WhatsApp Float Button

Karnataka Weather Forecast: ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರಿ ಮಳೆ ಸುರಿಯಲಿದೆ! ಮಳೆ ಜೊತೆಗೆ ಭೀಕರ ಚಳಿ ಸಹ ಇರಲಿದೆ!

Karnataka Weather Forecast: ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರಿ ಮಳೆ ಸುರಿಯಲಿದೆ! ಮಳೆ ಜೊತೆಗೆ ಭೀಕರ ಚಳಿ ಸಹ ಇರಲಿದೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಮುಂದೆ ಆಗುವಂತಹ ಹವಾಮಾನ ಮುನ್ಸೂಚನೆಗಳನ್ನು ಸಂಪೂರ್ಣವಾಗಿ ವಿವರ ಸಮೇತ ನೀಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು, ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಮತ್ತು ಚಳಿ ಯಾವೆಲ್ಲ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಇರಲಿದೆ? ಎಂದು ಸಂಪೂರ್ಣ ವಿವರ ಸಮೇತ ತಿಳಿಸಲು ಹೊರಟಿದ್ದೇವೆ ಸ್ನೇಹಿತರೆ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ಈಗಲೇ ರಾಜ್ಯದಲ್ಲಿ ಭಾರಿ ಚಳಿ ಇದ್ದು ಬೆಳಿಗ್ಗೆ ಎದ್ದ ಕೂಡಲೇ ಜನರು ಮನೆಯಿಂದ ಹೊರಬರಲು ಚಳಿಗೆ ಹೆದರುವಂಥ ಆಗಿದೆ. ಇದರ ಬೆನ್ನಲ್ಲೇ ಮಳೆ ಬಂದರೆ ಹೇಗಿರುತ್ತೆ, ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗುತ್ತಿರುವುದು ಆದರೆ ಸ್ನೇಹಿತರೆ ಇದು ಸತ್ಯ ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳ ಕಾಲ ಈ 8 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಅದರ ಜೊತೆಗೆ ಗುಡುಗು ಸಹಿತ ಮಳೆ ಆಗಲಿದೆ ಎಂದು ವರದಿ ನೀಡಿದೆ ಸ್ನೇಹಿತರೆ. ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ನೋಡೋಣ ಬನ್ನಿ.

ಯಾವ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ?

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಸಂಕ್ರಾಂತಿ ಹಬ್ಬದ ಸಡಗರವಿದ್ದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಂಕ್ರಾಂತಿ ಹಬ್ಬ ಜನವರಿ ತಿಂಗಳಲ್ಲಿ ಬರುತ್ತದೆ. ಸಂಕ್ರಾಂತಿ ಹಬ್ಬ ಕಳೆದ ನಂತರ ಹವಾಮಾನದಲ್ಲಿ ಬದಲಾವಣೆಯಾಗುವುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಈ ಬಾರಿ ಚಳಿಯ ಜೊತೆಗೆ ಭಾರಿ ಮಳೆ ಕೂಡ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಸ್ನೇಹಿತರೆ, ಈ ಜಿಲ್ಲೆಗಳ ಹೆಸರನ್ನು ಈಗ ಒಂದೊಂದಾಗಿ ನೋಡುತ್ತಾ ಹೋಗೋಣ ಬನ್ನಿ.

ಈ ಎಂಟು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮುನ್ಸೂಚನೆಯನ್ನು ನೀಡಿದೆ ಸ್ನೇಹಿತರೆ.

  • ಮೈಸೂರು ಜಿಲ್ಲೆ
  • ಮಂಡ್ಯ ಜಿಲ್ಲೆ
  • ಮಡಿಕೇರಿ ಜಿಲ್ಲೆ
  • ಚಾಮರಾಜನಗರ ಜಿಲ್ಲೆ
  • ಶಿವಮೊಗ್ಗ ಜಿಲ್ಲೆ
  • ದಾವಣಗೆರೆ ಜಿಲ್ಲೆ
  • ಹಾವೇರಿ ಜಿಲ್ಲೆ
  • ಬಾಗಲಕೋಟೆ ಜಿಲ್ಲೆ

ಈ ಮೇಲಿನ ಎಂಟು ಜಿಲ್ಲೆಗಳಲ್ಲಿ ಹವಾಮಾನ ಬದಲಾವಣೆಯಾಗಲಿದ್ದು ಮುಂದಿನ ನಾಲ್ಕು ದಿನಗಳ ಕಾಲ ಮಳೆ ವಾತಾವರಣ ಸೃಷ್ಟಿಯಾಗಿ ಮಳೆಯಾಗುವಂತಹ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಸ್ನೇಹಿತರೆ.

ಇತರೆ ಜಿಲ್ಲೆಗಳಲ್ಲಿ ಹವಾಮಾನ ಯಾವ ರೀತಿ ಇರಲಿದೆ?

ನಮ್ಮ ರಾಜ್ಯದ ರಾಜಧಾನಿಯಾಗಿರುವಂತಹ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ ಆದರೆ ಬೆಂಗಳೂರಿನಲ್ಲಿ ಜನರಿಗೆ ಭೀಕರವಾಗಿ ಚಳಿಕಾಡಲಿದೆ ಇದಂತೂ ಖಚಿತ. ಹಾಗೆಯೇ ದಟ್ಟವಾದ ಮಂಜು ಕೂಡ ಬೆಳಗಿನ ಜಾವ ಆವರಿಸಲಿದೆ ಎಂದು ಮಾಹಿತಿ ಇದೆ. ಅದೇ ರೀತಿ ಜನವರಿ 18 ನೇ ತಾರೀಖಿನ ತನಕ ಬೆಂಗಳೂರಿನ ಹವಾಮಾನದಲ್ಲಿ ಮೋಡಕವಿದ ವಾತಾವರಣವನ್ನು ಜನರು ನಿರೀಕ್ಷಿಸಬಹುದು ಮತ್ತು ಬೆಳಗಿನ ಜಾವ ಚಳಿಯನ್ನು ನಿರೀಕ್ಷಿಸಬಹುದು.

ಅದೇ ರೀತಿ ನಮ್ಮ ಕರ್ನಾಟಕ ರಾಜ್ಯದಲ್ಲಿರುವಂತಹ ಉತ್ತರ ಕರ್ನಾಟಕ ಭಾಗದಲ್ಲಿ ಅಂದರೆ ಬೀದರ್ ಜಿಲ್ಲೆಯಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅದೇ ರೀತಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮತ್ತು ಕಲಬುರ್ಗಿಯಲ್ಲಿ ಚಳಿ ವಾತಾವರಣ ಹಾಗೂ ಬಿಸಿಲಿನ ವಾತಾವರಣ ಎರಡು ಇದೆ.

ಈ ಜಿಲ್ಲೆಗಳಲ್ಲಿ ಮಂಜು ಕೂಡ ಅತಿಯಾಗಿ ಇರಲಿದೆ!

ನಮ್ಮ ಕರ್ನಾಟಕ ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಅಂದರೆ ಉಡುಪಿ ಶಿವಮೊಗ್ಗ ಮಂಗಳೂರು ಮತ್ತು ಇತರೆ ಕರಾವಳಿ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ ಎಂಬ ಮಾಹಿತಿ ಇದೆ ಸ್ನೇಹಿತರೆ. ಇಂಥ ಮಂಜು ಕವಿದ ವಾತಾವರಣಗಳಲ್ಲಿ ಅಪಘಾತವಾಗುವ ಸಂಭವವು ಹೆಚ್ಚಿರಲಿದೆ ಹಾಗಾಗಿ ನೀವು ಎಲ್ಲೇ ಪ್ರಯಾಣ ಮಾಡುತ್ತಿದ್ದರು ನೋಡಿಕೊಂಡು ವಾಹನ ಚಲಾವಣೆ ಮಾಡುವುದು ಉತ್ತಮ ಎಂದು ಹೇಳಬಹುದು.

ಸ್ನೇಹಿತರೆ ಇದೇ ರೀತಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀವು ಮೊದಲು ತಿಳಿದುಕೊಳ್ಳಲು. ನಮ್ಮ ಕನ್ನಡ ಲಕ್ಷ್ಮಿ ಟೆಲಿಗ್ರಾಂ ಚಾನೆಲ್ ಗೆ ಹಾಗೂ ವಾಟ್ಸಪ್ ಗ್ರೂಪ್ ಗೆ ಕೂಡಲೇ ಜಾಯಿನ್ ಆಗಿ. ವಾಟ್ಸಪ್ ಬಟನ್ ಮತ್ತು ಟೆಲಿಗ್ರಾಂ ಬಟನ್ ನಿಮಗೆ ನಿಮ್ಮ ಸ್ಕ್ರೀನ್ ಮೇಲೆ ಕಾಣುತ್ತಿದೆ ನೋಡಿ ಕೂಡಲೇ ಜಾಯಿನ್ ಆಗಿ.

Leave a Comment