WhatsApp Float Button

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ!

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ!

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಸರ್ಕಾರವು ಪಶುಪಾಲಣ್ಣ ಇಲಾಖೆಯ ಜೊತೆಗೂಡಿ ರೈತ ಮಹಿಳೆಯರಿಲ್ಲರ್ಗೂ ಕೂಡ ಉಚಿತ ನಾಟಿ ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಲು ಮಹತ್ತರ ಯೋಜನೆಯನ್ನು ಒಂದು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಯಾರೆಲ್ಲಾ ರೈತ ಕುಟುಂಬದಲ್ಲಿರುವ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲು ಸರ್ಕಾರವು ಮುಂದಾಗಿದೆ. ನಮ್ಮ ದೇಶದಲ್ಲಿ ನಾಟಿ ಕೋಳಿಗಳ ಬೇಡಿಕೆಯು ಬರ ಬರುತ್ತಾ ಹೆಚ್ಚಾಗುತ್ತಾ ಹೋಗುತ್ತಿದೆ. ಹೀಗಾಗಿ ಇದರ ಬೇಡಿಕೆ ಕಡಿಮೆ ಆಗದೆ ಇರುವ ಕಾರಣ ಇದರಲ್ಲಿ ಲಾಭವು ಕೂಡ ಹೆಚ್ಚಿದ್ದು ರೈತ ಕುಟುಂಬದಲ್ಲಿರುವ ಮಹಿಳೆಯರಿಗೆ ಇದು ಲಾಭದಾಯಕ ಬಿಸಿನೆಸ್ ಆಗಲಿದೆ ಎಂಬ ಕಾರಣಕ್ಕೆ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶವೇನು?

ಸರ್ಕಾರದ ವತಿಯಿಂದ ಜಾರಿಗೊಳಿಸಲಾಗಿರುವ ಈ ಒಂದು ನಾಟಿ ಕೋಳಿ ಮರಿಗಳನ್ನು ಸಾಕುವ ಯೋಜನೆಯ ಮುಖ್ಯ ಉದ್ದೇಶಗಳನ್ನು ಈ ಕೆಳಗಿನ ನೀಡಲಾಗಿದೆ ನೋಡಿ:

  • ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಎಲ್ಲಾ ರೈತ ಮಹಿಳೆಯರಿಗೆ ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿ ಅವರನ್ನು ಸ್ವಾವಲಂಬಿಗಳಾಗಿ ಮಾಡುವುದು.
  • ಅದೇ ರೀತಿ ಅವರು ಸಣ್ಣ ಉದ್ಯಮದಲ್ಲಿ ಖರ್ಚು ವೆಚ್ಚಗಳು ಕಡಿಮೆ ಇರುವ ಕಾರಣ ಹೆಚ್ಚಿನ ಆದಾಯವನ್ನು ಪಡೆದು ಆರ್ಥಿಕವಾಗಿ ಅವರನ್ನು ಸದೃಢಗೊಳಿಸುವುದು.

ಗ್ರಾಮೀಣ ಭಾಗದ ಮಹಿಳೆಯರಿಗೆ ನಾಟಿ ಕೋಳಿ ಸಾಕಾಣಿಕೆ ಒಂದು ಉತ್ತಮ ಆಯ್ಕೆ!

ಕೇವಲ ಕೃಷಿ ಮಾಡುವುದರಿಂದ ಈಗಿನ ಕಾಲದಲ್ಲಿ ಹೆಚ್ಚಾಗಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಏಕೆಂದರೆ ಬೆಳೆ ಹಾನಿ, ಬೆಳೆ ಸರಿಯಾದ ಬೆಲೆ ಸಿಗದೆ ಇರುವುದು, ಹವಾಮಾನದಲ್ಲಿ ಅಸ್ಥಿರತೆ ಉಂಟಾಗಿ ಬೆಳೆ ಹಾನಿಯಾಗುವುದು. ಹೀಗೆ ಹಲವು ರೀತಿಗಳಲ್ಲಿ ಕೃಷಿಯು ರೈತರಿಗೆ ಆರ್ಥಿಕವಾಗಿ ನಷ್ಟವನ್ನು ಉಂಟು ಮಾಡಬಹುದು. ಹೀಗಾಗಿ ಕೃಷಿಯ ಜೊತೆಗೆ ಬೆಂಬಲವಾಗಿ ಬೇರೆ ಉದ್ಯವಮ್ಮವನ್ನು ಕೂಡ ರೈತರು ಮಾಡುವುದು ಉತ್ತಮ. ಇದರಲ್ಲಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಕೂಡ ಒಂದು ಒಳ್ಳೆಯ ಉದ್ಯಮವಾಗಿದ್ದು. ಇವುಗಳ ಕಡೆ ಕೂಡ ಗಮನಕೊಟ್ಟು ಪ್ರಾರಂಭಿಸುವುದರಿಂದ ರೈತರು ಒಳ್ಳೆಯ ಆದಾಯವನ್ನು ನಿರೀಕ್ಷಿಸಬಹುದು.

ನಾಟಿ ಕೋಳಿ ಸಾಕಾಣಿಕೆಯು ಕೂಡ ಒಳ್ಳೆಯ ಆಯ್ಕೆ!

  • ಇದರಿಂದ ನಿರಂತರ ಆದಾಯವನ್ನು ಪಡೆಯಬಹುದು.
  • ಇದರಲ್ಲಿ ಕೆಲಸವೂ ಕೂಡ ಕಡಿಮೆ ಇದ್ದು ನಷ್ಟ ಮತ್ತು ಅಪಾಯವು ಕೂಡ ಕಡಿಮೆ ಇರುತ್ತದೆ.
  • ಇದರಲ್ಲಿ ಖರ್ಚು ವೆಚ್ಚವು ಕೂಡ ಮತ್ತು ಹೂಡಿಕೆಯು ಕೂಡ ಕಡಿಮೆ ಇರುತ್ತದೆ.

ಇನ್ನು ವಿಶೇಷವೆಂದರೆ ನಾಟಿ ಕೋಳಿಗಳಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಿದ್ದು ಅವುಗಳಿಗೆ ಅಷ್ಟಾಗಿ ರೋಗಗಳು ಬರುವುದಿಲ್ಲ. ಮತ್ತು ಅವುಗಳಿಗೆ ಹಾರೈಕೆಯೂ ಕೂಡ ಅಷ್ಟಾಗಿ ಬೇಕಾಗಿಲ್ಲ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ನಾಟಿ ಕೋಳಿಗಳು ಅತ್ಯಂತ ಚೆನ್ನಾಗಿ ಬೆಳೆಯುತ್ತವೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ನಮ್ಮ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಕೆಳಗೆ ತಿಳಿಸಲಾಗಿದೆ:

  • ಈ ಯೋಜನೆಗೆ ರಾಜ್ಯದ ಎಲ್ಲಾ ವರ್ಗಗಳ ರೈತ ಮಹಿಳೆಯರು ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  • ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯು ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಅರ್ಜಿ ಸಲ್ಲಿಸುವ ರೈತ ಮಹಿಳಾ ಅಭ್ಯರ್ಥಿಗಳು ಕೃಷಿ ಅಥವಾ ರೈತ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ತೊಡಗಿರಬೇಕು.
  • ಈ ಹಿಂದೆ ಈ ಯೋಜನೆಯ ಮೂಲಕ ಲಾಭವನ್ನು ಪಡೆದ ಮಹಿಳೆಯರು ತಮ್ಮ ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸುವಂತಿಲ್ಲ.
  • ಅರ್ಜಿ ಸಲ್ಲಿಸುವ ಮಹಿಳಾ ಫಲಾನುಭವಿ ಕಡ್ಡಾಯವಾಗಿ ತಮ್ಮ ಬಳಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವಂತಹ ಮಹಿಳೆಯರು ತಮ್ಮ ಅರ್ಜಿಯನ್ನು ಕೂಡಲೇ ಈ ಯೋಜನೆ ಅಡಿಯಲ್ಲಿ ಸಲ್ಲಿಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಕೆಳಗೆ ಸಂಪೂರ್ಣ ವಿವರಗಳ ಸಮೇತ ನೀಡಲಾಗಿದೆ ವೀಕ್ಷಿಸಿ:

  • ಮೊದಲು ನಿಮ್ಮ ತಾಲೂಕಿನಲ್ಲಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಕಚೇರಿಗೆ ಭೇಟಿ ನೀಡಿ.
  • ನಂತರ ಆ ಕಚೇರಿಯಲ್ಲಿ ಈ ಯೋಜನೆಗೆ ಅರ್ಜಿಯನ್ನು ಪಡೆದುಕೊಂಡು ಆರ್ಜಿಯಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ಮತ್ತು ನಿಮ್ಮ ಎಲ್ಲ ದಾಖಲೆಗಳೊಂದಿಗೆ ಆರ್ಜಿಯನ್ನು ಅಲ್ಲಿನ ಮುಖ್ಯಸ್ಥರಿಗೆ ಸಲ್ಲಿಸಿ.
  • ನೀವು ಸಲ್ಲಿಸಲಾದ ಅರ್ಜಿಯನ್ನು ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ನಿಮಗೆ ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು?

ಅರ್ಜಿ ಸಲ್ಲಿಸುವ ಎಲ್ಲಾ ಮಹಿಳಾ ಅಭ್ಯರ್ಥಿಗಳ ಬಳಿ ಈ ಕೆಳಗಿನದ ಕಲೆಗಳು ಕಡ್ಡಾಯವಾಗಿ ಇರಬೇಕು:

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ (ಫೋಟೋ)
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ
  • ಮೊಬೈಲ್ ನಂಬರ್
  • ವಿಳಾಸ ಪುರಾವೆ

ಎಲ್ಲ ದಾಖಲೆಗಳನ್ನು ಹೊಂದಿರುವಂತಹ ಮಹಿಳೆಯರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ನಾಟಿ ಕೋಳಿ ಸಾಕಾಣಿಕೆಯಿಂದ ಆಗುವಂತಹ ಪ್ರಮುಖ ಲಾಭಗಳು ಮತ್ತು ಉಪಯೋಗಗಳು!

  • ನಾಟಿ ಕೋಳಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಅತಿ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಸಾಕಬಹುದು. ಹಾಗೆ 3 ರಿಂದ 4 ತಿಂಗಳ ಒಳಗೆ ಬೆಳೆಸಿ ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ನೀವು ಹೆಚ್ಚಿನ ಲಾಭವನ್ನು ತಕ್ಷಣ ನಿರೀಕ್ಷಿಸಬಹುದು.
  • ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ನಾಟಿ ಕೋಳಿಯ ಮಾಂಸಕ್ಕೆ ಮತ್ತು ಮೊಟ್ಟೆಗಳಿಗೆ ಹೆಚ್ಚು ಬೆಲೆ ಇದೆ ಹಾಗೆ ಬೇಡಿಕೆಯು ಕೂಡ ಇದೆ. ನಾಟಿ ಕೋಳಿ ಮಾಂಸಕ್ಕೆ ಮೊಟ್ಟೆಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಕಾರಣ ಲಾಭದ ಬೆಲೆಗೆ ಮಾರಬಹುದಾಗಿದೆ.
  • ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಮನೆಯಲ್ಲಿ ನಾಟಿ ಕೋಳಿಗಳನ್ನು ಸಾಕಬಹುದು ಬೇರೆ ಕಡೆ ಜಾಗ ಹುಡುಕುವ ಅವಶ್ಯಕತೆ ಇಲ್ಲ. ತಮ್ಮ ಮನೆ ಕೆಲಸದ ಜೊತೆಗೆ ಹಾಗೂ ಕೃಷಿಯ ಜೊತೆಗೆ ಇದನ್ನು ಕೂಡ ಅದೇ ಸುಲಭವಾಗಿ ನಡೆಸಿಕೊಂಡು ಮತ್ತು ನೋಡಿಕೊಂಡು ಹೋಗಬಹುದು.
  • ಮಹಿಳೆಯರಿಗೆ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಮತ್ತು ಅದೇ ರೀತಿ ಸ್ವತಂತ್ರವಾಗಿ ಸ್ವಾವಲಂಬಿಗಳಾಗಲು ಮತ್ತು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಇದು ಸುಲಭವಾದ ಮಾರ್ಗವಾಗಿದೆ.
  • ಇನ್ನು ನಾಟಿ ಕೋಳಿಗಳು ಗ್ರಾಮೀಣ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವ ಕಾರಣ ಇವುಗಳಿಗೆ ಹೆಚ್ಚಿನ ಆರೈಕೆ ಬೇಕಾಗಿಲ್ಲ ಮತ್ತು ರೋಗ ನಿರೋಧಕ ಶಕ್ತಿಗಳು ಕೂಡ ಹೆಚ್ಚಾಗಿ ಇರುತ್ತದೆ ಹಾಗಾಗಿ ಕಾಯಿಲೆಯೂ ಕೂಡ ಹೆಚ್ಚಾಗಿ ಬರುವುದಿಲ್ಲ.

ಕೇವಲ ಮಹಿಳೆಯರಿಗೆ ಏಕೆ ಅವಕಾಶ ನೀಡಲಾಗಿದೆ?

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿರುವ ಎಲ್ಲಾ ರೈತ ಮಹಿಳೆಯರಿಗೆ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ದೇಶದ ಆರ್ಥಿಕತೆಗೆ ಮತ್ತು ದೇಶದ ಬೆನ್ನೆಲುಬಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಮತ್ತು ಅವರು ತಮ್ಮ ಕುಟುಂಬವನ್ನು ತಮ್ಮದೇ ಆದಾಯದಲ್ಲಿ ನಡೆಸಬೇಕು ಮತ್ತು ಸದೃಢರಾಗಬೇಕು ಎಂಬ ಕಾರಣಕ್ಕೆ ಕೇವಲ ಮಹಿಳೆಯರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

  • ಅದೇ ರೀತಿ ಮಹಿಳೆಯರಿಗೆ ತಾಳ್ಮೆ ಮತ್ತು ಕಾಳಜಿಯ ಗುಣಗಳು ಹೆಚ್ಚಿರುವುದರಿಂದ ಈ ಉದ್ಯಮಕ್ಕೆ ಹೊಂದಿಕೊಳ್ಳುತ್ತಾರೆ.
  • ಅದೇ ರೀತಿ ಅವರು ಹೆಚ್ಚಿನ ಆಸಕ್ತಿಯನ್ನು ಕೂಡ ನೀಡಿ ಕೆಲಸ ಮಾಡುವ ಕಾರಣ.
  • ಅದೇ ರೀತಿ ಇದಕ್ಕೆ ಹೆಚ್ಚು ಬಂಡವಾಳ ಬೇಡ ಎಂಬ ಕಾರಣಕ್ಕೆ ಮಹಿಳೆಯರಿಗೆ ಸುಲಭವಾಗಲಿದೆ.
  • ಹಾಗೆ ತಮ್ಮ ಮನೆ ಕೆಲಸವು ಮಾಡಿಕೊಂಡು ಸುಲಭವಾಗಿ ಈ ಉದ್ಯಮವನ್ನು ಸರಿದೂಗಿಸಿಕೊಂಡು ಹೋಗಬಹುದು.

ಈ ಎಲ್ಲಾ ಮುಖ್ಯ ಉದ್ದೇಶಗಳಿಂದಾಗಿ ರೈತ ಮಹಿಳೆಯರಿಗಾಗಿ ರಾಜ್ಯ ಸರ್ಕಾರದಿಂದ ಈ ಯೋಜನೆಯನ್ನು ರೂಪುಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶದ ರೈತ ಮಹಿಳೆಯರಿಗೆ ಆರ್ಥಿಕವಾಗಿ ಮೇಲೆ ಬರಲು ಇದು ಒಳ್ಳೆಯ ಮಾರ್ಗ!

  • ಈ ನಾಟಿ ಕೋಳಿ ಸಾಕಾಣಿಕೆಯ ಯೋಜನೆಯ ಕೇವಲ ಗ್ರಾಮೀಣ ಪ್ರದೇಶಗಳಲ್ಲಿರುವ ರೈತ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ನೀಡಿ ಸುಮ್ಮನಿರುವುದಿಲ್ಲ.
  • ಅವರ ಆತ್ಮವಿಶ್ವಾಸದಲ್ಲಿ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಅದೇ ರೀತಿ ಅವರ ಜೀವನ ಶೈಲಿಗಳಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ.

ಅದೇ ರೀತಿ ಗ್ರಾಮೀಣ ಪ್ರದೇಶಗಳ ಮಹಿಳೆಯರ ಬಡತನವನ್ನು ನಿವಾರಣೆ ಮಾಡುವುದು ಹಾಗೆಯೇ ಅವರು ಬೆಳವಣಿಗೆಯಲ್ಲಿ ಕೂಡ ಇದು ನೆರವಾಗುತ್ತದೆ. ಸಣ್ಣ ಮಟ್ಟದಲ್ಲಿ ಕೋಳಿ ಸಾಕಾಣಿಕೆಯನ್ನು ಮಾಡಿ ಮಹಿಳೆಯರು ದೊಡ್ಡ ಮಟ್ಟ ದ ಲಾಭವನ್ನು ನಿರೀಕ್ಷೆ ಮಾಡಬಹುದಾಗಿದೆ.

ಮಹಿಳೆಯರು ಈ ಒಂದು ಕೋಳಿ ಸಾಕಾಣಿಕೆಯನ್ನು ಮಾಡುವ ಮೂಲಕ ತಮ್ಮ ಮನೆಯಲ್ಲಿರುವ ಬಡತನವನ್ನು ನೀಗಿಸಬಹುದು ಮತ್ತು ಅವರು ಈ ಕೋಳಿ ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಂಡು ತಮ್ಮ ಕುಟುಂಬವನ್ನು ತಾವೇ ಮುನ್ನಡೆಸಿಕೊಂಡು ಹೋಗಬಹುದು ಅದೇ ರೀತಿ ಮಹಿಳೆಯರಿಗೆ ಈ ಒಂದು ಕೋಳಿ ಸಾಕಾಣಿಕೆ ಅತ್ಯಂತ ಹೆಚ್ಚಾಗಿ ಲಾಭದಾಯಕ ವಾಗುವುದರಲ್ಲಿ ಸಂಶಯವಿಲ್ಲ.

ಹಾಗೆಯೇ ಇದರಲ್ಲಿ ಕಡಿಮೆ ಖರ್ಚು ಇರುವುದರಿಂದ ರೈತ ಮಹಿಳೆಯರು ತಮ್ಮ ಮನೆಯಲ್ಲೇ ಕೋಳಿಗಳನ್ನು ಸಾಕಿ ಹೆಚ್ಚಿನ ಲಾಭವನ್ನು ಗಳಿಸಿಕೊಂಡು ತಮ್ಮ ಜೀವನ ಅಂಶಕ್ಕೆ ಮತ್ತು ತಮ್ಮ ಕಷ್ಟಗಳಿಗೆ ಹಣವನ್ನು ಕೂಡಿಟ್ಟು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡದೆ ನೆಮ್ಮದಿಯ ಜೀವನವನ್ನು ಸಾಗಿಸಬಹುದು.

Leave a Comment