WhatsApp Float Button

ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ರೂ. ಸ್ಕಾಲರ್ ಶಿಪ್! ಕೂಡಲೆ ಅರ್ಜಿ ಸಲ್ಲಿಸಿ! HDFC Scholarship 2025

ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ರೂ. ಸ್ಕಾಲರ್ ಶಿಪ್! ಕೂಡಲೆ ಅರ್ಜಿ ಸಲ್ಲಿಸಿ! HDFC Scholarship 2025

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಉಪಯೋಗವಾಗುವಂತಹ ಒಂದು ಸ್ಕಾಲರ್ಶಿಪ್ ಬಗ್ಗೆ ತಿಳಿಸಲು ಹೊರಟಿದ್ದೇವೆ. ಸ್ನೇಹಿತರೆ ಶಿಕ್ಷಣವೆಂದರೆ ಅದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾದದಲ್ಲ ಶಿಕ್ಷಣಕ್ಕೆ ಇರುವ ಮಹತ್ವ ಇವೆಂದರೆ ಅದು ಒಂದು ಕುಟುಂಬದ ಸದಸ್ಯರ ಜೀವನವನ್ನೇ ಬದಲಾಯಿಸುವ ಬೆಳಕಾಗಿದೆ, ಆದರೆ ಈಗಿನ ಕಾಲದಲ್ಲಿ ಶಿಕ್ಷಣವನ್ನು ಪಡೆಯಲು ಸಾಕಷ್ಟು ಬಡ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.

ಇಂತಹ ಬಡ ಮತ್ತು ಸಣ್ಣ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ನಮ್ಮ ದೇಶದ ಒಂದು ಪ್ರತಿಷ್ಠಿತ ಬ್ಯಾಂಕ್ ಆಗಿರುವ ಹೆಚ್ ಡಿ ಎಫ್ ಸಿ (HDFC) ಬ್ಯಾಂಕ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲು ಮತ್ತು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಹೊರಟಿದೆ. ಅದೇ ರೀತಿ ಅವರ ಶಿಕ್ಷಣಕ್ಕೂ ಕೂಡ ಈ ಸ್ಕಾಲರ್ಶಿಪ್ ನ ಮೂಲಕ ನೆರವು ನೀಡಲು ಹೊರಟಿದೆ. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ವಿದ್ಯಾರ್ಥಿಗಳು ಅರ್ಹರು? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಎಲ್ಲ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಸಂಪೂರ್ಣವಾಗಿ ಓದಿ ಮತ್ತು ಮಾಹಿತಿಯನ್ನು ತಿಳಿದುಕೊಳ್ಳಿ.

ಇದೇ ರೀತಿ ನಿಮಗೆ ಬೇಕಾಗುವಂತಹ ಎಲ್ಲಾ ಹೊಸ ಹೊಸ ಮಾಹಿತಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನ ಪ್ರಕಟಿಸುತ್ತೇವೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಅನ್ನು ಜಾಯಿನ್ ಆಗಿ.

ಈ ವಿದ್ಯಾರ್ಥಿ ವೇತನದ ಉದ್ದೇಶವೇನು?

ಈ ವಿದ್ಯಾರ್ಥಿ ವೇತನವು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳ ಬಾಳಿನ ಬೆಳಕಾಗಿದೆ ಮತ್ತು ಅವರ ಶಿಕ್ಷಣಕ್ಕೆ ಆರ್ಥಿಕವಾಗಿ ನೆರವಾಗಿದೆ. ಈ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವೆಂದರೆ “ಆರ್ಥಿಕ ಬಿಕ್ಕಟ್ಟಿನಿಂದ ಮತ್ತು ಕುಟುಂಬದ ಸಮಸ್ಯೆಗಳಿಂದ ಶಿಕ್ಷಣ ಎಂದಿಗೂ ಕೂಡ ನಿಲ್ಲಬಾರದು”. ಈ ಒಂದು ಘೋಷವಾಕ್ಯದಿಂದ ಈ ಸ್ಕಾಲರ್ಶಿಪ್ ಎಲ್ಲ ಬಡ ಮತ್ತು ಸಣ್ಣ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ನೆರವಾಗಲು ಹೊರಟಿದೆ.

HDFC ವಿದ್ಯಾರ್ಥಿ ವೇತನ ಎಂದರೆ ಏನು?

HDFC ವಿದ್ಯಾರ್ಥಿ ವೇತನವು ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕವಾಗಿ ಬೆನ್ನೆಲುಬಾಗುವ ಒಂದು ದೊಡ್ಡ ಶಕ್ತಿಯೇ ಸರಿ. ಏಕೆಂದರೆ ಆರ್ಥಿಕ ಪರಿಸ್ಥಿತಿಯಿಂದ ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವು ಅವರ ಬಾಳಲ್ಲಿ ಆಗಿರುವಂತಹ ಅನಿರೀಕ್ಷಿತ ಘಟನೆಗಳಿಂದ ಹಾಗೂ ಆರ್ಥಿಕ ಬಿಕ್ಕಟ್ಟುಗಳಿಂದ ಮತ್ತು ವೈದ್ಯಕೀಯ ಸಮಸ್ಯೆಗಳಿಂದ ತಮ್ಮ ಶಿಕ್ಷಣವನ್ನು ವಿದ್ಯಾರ್ಥಿಗಳು ಬಿಡಬಾರದೆಂದು ಆರ್ಥಿಕವಾಗಿ ಅವರಿಗೆ ನೆರವಾಗಿ ಅವರ ಶಿಕ್ಷಣವನ್ನು ಅವರು ಮುಂದುವರಿಸುವಲ್ಲಿ ದೊಡ್ಡ ರೀತಿಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವ ಒಂದು ವಿದ್ಯಾರ್ಥಿ ವೇತನವಾಗಿದೆ.

ಯಾರಿಗೆಲ್ಲ ಈ ವಿದ್ಯಾರ್ಥಿ ವೇತನ ನೆರವಾಗಲಿದೆ?

ಈ ಹೆಚ್ ಪಿ ಎಸ್ ಸಿ ಪರಿವರ್ತನ್ ಸ್ಕಾಲರ್ಶಿಪ್(ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜಿನಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳವರೆಗೂ) ಕೂಡ ಹಾಗೂ (ಪದವಿ ಮುಗಿಸಿ ಪಿಜಿ ಅಂದರೆ ಪೋಸ್ಟ್ ಗ್ರಾಜುಯೇಷನ್ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ) ಮತ್ತು ವೃತ್ತಿಪರ ಕೋರ್ಸ್ ಗಳನ್ನು ತೆಗೆದುಕೊಂಡು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಈ ಸ್ಕಾಲರ್ಶಿಪ್ ಹಾರ್ದಿಕವಾಗಿ ನೆರವಾಗಲಿದೆ.

ಇದರಿಂದ ಎಷ್ಟು ಸಹಾಯಧನ ಸಿಗಲಿದೆ?

HDFC ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಈ ಬಾರಿ ಎಷ್ಟು ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ:

ವಿದ್ಯಾರ್ಥಿಗಳಿಗೆ ಸುಮಾರು ₹15,000 ರೂಪಾಯಿಗಳಿಂದ ಹಿಡಿದು ₹75,000 ರುಪಾಯಿಗಳ ತನಕ ಈ ವಿದ್ಯಾರ್ಥಿ ವೇತನ ಸಿಗಲಿದೆ.
ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ತರಗತಿ ಹಾಗೂ ಅವರ ಟ್ಯೂಷನ್ ಪ್ಲೀಸ್ ಮತ್ತು ಅವರ ಫೋರ್ಸ್ಗಳ ಆಧಾರದ ಮೇಲೆ ಹಾಗೂ ಅವರ ಆರ್ಥಿಕ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರ ಈ ವಿದ್ಯಾರ್ಥಿ ವೇತನವನ್ನು ಅವರಿಗೆ ನೀಡಲಾಗುತ್ತದೆ.

ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು ಏನು?

  • ಕುಟುಂಬದಲ್ಲಿ ಆರ್ಥಿಕವಾಗಿ ಬಹಳ ಸಮಸ್ಯೆ ಇರುವ ವಿದ್ಯಾರ್ಥಿಗಳು.
  • ವಿದ್ಯಾರ್ಥಿಗಳ ಮನೆಯಲ್ಲಿ ಮುಖ್ಯಸ್ಥರ ಉದ್ಯೋಗವು ನಷ್ಟವಾಗಿದ್ದಾರೆ.
  • ಕುಟುಂಬದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ.
  • ವಿದ್ಯಾರ್ಥಿಗಳು ಕುಟುಂಬದಲ್ಲಿ ಅಪಘಾತ ಸಂಭವಿಸಿದ್ದಾರೆ.
  • ಅವರ ಕುಟುಂಬದಲ್ಲಿ ಸಾವಿನ ಸಂಕಷ್ಟವಿದ್ದರೆ.

ಇಂತಹ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅವರ ಅರ್ಜಿಗಳನ್ನು ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ:

ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ಯಾವುದಾದರೂ ಒಂದು ಶಾಲೆಯಲ್ಲಿ ಅಥವಾ ಕಾಲೇಜುಗಳಲ್ಲಿ ಓದುತ್ತಿರಬೇಕು.
ವಿದ್ಯಾರ್ಥಿಗಳು ಅವರ ಹಿಂದಿನ ತರಗತಿಯಲ್ಲಿ 50% ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.

ಆದಾಯದ ಅರ್ಹತೆ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು ಯಾವುದು?

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ (ಭಾವಚಿತ್ರ)
  • ಬ್ಯಾಂಕ್ ಪಾಸ್ ಬುಕ್
  • ಶುಲ್ಕದ ಪಾವತಿಸಿರುವ ರಶೀದಿ
  • ಸಂಕಷ್ಟ/ಆಸ್ಪತ್ರೆ/ಅಪಘಾತದ ದಾಖಲೆಗಳು
  • ಆದಾಯ ಪ್ರಮಾಣ ಪತ್ರ
  • ಅವರ ಹಿಂದಿನ ವರ್ಷದ ಅಂಕಪಟ್ಟಿ

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು “HDFC ಪರಿವರ್ತನ್ ಸ್ಕಾಲರ್ಶಿಪ್” ವೆಬ್ಸೈಟ್ ಅನ್ನು ತೆರೆಯಿರಿ.
  • ನಂತರ ಅಲ್ಲಿ ಕಾಣುವ “Apply Now” ಆಯ್ಕೆಯನ್ನು ಕ್ಲಿಕ್ ಮಾಡಿ.
  • ಈಗ ಅಲ್ಲಿ ನಿಮಗೆ ಕೇಳಿದಾ ಎಲ್ಲಾ ನಿಮ್ಮ ಮುಖ್ಯ ಮಾಹಿತಿಗಳನ್ನು ಭರ್ತಿ ಮಾಡಿ.
  • ಇದಾದ ಮೇಲೆ ಅಲ್ಲಿ ನಿಮಗೆ ಕೇಳಲಾದ ಎಲ್ಲಾ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಹಾಗೂ ಅಲ್ಲಿ ನಿಮ್ಮ ಅರ್ಜಿಯ ಪುಟವನ್ನು ಪ್ರಿಂಟ್ ತೆಗೆದುಕೊಳ್ಳಿ.

ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ 30 ರಿಂದ 60 ದಿನಗಳ ಒಳಗೆ ಪ್ರಕ್ರಿಯೆಯು ಶುರುವಾಗುತ್ತದೆ.

ಆಯ್ಕೆ ಮಾಡುವ ವಿಧಾನ:

ನಿಮ್ಮ ಕುಟುಂಬದ ಸಮಸ್ಯೆಯ ಬಗ್ಗೆ ಮತ್ತು ಸಂಕಷ್ಟದ ಬಗ್ಗೆ ಪರಿಶೀಲನೆ ನಡೆಸಿ ಹಾಗೂ ನಿಮ್ಮ ಅಕಾಡೆಮಿಕ್ ಸಾಧನೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ವಾರ್ಷಿಕ ಆದಾಯವನ್ನು ಗಮನಿಸಿ. ಇದಾದ ಮೇಲೆ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ನಂತರ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ನಿಮ್ಮ ಮನೆಯಲ್ಲಿ ತುಂಬಾ ಕಷ್ಟಗಳಿದ್ದರೆ ಮತ್ತು ಸಂಕಷ್ಟಗಳು ಇದ್ದರೆ ಅಂತಹ ಸಂದರ್ಭದಲ್ಲಿ ನಿಮಗೆ ಆರ್ಥಿಕ ಸಹಾಯ ಬೇಕಾದಲ್ಲಿ ಈ ಒಂದು ಸ್ಕಾಲರ್ಶಿಪ್ ಗೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು

Leave a Comment