WhatsApp Float Button

ಬಂಗಾರದ ಬೆಲೆ ಗ್ರಾಂಗೆ ₹14,000 ಗಡಿ ದಾಟಿದೆ! ಇಂದಿನ ಚಿನ್ನದ ದರ ಎಷ್ಟಿದೆ ತಿಳಿಯಿರಿ! Gold Rate Today

ಬಂಗಾರದ ಬೆಲೆ ಗ್ರಾಂಗೆ ₹14,000 ಗಡಿ ದಾಟಿದೆ! ಇಂದಿನ ಚಿನ್ನದ ದರ ಎಷ್ಟಿದೆ ತಿಳಿಯಿರಿ! Gold Rate Today

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಂಗಾರದ ಬೆಲೆಯು ದಿನೇ ದಿನೇ ಹೆಚ್ಚಾಗುತ್ತಿರುವುದು ಒಂದು ರೀತಿಯಲ್ಲಿ ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಹೀಗಿರುವಾಗಲೇ ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದ್ದು ಒಂದು ಗ್ರಾಂ ಚಿನ್ನದ ಬೆಲೆ 14,000 ಗಡಿ ದಾಟಿದೆ ಸ್ನೇಹಿತರೆ, ಹೀಗೆ ಇಷ್ಟೊಂದು ದುಬಾರಿಯಾಗಿರುವ ಚಿನ್ನವು ಮಧ್ಯಮ ವರ್ಗದ ಜನರ ಮೇಲೆ ಹಾಗೂ ಬಂಗಾರವನ್ನು ಹೆಚ್ಚಾಗಿ ಖರೀದಿ ಮಾಡುವ ಜನರ ಮೇಲು ಕೂಡ ಭಾರೀ ಹೊಡೆತ ಬಿದ್ದಂತಾಗಿದೆ. ಏಕೆಂದರೆ ಚಿನ್ನವು ಒಂದು ಹೂಡಿಕೆಯ ವಸ್ತು ಕೂಡ ಹೌದು ಇದು ಕಷ್ಟಕಾಲಕ್ಕೆ ಬರುತ್ತದೆ ಎಂಬ ನಂಬಿಕೆಯಲ್ಲಿ ಜನರು ಇದನ್ನು ಹೂಡಿಕೆಯ ರೂಪದಲ್ಲೂ ಕೂಡ ಖರೀದಿ ಮಾಡಿ ಕೊಳ್ಳುತ್ತಾರೆ. ಇಂದಿನ ಈ ಲೇಖನದಲ್ಲಿ ನಿಮಗೆ ಚಿನ್ನದ ದರ ಎಷ್ಟಿದೆ ಎಂದು ತಿಳಿಸಲಿದ್ದೇವೆ ಹಾಗೂ ಚಿನ್ನ ಖರೀದಿಸಲು ಸೂಕ್ತ ಸಮಯ ಯಾವುದು ಎಂದು ತಿಳಿಸಲು ಹೊರಟಿದ್ದೇವೆ ಸಂಪೂರ್ಣವಾಗಿ ಓದಿರಿ.

ಅದೇ ರೀತಿ ಈ ಲೇಖನದಲ್ಲಿ ನಾವು ನಿಮಗೆ ಚಿನ್ನ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರು ಹೂಡಿಕೆ ಮಾಡುವ ಮೊದಲು ಗಮನದಲ್ಲಿಡಬೇಕಾದ ಮಾಹಿತಿಗಳ ಬಗ್ಗೆಯೂ ಕೂಡ ತಿಳಿಸಲು ಹೊರಟಿದ್ದೇವೆ.

ಬಂಗಾರದ ಬೆಲೆಯನ್ನು ಯಾವ ರೀತಿ ನಿರ್ಧಾರವಾಗುತ್ತದೆ?

ಸ್ನೇಹಿತರೆ ಇದು ನಿಮಗೆ ತಿಳಿದಿರಲಿ ಏನೆಂದರೆ ಬಂಗಾರದ ಬೆಲೆಯು ಯಾವಾಗಲೂ ಕೂಡ ಒಂದೇ ಬೆಲೆಗೆ ನಿಶ್ಚಿತವಾಗಿರುವುದಿಲ್ಲ ಅದು ನಮ್ಮ ನೆರೆಹೊರೆ ರಾಷ್ಟ್ರಗಳ ಮತ್ತು ಅಂತರಾಷ್ಟ್ರೀಯ ಎಲ್ಲಾ ವಿದ್ಯಮಾನಗಳ ಮತ್ತು ಅಂಶಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಹೀಗೆ ಬಂಗಾರು ನಿರ್ಧಾರವಾಗುವ ಕೆಲವು ಪ್ರಮುಖ ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ ತಿಳಿಯಿರಿ:

  • ಡಾಲರ್ ಕರೆನ್ಸಿಯ ಮೌಲ್ಯದಲ್ಲಿ ಆಗುವ ಏರಿಳಿತಗಳು.
  • ಹೂಡಿಕೆದಾರರ ಬೇಡಿಕೆಯಿಂದಲೂ ಕೂಡ ನಿರ್ಧಾರವಾಗುತ್ತದೆ.
  • ದುಬಾರಿತನದಿಂದಲೂ ಕೂಡ ನಿರ್ಧಾರವಾಗುತ್ತದೆ.
  • ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು.
  • ಬಡ್ಡಿ ದರಗಳಲ್ಲಿ ಆಗುವ ಬದಲಾವಣೆಗಳಿಂದಲೂ ನಿರ್ಧಾರ ವಾಗುತ್ತದೆ.
  • ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹೇಗಿದೆ? ಇದರ ಮೇಲೆ ಕೂಡ ನಿರ್ಧಾರವಾಗುತ್ತದೆ.

ಇಂದಿನ ಚಿನ್ನದ ಬೆಲೆಯು ಎಷ್ಟಿದೆ ತಿಳಿಯಿರಿ:

ಇಂದು ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಹಾಗೂ ತಜ್ಞರು ನೀಡಿರುವಂತಹ ವಿಶ್ಲೇಷಣೆಯ ಬಗ್ಗೆ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಇಂದು ಬಂಗಾರದ ಬೆಲೆಯಲ್ಲಿ ಕುಂಚ ಹೆಚ್ಚಿಗೆ ಬೆಲೆಯೂ ಏರಿಕೆಯಾಗಿದೇ:

18 ಕ್ಯಾರೆಟ್ ನ ಇಂದಿನ ಚಿನ್ನದ ಬೆಲೆ 1 ಗ್ರಾಂಗೆ:

ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು 18 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯು ಸುಮಾರು ₹12,684 ಇದೆ. ಅಂದರೆ ನೆನ್ನೆ ದರಕಿಂತ ಸುಮಾರು ₹400 ರೂಪಾಯಿಗಳು ಏರಿಕೆಯಾಗಿದೆ. ನೆನ್ನೆ ಎಂದರೆ 18 ಕ್ಯಾರೆಟ್ ನ ಒಂದು ಗ್ರಾಂ ಚಿನ್ನಕ್ಕೆ ಸುಮಾರು ₹12,284 ಇತ್ತು.

22 ಕ್ಯಾರೆಟ್ ನ ಇಂದಿನ ಚಿನ್ನದ ಬೆಲೆ 1 ಗ್ರಾಂಗೆ:

ಅದೇ ರೀತಿ ಇಂದು ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು ಸುಮಾರು ₹13,534 ರೂಪಾಯಿ ಇದೆ. ನೆನ್ನೆ ಇದ್ದಂತಹ ಬೆಲೆಗಿಂತ ಇಂದು ಸುಮಾರು ₹234 ಏರಿಕೆಯಾಗಿದೆ. ನೆನ್ನೆಯ ದರವು ಸುಮಾರು 22 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ ₹13,300 ಇತ್ತು.

24 ಕ್ಯಾರೆಟ್ ನ ಇಂದಿನ ಚಿನ್ನದ ಬೆಲೆ 1 ಗ್ರಾಂಗೆ:

ಅದೇ ರೀತಿ ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನಕ್ಕೆ ಸುಮಾರು ₹14,784 ಇದೆ. ನೆನ್ನೆ ಚಿನ್ನದ ಬೆಲೆಯು ಸುಮಾರು ₹14,230 ರೂಪಾಯಿ ಇತ್ತು. ನೆನ್ನೆದರಕ್ಕಿಂತ ಇಂದು ಸುಮಾರು ₹554 ರೂಪಾಯಿ ಏರಿಕೆಯಾಗಿದೆ.

ಸ್ನೇಹಿತರೆ ಇದು ಇಂದು ಮಾರುಕಟ್ಟೆಯಲ್ಲಿ ದಾಖಲಾಗಿರುವಂತಹ 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಗಳು. ಆದರೆ ಈ ಬೆಲೆಗಳು ಪ್ರತಿ ನಗರದಿಂದ ನಗರಕ್ಕೆ ಏರಿಳಿತ ವಾಗುವ ಸಾಧ್ಯತೆಗಳಿವೆ. ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿರುವ ಕಾರಣ ಚಿನ್ನವನ್ನು ಖರೀದಿಸುವಂತಹ ಜನರು ಸ್ವಲ್ಪ ಮಟ್ಟಿನ ಸಮಯ ತೆಗೆದುಕೊಂಡು ಇನ್ನೊಂದು ಬೆಲೆ ಕೊಂಚ ಇಳಿಕೆ ಆದ ನಂತರ ಚಿನ್ನವನ್ನು ಖರೀದಿಸುವುದು ಅತ್ಯಂತ ಸೂಕ್ತ.

ವಿವಿಧ ನಗರಗಳಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಿರಿ:

ಸ್ನೇಹಿತರೆ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನಿಮಗಾಗಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ ಮತ್ತು ವಿವರವನ್ನು ತಿಳಿದುಕೊಳ್ಳಿ.

ಬೆಂಗಳೂರಿನಲ್ಲಿ: ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ ದಾಖಲಾಗಿರುವ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ನೋಡುವುದಾದರೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆಯು ಸುಮಾರು ₹14,834 ರೂಪಾಯಿ ದಾಖಲಾಗಿದೆ. ನೆನ್ನೆಯ ಬೆಳಕಿಂತ ಇವತ್ತು ಸುಮಾರು ₹400 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ ನೆನ್ನೆ ಬೆಲೆ ನೋಡುವುದಾದರೆ ಬೆಂಗಳೂರಿನಲ್ಲಿ ನೆನ್ನೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಸುಮಾರು ₹14,834 ರೂಪಾಯಿ ಇತ್ತು.

ಚೆನ್ನೈ ನಗರದಲ್ಲಿ: ಇಂದು ಚೆನ್ನೈ ನಗರದ ಮಾರುಕಟ್ಟೆಯಲ್ಲಿ ದಾಖಲಾಗಿರುವ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆಯು ಇಂದು ಸುಮಾರು ₹14,910 ರೂಪಾಯಿ ದಾಖಲಾಗಿದೆ. ನೆನ್ನೆ ಬೆಲೆಗಿಂತ ಎಂದು ಸುಮಾರು ₹510 ರೂಪಾಯಿ ಏರಿಕೆಯಾಗಿದೆ. ನೆನ್ನೆಯ ಬೆಲೆ ನೋಡುವುದಾದರೆ ಚೆನ್ನೈ ನಗರದಲ್ಲಿ ನೆನ್ನೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ₹14,400 ಇತ್ತು.

ಮುಂಬೈ ನಗರದಲ್ಲಿ: ಇಂದು ಮುಂಬೈನಗರದ ಮಾರುಕಟ್ಟೆಯಲ್ಲಿ ದಾಖಲಾಗಿರುವ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಸುಮಾರು ₹14,674 ರೂಪಾಯಿ ದಾಖಲಾಗಿದೆ. ಅಂದರೆ ಸುಮಾರು 200 ರೂಪಾಯಿಗಳಷ್ಟು ಏರಿಕೆಯಾಗಿದೆ. ನೆನ್ನೆಯ ಬೆಲೆ ಎಷ್ಟಿದೆ ಎಂದು ನೋಡುವುದಾದರೆ ನೆನ್ನೆಯ ಬೆಲೆಯು 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ ಸುಮಾರು ₹14,674 ಇತ್ತು.

ದೆಹಲಿ ನಗರದಲ್ಲಿ: ಇಂದು ದೆಹಲಿ ನಗರದ ಮಾರುಕಟ್ಟೆಯಲ್ಲಿ ದಾಖಲಾಗಿರುವ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ ಸುಮಾರು ₹14,810 ಅಂದರೆ ನನಗಿಂತ ಸುಮಾರು ₹310 ಏರಿಕೆಯಾಗಿದೆ. ನೆನ್ನೆ ಬೆಲೆಯು ₹14,600 ರೂಪಾಯಿ ಇದೆ.

ಇದಿಷ್ಟು ಕೂಡ ನಮ್ಮ ಭಾರತ ದೇಶದಲ್ಲಿರುವ ವಿವಿಧ ನಗರಗಳ ಇಂದಿನ ಚಿನ್ನದ ಬೆಲೆ ವಿವರ ಗಳಾಗಿತ್ತು. ಈ ಬೆಲೆಯು ಬೇರೆ ಬೇರೆ ವಿವಿಧ ಕ್ಯಾರೆಟ್ ಗಳ ತಿನ್ನಕ್ಕೆ ಬದಲಾಗುತ್ತದೆ. ಇದು 24 ಕ್ಯಾರೆಟ್ ನ ವಿವಿಧ ನಗರಗಳಲ್ಲಿ ಇರುವ ಚಿನ್ನದ ಬೆಲೆಯಾಗಿದೆ.

ಇಂದು ಚಿನ್ನ ಖರೀದಿಸಲು ಒಳ್ಳೆಯ ಸಮಯವೇ?

  • ನಿಮ್ಮ ಮನೆಯಲ್ಲಿ ಏನಾದರೂ ಶುಭಕಾರ್ಯಗಳಿದ್ದರೆ ಅಥವಾ ಮದುವೆ ಕಾರ್ಯಗಳು ಇದ್ದರೆ ಇಂದಿನಿಂದಲೇ ನೀವು ಸ್ವಲ್ಪ ಸ್ವಲ್ಪ ಚಿನ್ನವನ್ನು ಖರೀದಿಸಿ ಕೂಡಿಡುವುದು ತುಂಬಾ ಒಳ್ಳೆಯ ಉಪಾಯ.
  • ಅದೇ ರೀತಿ ನೀವು ಈಗ ಚಿನ್ನದ ಮೇಲೆ ಹೂಡಿಕೆ ಮಾಡಿ ಚಿನ್ನವನ್ನು ಸ್ವಲ್ಪ ಸ್ವಲ್ಪ ಖರೀದಿಸಿ ಇಟ್ಟರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಿಗೆ ಆದಮೇಲೆ ನಿಮಗೆ ಅದು ಕೂಡ ಒಂದು ರೀತಿಯಲ್ಲಿ ಉಳಿತಾಯ ಆಗುತ್ತದೆ.
  • ಇದೇ ಜನವರಿ ತಿಂಗಳಿಂದ ಮದುವೆ ಸೀಸನ್ ಶುರುವಾಗಲಿದ್ದು ಈಗಿಂದಲೇ ಚಿನ್ನವನ್ನು ಖರೀದಿಸಿ ನೀವು ಸ್ವಲ್ಪ ಸ್ವಲ್ಪ ಉಳಿತಾಯವನ್ನು ಮಾಡುತ್ತಾ ಹೋದರೆ ಚಿನ್ನದ ಬೆಲೆ ಏರಿಕೆಯಾದ ಮೇಲೆ ನಿಮಗೆ ಅಷ್ಟು ಹೊರೆಯಾಗುವುದಿಲ್ಲ ಮತ್ತು ಚಿನ್ನ ಖರೀದಿಸುವ ಅವಶ್ಯಕತೆ ಇರುವುದಿಲ್ಲ ಈಗಲೇ ದುಡ್ಡು ಕೂಡಿಟ್ಟು ಚಿನ್ನವನ್ನು ಖರೀದಿಸಲು ಶುರು ಮಾಡಿ.
  • ಅದೇ ರೀತಿ ಚಿನ್ನದ ಬೆಲೆಯಲ್ಲಿ ಈ ವರ್ಷದಿಂದ ಮುಂದಿನ ವರ್ಷದವರೆಗೆ ಸಾಕಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದೇ ರೀತಿ ಈಗ ನೀವು ಜೀವನದ ಮೇಲೆ ಹೂಡಿಕೆ ಮಾಡಿ ಚಿನ್ನವನ್ನು ಖರೀದಿಸಿದ್ದೆ ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಬಳಿ ಚಿನ್ನ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ.

ಚಿನ್ನ ಖರೀದಿ ಮಾಡುವ ಮೊದಲು ಗಮನಿಸಬೇಕಾದ ಅಂಶಗಳು:

  • ನೀವು ಟಿವಿಯಲ್ಲಿ ನೋಡುವ ಬೆಲೆಗಳು ಮತ್ತು ಅಡ್ವಟೈಸ್ಮೆಂಟ್ಗಳಲ್ಲಿ ನೋಡುವ ಬೆಲೆಗಳು ವಾಸ್ತವಕ್ಕೆ ಹೊಂದಿಕೊಳ್ಳುವುದಿಲ್ಲ. ಅದಕ್ಕಿಂತಲೂ ಹೆಚ್ಚಿಗೆ ಬೆಲೆ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹಾಗಾಗಿ ನೀವು ಇಂತಹ ಜಾಹೀರಾತುಗಳನ್ನು ನಂಬಿ, ಚಿನ್ನ ಖರೀದಿಸಲು ಮುಂದಾಗಬೇಡಿ.
  • ಅದೇ ರೀತಿ ಇನ್ನೊಂದು ವಿಷಯ ನಿಮಗೆ ತಿಳಿದಿರಲಿ ಅದೇನೆಂದರೆ ಚಿನ್ನದ ಬೆಲೆ ಖರೀದಿಸುವಾಗ ನಿಮಗೆ 8 ರಿಂದ 15 ಪರ್ಸೆಂಟ್ ನವರಿಗೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜಸ್ ಬೀಳುತ್ತದೆ.
  • ನೀವು ಚಿನ್ನ ಕರಿದಿಸಲು ಅಂಗಡಿಗೆ ಹೋಗುವ ಮುನ್ನ ನಿಮ್ಮ ಬೆಲೆಯನ್ನು ಮುಂಗಡವಾಗಿ ನಿರ್ಧರಿಸಿಕೊಳ್ಳುವುದು ಉತ್ತಮ.

ಇಂದು ಬೆಳ್ಳಿಯದರ ಎಷ್ಟಿದೆ ತಿಳಿಯಿರಿ:

ಸ್ನೇಹಿತರೆ ಬೆಳ್ಳಿಯ ದರದಲ್ಲೂ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಹಾಗೆ ಹಾಗಾಗಿ ನೀವು ಈಗಿನಿಂದಲೇ ಬೆಳ್ಳಿಯನ್ನು ಕೂಡ ಖರೀದಿ ಮಾಡಿ ಇಟ್ಟುಕೊಳ್ಳುವುದು ತುಂಬಾ ಸೂಕ್ತ. ಏಕೆಂದರೆ ಮುಂಬರುವ ದಿನಗಳಲ್ಲಿ ಬೆಳ್ಳಿಯ ದರ ಏರಿಕೆ ಇದ್ದರೂ ಕೂಡ ನಿಮಗೆ ಅಷ್ಟೇನೂ ಹೊರೆ ಬೀಳುವುದಿಲ್ಲ.

ಇಂದು ಒಂದು ಕೆಜಿ ಬೆಳ್ಳಿಯ ಬೆಲೆಯು ಮಾರುಕಟ್ಟೆಯಲ್ಲಿ ಸುಮಾರು ₹2,10,000 ರೂಪಾಯಿ ಇದೆ. ಬೆಳ್ಳಿಯ ಬೆಳೆಯು ಕೂಡ ವಿವಿಧ ನಗರಗಳಲ್ಲಿ ಏರಿಳಿತವಾಗುತ್ತಾ ಇರುತ್ತದೆ.

ಚಿನ್ನ ಬೆಳ್ಳಿಯನ್ನು ಖರೀದಿಸುವ ಮಹಿಳೆಯರಿಗೆ ಮತ್ತು ಈ ಲೋಹಗಳ ಮೇಲೆ ಹೂಡಿಕೆ ಮಾಡುವ ಎಲ್ಲಾ ಹೂಡಿಕೆದಾರರು ಕೂಡ ಇವುಗಳ ಬೆಲೆಗಳು ಏರಿಕೆಯಾದಾಗ ಖರೀದಿಸುವ ಮುಂಚೆ ನಾವು ಹೇಳಿರುವಂತಹ ಎಲ್ಲಾ ಸೂಚನೆಗಳನ್ನು ಮತ್ತು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವುದು ತುಂಬಾ ಒಳ್ಳೆಯದು.

Leave a Comment