WhatsApp Float Button

Google Pay Personal Loan: ಗೂಗಲ್ ಪೇ ನೀಡುತ್ತಿದೆ ₹5 ಲಕ್ಷದವರೆಗೆ ಸಾಲ ಸೌಲಭ್ಯ! ಕೂಡಲೇ ಅರ್ಜಿ ಸಲ್ಲಿಸಿ!

Google Pay Personal Loan: ಗೂಗಲ್ ಪೇ ನೀಡುತ್ತಿದೆ ₹5 ಲಕ್ಷದವರೆಗೆ ಸಾಲ ಸೌಲಭ್ಯ! ಕೂಡಲೇ ಅರ್ಜಿ ಸಲ್ಲಿಸಿ!

ನಮ್ಮ ಜನಸಾಮಾನ್ಯರಿಗೆ ಅದರಲ್ಲೂ ಕೂಡ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಹಣದ ತೊಂದರೆಗಳು ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ನಾವು ನಮ್ಮ ಸ್ನೇಹಿತರ ಬಳಿ ಅಥವಾ ನಮ್ಮ ಕುಟುಂಬಸ್ಥರ ಬಳಿ ಹಣ ಕೇಳಿದರೂ ಕೂಡ ಹಣವನ್ನು ನೀಡುವುದಿಲ್ಲ, ಆದರೆ ಇಂತಹ ತುರ್ತು ಸಂದರ್ಭಗಳಲ್ಲಿ ನೀವು ದಿನನಿತ್ಯ ಬಳಕೆ ಮಾಡುವಂತ ಗೂಗಲ್ ಪೇ ಅಪ್ಲಿಕೇಶನ್ ನಿಂದ ನಿಮಗೆ ಬೇಕಾಗುವ ಹಣವನ್ನು ಸಾಲದ (Google Pay Personal Loan) ರೂಪದಲ್ಲಿ ಪಡೆದುಕೊಳ್ಳಬಹುದು. ಗೂಗಲ್ ಪೇ ನಿಂದ ಹಣವನ್ನು ಪಡೆದುಕೊಳ್ಳಲು ಸರಳ ಮಾರ್ಗಗಳು ಇವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದ್ದು ಇದನ್ನು ಪೂರ್ತಿಯಾಗಿ ಓದಿ ಮತ್ತು ಸಂಪೂರ್ಣ ವಿವರ ತಿಳಿದುಕೊಳ್ಳಿ.

Google Pay Personal Loan ಬಗ್ಗೆ ಸಂಪೂರ್ಣ ಮಾಹಿತಿ!

ಸ್ನೇಹಿತರೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ನೀವು ಸಾಕಷ್ಟು ಕಡೆಗಳಲ್ಲಿ ಮತ್ತು ಸಾಕಷ್ಟು ರೂಪದಲ್ಲಿ ಬಳಸಿದ್ದೀರಿ ಅದು ಹಣ ಪಾವತಿಸಲು ಆಗಿರಬಹುದು ಅಥವಾ ಬಿಲ್ ಪಾವತಿಸಲು ಆಗಿರಬಹುದು ಅಥವಾ ರಿಚಾರ್ಜ್ ಮಾಡಿಕೊಳ್ಳಲು ಆಗಿರಬಹುದು. ಹೀಗೆ ಹಲವಾರು ರೀತಿಗಳಲ್ಲಿ ನೀವು ಗೂಗಲ್ ಪೇ ಆಪ್ ಅನ್ನು ಬಳಸಿದ್ದೀರಿ. ಆದರೆ ಈಗ ನೀವು ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ನಿಂದ ನಿಮ್ಮ ತುರ್ತು ಪರಿಸ್ಥಿತಿಗೆ ಅಥವಾ ನಿಮ್ಮ ಕಷ್ಟಕಾಲಕ್ಕೆ ಹಣ ಸಿಗದೇ ಇದ್ದಲ್ಲಿ ಈ ಅಪ್ಲಿಕೇಶನ್ ಇಂದ ನೀವು ವೇಗವಾಗಿ ಸಾಲವನ್ನು Google Pay Personal Loan ಕೂಡ ಪಡೆದುಕೊಳ್ಳಬಹುದು.

ಹಾಗೆಯೇ ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ 24 ಗಂಟೆ ಒಳಗೆ ನಿಮಗೆ ಹಣ ಸಾಲದು ರೂಪದಲ್ಲಿ ನಿಮ್ಮ ಅಕೌಂಟಿಗೆ ಜಮಾ ಆಗುತ್ತದೆ ಸ್ನೇಹಿತರೆ. ಹಾಗೆಯೇ ಈ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ Google Pay Personal Loan ಗೆ ವಾರ್ಷಿಕ ಬಡ್ಡಿದರವನ್ನು ನೋಡುವುದಾದರೆ ಗೂಗಲ್ ಪೇ ತನ್ನ ಗ್ರಾಹಕರಿಗೆ ಸುಮಾರು 10% ನಿಂದ 36% ವರೆಗೆ ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಸಾಲವನ್ನು ಮರುಪಾವತಿ ಮಾಡುವಂತಹ ಸಮಯವನ್ನು ಕೂಡ ದೀರ್ಘಾವಧಿಗೆ ನಿಗದಿಪಡಿಸಲಾಗಿದೆ ಅಂದರೆ 6 ರಿಂದ 32 ತಿಂಗಳ ಒಳಗೆ ಸಾಲವನ್ನು ಮರುಪಾವತಿ ಮಾಡಬಹುದು.

ಅರ್ಹತೆಗಳು ಏನು?

  • ನೀವು ಸಾಲವನ್ನು ಪಡೆಯಲು ಕಡ್ಡಾಯವಾಗಿ ಭಾರತೀಯ ನಿವಾಸಿಯಾಗಿರಬೇಕು.
  • ನಿಮ್ಮ ವಯಸ್ಸು 21 ರಿಂದ 59 ವರ್ಷದ ಒಳಗೆ ಇರಬೇಕು..
  • ನಿಮಗೆ ಸರ್ಕಾರಿ ಕೆಲಸ ಇರಬೇಕು ಅಥವಾ ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು. ಒಟ್ಟಿನಲ್ಲಿ ನಿಮಗೆ ಸಂಬಳ ಬರುವಂತಹ ಕೆಲಸ ಇರಬೇಕು.
  • ನಿಮ್ಮ ತಿಂಗಳ ಸಂಬಳವೂ ₹15,000 ರಿಂದ ₹25,000 ಸಾವಿರ ರೂಪಾಯಿ ಇದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.
  • ಅದೇ ರೀತಿ ಕ್ರೆಡಿಟ್ ಸ್ಕೂಲ್ ಕೂಡ 700 ರಿಂದ 750 ಕಿಂತ ಹೆಚ್ಚಿಗೆ ಇದ್ದರೂ ಸಾಲ ಸಿಗುತ್ತದೆ.

ಯಾವೆಲ್ಲ ದಾಖಲೆಗಳು ಕಡ್ಡಾಯ?

  • ಆಧಾರ್ ಕಾರ್ಡ್
  • 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಸ್ಯಾಲರಿ ಸ್ಲಿಪ್
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಭಾವಚಿತ್ರ (ಫೋಟೋ)
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಲು ಪ್ಲೇಸ್ಟೋರ್ (Playstore) ನಿಂದ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ (Install) ಮಾಡಿಕೊಳ್ಳಿ.
  • ಇದಾದ ಮೇಲೆ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ. ನಂತರ ಅಲ್ಲಿ ಕಾಣುವ ಲೋನ್ (Loans) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಈಗ ಅಲ್ಲಿ ನಿಮಗೆ ಎಲ್ಲಾ ಲೋನ್ ಗಳು ಆಯ್ಕೆ ಕಾಣುತ್ತದೆ ನಿಮಗೆ ಯಾವ ಲೋನ್ ಬೇಕು ಆ ಲೋನ್ ನ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಅಲ್ಲಿ ನಿಮಗೆ ಎಷ್ಟೋ ಅವಧಿಗೆ ಸಾಲ ಬೇಕು ಮತ್ತು ಎಷ್ಟು ಸಾಲ ಬೇಕು ಎಂಬುದನ್ನು ಭರ್ತಿ ಮಾಡಿ.
  • ಈಗ ನಿಮಗೆ ಎಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಂಡು ಅಪ್ಲೋಡ್ ಮಾಡಿ.
  • ಈಗ ನಿಮ್ಮ ಸಾಲದ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ನಿಮ್ಮ ಅರ್ಜಿ ಸರಿಯಾಗಿದ್ದರೆ ನಿಮಗೆ ಸಾಲವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ.

Leave a Comment