತರು ಏನಿಲ್ಲ ಅರ್ಹತೆಗಳನ್ನು ಹೊಂದಿರಬೇಕು? ಮತ್ತು ಯಾವೆಲ್ಲ ದಾಖಲೆಗಳು ಬೇಕು? ಹಾಗೆ ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ರೈತರ ಖಾತೆಗೆ ಸಬ್ಸಿಡಿ ಹೇಗೆ ದೊರೆಯಲಿದೆ? ಇನ್ನು ಹಲವಾರು ಮಾಹಿತಿಗಳನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ನೀಡಲಿದ್ದೇವೆ. ಪೂರ್ತಿಯಾಗಿ ಓದಿರಿ.

ಯಾವ ರೈತರಿಗೆ ಸಿಗಲಿದೆ ಟ್ರ್ಯಾಕ್ಟರ್ ಕೊಳ್ಳಲು 50% ಸಬ್ಸಿಡಿ – ಅರ್ಹತೆಗಳು ಏನು?

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ರೈತರು ಈ ಕೆಳಗಿನ ಅರ್ಹತೆಗಳನ್ನು ಹೊಂದಿದ್ದಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

  • ಈ ಯೋಜನೆಗೆ ಅರ್ಹರಾಗಲು ಭಾರತದ ಖಾಯಂ ನಿವಾಸಿ ಆಗಿರಬೇಕು ಮತ್ತು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಈ ಯೋಜನೆಗೆ ಕರ್ನಾಟಕದ ರೈತರು ಮಾತ್ರ ಅರ್ಹರಾಗಿರುತ್ತಾರೆ.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರ ಬಳಿ 1 ಅಥವಾ ಎರಡು 2 ಜಮೀನು ಇರಬೇಕು.
  • ಅದೇ ರೀತಿ ರೈತರ ಕುಟುಂಬದ ಆದಾಯವು ವಾರ್ಷಿಕವಾಗಿ ₹3 ಲಕ್ಷ ಕ್ಕಿಂತ ಕಡಿಮೆ ಇರಬೇಕು. ಅಂತಹ ರೈತರು ಅರ್ಜಿ ಸಲ್ಲಿಸಬಹುದು.
  • ಬಡ ಕುಟುಂಬದ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮೊದಲಾದ್ಯತೆ ಸಿಗಲಿದೆ.
  • ಈ ಹಿಂದೆ ಯಾವುದೇ ರೀತಿಯ ಟ್ರ್ಯಾಕ್ಟರ್ ಕೊಳ್ಳಲು ಸಬ್ಸಿಡಿಯನ್ನು ರೈತರು ಪಡೆದುಕೊಂಡಿರಬಾರದು.
  • ಒಂದು ಕುಟುಂಬಕ್ಕೆ ಕೇವಲ ಒಂದು ಟ್ರ್ಯಾಕ್ಟರ್ ಗೆ ಮಾತ್ರ ಸಬ್ಸಿಡಿ ಸಿಗಲಿದೆ.
  • ವಿಶೇಷವಾಗಿ ಎಸ್ಸಿ /ಎಸ್ಟಿ (SC/ST) ವರ್ಗಕ್ಕೆ ಸೇರಿದ ಮಹಿಳಾ ರೈತರಿಗೆ ಮೊದಲ ಆದ್ಯತೆ ಸಿಗಲಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಏನು?

ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ರೈತರು ಕೃಷಿ ಯಂತ್ರೋಪಕರಣಗಳನ್ನು ಕೊಳ್ಳಲು ಉತ್ತೇಜಿಸುವುದು. ರೈತರು ಕೃಷಿಗೆ ನೀಡುತ್ತಿರುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡಿ ಅವರು ಕೃಷಿಯಲ್ಲಿ ಇನ್ನು ಹೆಚ್ಚು ಲಾಭವನ್ನು ಪಡೆಯುವ ಉದ್ದೇಶವು ಕೂಡ ಆಗಿದೆ. ಇನ್ನೊಂದು ಮುಖ್ಯ ಉದ್ದೇಶವೇನೆಂದರೆ ರೈತರು ಈ ಯೋಜನೆಯನ್ನು ಬಳಸಿಕೊಂಡು ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಿ ಅವರ ಕೆಲಸವನ್ನು ಕೃಷಿಯಲ್ಲಿ ಹೆಚ್ಚಿಸುವುದು.

ರೈತರಿಗೆ ಎಷ್ಟು ಸಬ್ಸಿಡಿ ಸಿಗಲಿದೆ?

  • ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ ಶೇಕಡ 35% ಅಂದರೆ 1.5 ಲಕ್ಷ ಸಬ್ಸಿಡಿ ಸಿಗಲಿದೆ.
  • SC/ST ವರ್ಗದ ಮಹಿಳಾ ರೈತರಿಗೆ ಶೇಕಡ 50% ಅಂದರೆ ಸುಮಾರು ₹2 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ.
  • ರೈತರು ಸುಮಾರು 8HP ಇಂದ ಹಿಡಿದು 90HP ವರೆಗೆ ಟ್ರ್ಯಾಕ್ಟರ್ ಗಳನ್ನು ಖರೀದಿಸಬಹುದು.

ಸಬ್ಸಿಡಿ ಹಣದ ಲೆಕ್ಕ ನೋಡಿ:

  • ನೀವೀಗ ಸುಮಾರು ₹10 ಲಕ್ಷದ ಟ್ರ್ಯಾಕ್ಟರ್ ಅನ್ನು ಕರಿ ಮಾಡಿದ್ದೀರಾ. SC/ST ವರ್ಗದ ಮಹಿಳಾ ರೈತರಿಗೆ ಸುಮಾರು 5 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ.
  • ಹಾಗೂ ಸಾಮಾನ್ಯ ವರ್ಗದ ರೈತರಿಗೆ ಸುಮಾರು ₹3.5 ಲಕ್ಷ ಸಬ್ಸಿಡಿ ಸಿಗಲಿದೆ.
  • ಅಂದರೆ ರೈತರು ಇಲ್ಲಿ ಕೇವಲ ₹5 ಲಕ್ಷದಿಂದ ಹಿಡಿದು ₹6.5 ಲಕ್ಷದವರೆಗೆ ಮಾತ್ರ ಹಣವನ್ನ ಪಾವತಿ ಮಾಡಿದರೆ ಹೊಸ ಟ್ರಾಕ್ಟರ್ ಅನ್ನು ಅವರು ಪಡೆದುಕೊಳ್ಳಬಹುದು.

ಬೇಕಾಗುವ ಅಗತ್ಯ ದಾಖಲೆಗಳು:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಪಹಣಿ / RTC (ಜಮೀನಿನ ದಾಖಲೆ)
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • 2 ಭಾವಚಿತ್ರ (Photo)
  • ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು)
  • ಟ್ರ್ಯಾಕ್ಟರ್ ಖರೀದಿಸುವ ಕಂಪನಿಯಿಂದ ಬೇಕಾಗುವ ದಾಖಲೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: https://kkisan.karnataka.gov.in
  • ಈಗ ಅಲ್ಲಿ ನೀವು (Farm Mechanisation Application Registration) ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
  • ಈಗ ಇಲ್ಲಿ ನಿಮ್ಮ ಫಾರ್ಮರ್ ಐಡಿಯನ್ನು (Farmer ID) ನಮೂದಿಸಿ ಮತ್ತು ಗೆಟ್ ಡೀಟೇಲ್ಸ್ (Get Details) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಇದಾದ ಮೇಲೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ OTP ಪಡೆಯುವ ಮೂಲಕ ಈ ಕೆವೈಸಿಯನ್ನು ಅಲ್ಲಿ ಪೂರ್ಣಗೊಳಿಸಿ.
  • ಈಗ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಭೂಮಿಯ ವಿವರವನ್ನು ಹಾಗೂ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
  • ಈಗ “Apply for Subsidy” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
  • ಈಗ ನೀವು ಖರೀದಿಸಲು ಇಷ್ಟಪಡುವ ಟ್ರ್ಯಾಕ್ಟರ್ ಮಾದರಿ ಅಂದ್ರೆ ಎಷ್ಟು ಹೆಚ್ ಪಿ HP ಟ್ರ್ಯಾಕ್ಟರ್ ನಿಮಗೆ ಬೇಕು, ಹಾಗೂ ಡೀಲರ್ ಹೆಸರನ್ನು ಮತ್ತು ಟ್ರ್ಯಾಕ್ಟರ್ ಬೆಲೆಯನ್ನು ನಮೂದಿಸಿ.
  • ಈಗ ಅಲ್ಲಿ ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ನೀವು ಪಿಡಿಎಫ್ (PDF) ರೂಪದಲ್ಲಿ ಅಪ್ಲೋಡ್ ಮಾಡಿಕೊಳ್ಳಿ.
  • ಈಗ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ಬಂದಿರುವಂತಹ Acknowledgement ಅನ್ನು ಪ್ರಿಂಟ್ ತೆಗೆದುಕೊಳ್ಳಿ.

Offline ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ಮೊದಲನೆಯದಾಗಿ ನೀವು ಯಾವುದಾದರೂ ಒಂದು ಸಹಾಯ ಕೇಂದ್ರಗಳಿಗೆ ತೆರಳಿ ಅಥವಾ ಸೈಬರ್ ಸೆಂಟರ್ಗೆ ತೆರಳಿ. ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ. ಇದಿಷ್ಟು ಸಾಧ್ಯವಾಗದೆ ಇದ್ದಲ್ಲಿ ನೀವು ನಿಮ್ಮ ತಾಲೂಕಿನ ಕೃಷಿ ಇಲಾಖೆ ಕಚೇರಿಗೆ ತೆರಳಿ ಈ ಯೋಜನೆಗೆ ನೀವು ನಿಮ್ಮ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.

ರೈತರಿಗೆ ಸಬ್ಸಿಡಿ ಹೇಗೆ ದೊರೆಯಲಿದೆ?

  • ನೀವು ಸಲ್ಲಿಸಿರುವ ಅಂತಹ ಎಲ್ಲಾ ದಾಖಲೆಗಳನ್ನು ಮತ್ತು ನಿಮ್ಮ ಅರ್ಜಿಯನ್ನು ಇಲಾಖೆಯು ಪರಿಶೀಲಿಸಿದ ನಂತರ ಆಯ್ಕೆಯಾದ ಅರ್ಹ ರೈತರಿಗೆ SMS ಮೂಲಕ ಸಂದೇಶ ಬರುತ್ತದೆ.
  • ಆಯ್ಕೆಯಾದ ರೈತರು ತಾವು ಖರೀದಿಸಲು ಇಷ್ಟಪಡುವ ಟ್ರ್ಯಾಕ್ಟರ್ ಅನ್ನು 30 ದಿನಗಳ ಒಳಗೆ ಖರೀದಿಸತಕ್ಕದ್ದು.
  • ಟ್ರ್ಯಾಕ್ಟರ್ ಖರೀದಿಸಿದ ಬಿಲ್ಲನ್ನು ಮತ್ತು ಜಿಯೋ ಟ್ಯಾಗ್ಡ್ (Geo Tagged) ಫೋಟೋವನ್ನು ನೀವು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು.
  • ಇದಾದ ನಂತರ ಇಲಾಖೆಯು ನೀವು ಕಳಿಸಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ನಂತರ ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

Leave a Comment