WhatsApp Float Button

Ganga Kalyana Yojana: ಈ ಯೋಜನೆ ಮೂಲಕ ರೈತರು ಉಚಿತ ಬೋರ್ವೆಲ್ ಕೊಡಿಸಲು ₹5 ಲಕ್ಷ ಸಬ್ಸಿಡಿ ಪಡೆಯಬಹುದು!

Ganga Kalyana Yojana: ಈ ಯೋಜನೆ ಮೂಲಕ ರೈತರು ಉಚಿತ ಬೋರ್ವೆಲ್ ಕೊಡಿಸಲು ₹5 ಲಕ್ಷ ಸಬ್ಸಿಡಿ ಪಡೆಯಬಹುದು!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಒಂದು ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈತರು ತಮ್ಮ ಜಮೀನಿನಲ್ಲಿ ಸಬ್ಸಿಡಿ ದರದಲ್ಲಿ ಬೋರ್ವೆಲ್ ಅನ್ನು ಕೊರಿಸಬಹುದು. ಮತ್ತು ರೈತರು ತಮ್ಮ ಜಮೀನಿಗೆ ನೀರಾವರಿ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಈ ಯೋಜನೆಗೆ ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಹೀಗೆ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಸಂಪೂರ್ಣವಾಗಿ ಓದಿ.

Ganga Kalyana ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ!

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಸ್ನೇಹಿತರೆ. ಅದೇ ರೀತಿ ಈಗಲೂ ಕೂಡ ಈ ಒಂದು ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರಿಗೆ ಅವರ ಜಮೀನಿನಲ್ಲಿ ನೀರಿನ ಕೊರತೆ ಇರದಂತೆ ನೀರಾವರಿ ಸೌಲಭ್ಯಕ್ಕಾಗಿ ಸಬ್ಸಿಡಿ ದರದಲ್ಲಿ ಬೋರ್ವೆಲ್ ಕೊರಿಸಲು ಸಹಾಯಧನ ನೀಡಲಾಗುತ್ತಿದೆ.

ಈ ಯೋಜನೆಯು ಮುಖ್ಯವಾಗಿ ಕ್ರಿಶ್ಚಿಯನ್ ಸಮುದಾಯದ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜಾರಿ ಮಾಡಿರುವಂತಹ ಯೋಜನೆಯಾಗಿದೆ. ಈ ಯೋಜನೆ ಮೂಲಕ ಕ್ರಿಶ್ಚಿಯನ್ ಸಮುದಾಯದ ಎಲ್ಲ ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಸರ್ಕಾರದಿಂದ ಸಿಗುವ ಸಬ್ಸಿಡಿ ಹಣದಲ್ಲಿ ಕೊರೆಸಬಹುದು. ಮತ್ತು ರಾಜ್ಯ ಸರ್ಕಾರವು ಈ ಬೋರ್ವೆಲ್ ಅನ್ನು ಕೊರೆಸಿಕೊಳ್ಳಲು ಸುಮಾರು ₹5 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡುತ್ತಿದೆ.

ಈ ಯೋಜನೆ ಮುಖ್ಯ ಉದ್ದೇಶವೇನೆಂದರೆ ರೈತರು ನೀರಾವರಿ ಮಾಡಿಕೊಳ್ಳುವ ಮೂಲಕ ಕೃಷಿಯಲ್ಲಿ ಹೆಚ್ಚಾಗಿ ಉತ್ಪಾದನೆ ಮಾಡಿ ಹೆಚ್ಚು ಹೆಚ್ಚು ಲಾಭಗಳಿಸಬೇಕು ಹಾಗೆ ರೈತರಿಗೆ ಆರ್ಥಿಕವಾಗಿ ಸಂಕಷ್ಟವಾಗದೆ ಅವರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಇಂದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ರೈತರ ಬಳಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
  • ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ರೈತರಿಗೆ ಮಾತ್ರ ಅರ್ಜಿ ಸಲ್ಲಿಸಿರುವ ಅವಕಾಶ.
  • ಅರ್ಜಿ ಸಲ್ಲಿಸುವ ರೈತರಿಗೆ 18 ವರ್ಷದಿಂದ 55 ವರ್ಷದ ಒಳಗಿನ ವಯಸ್ಸಿನವರಾಗಿರಬೇಕು.
  • ಅದೇ ರೀತಿ ಅವರ ರೈತರ ವಾರ್ಷಿಕ ಆದಾಯವು ಕೂಡ 1 ಲಕ್ಷಕ್ಕಿಂತ ಕಡಿಮೆ ಇರಬೇಕು.

ಸಹಾಯಧನ ಎಷ್ಟು ಸಿಗಲಿದೆ?

ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಜಾರಿಯಾಗಿರುವಂತಹ ಈ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕ್ರಿಶ್ಚಿಯನ್ ಸಮುದಾಯದ ರೈತರಿಗೆ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿಕೊಳ್ಳಲು ನೀಡಲಾಗುವ ಸಹಾಯಧನ ಮೊತ್ತ ಸುಮಾರು ₹5 ಲಕ್ಷ ರೂಪಾಯಿಗಳು. ಈ ಹಣದಿಂದ ರೈತರು ತಮ್ಮ ಜಮೀನಿನಲ್ಲಿ ಉಚಿತವಾಗಿ ಬೋರ್ವೆಲ್ ಕೊರೆಸಿಕೊಳ್ಳಬಹುದು.

ಯಾವೆಲ್ಲ ದಾಖಲೆಗಳು ಕಡ್ಡಾಯ?

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ
  • ಭೂಮಿಯ ದಾಖಲೆ (RTC/ಪಹಣಿ)

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ನೀವು ಈ ಯೋಜನೆಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಾವು ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕನ್ನು ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ ಸೈಟಿಗೆ ತೆರಳಿ.
  • ಇದಾದಮೇಲೆ ಅಲ್ಲಿ ನಿಮಗೆ ಕೇಳಲಾಗುವಂತಹ ನಿಮ್ಮ ಎಲ್ಲಾ ಭೂಮಿಯ ವಿವರ ಮತ್ತು ಇತರೆ ಎಲ್ಲಾ ವಿವರಗಳನ್ನು ಒಂದೊಂದಾಗಿ ತಪ್ಪಿಲ್ಲದಂತೆ ಭರ್ತಿ ಮಾಡಿ.
  • ಈಗ ನಿಮಗೆ ಅಲ್ಲಿ ನಿಮ್ಮ ದಾಖಲೆಗಳನ್ನು ಕೇಳಲಾಗುತ್ತದೆ. ಅವುಗಳನ್ನು ಕೂಡ ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಿ.
  • ಇದಾದ ಮೇಲೆ ನೀವು ಭರ್ತಿ ಮಾಡಿರುವಂತಹ ಎಲ್ಲ ಮಾಹಿತಿಗಳು ಸರಿ ಇದೆಯಾ ಎಂದು ಚೆಕ್ ಮಾಡಿಕೊಂಡು ನಂತರ “Submit” ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಹೀಗೆ ನಿಮ್ಮ ಅರ್ಜಿ ಸಲ್ಲಿಕೆ ಆದಮೇಲೆ ನಿಮಗೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ 30 ರಿಂದ 60 ದಿನಗಳ ಒಳಗೆ ನಿಮ್ಮ ಸಹಾಯಧನವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುವ ಮಾಹಿತಿ ತಿಳಿಸುತ್ತಾರೆ ಇದಾದ ಮೇಲೆ ನಿಮ್ಮ ಜಮೀನಿನಲ್ಲಿ ನೀವು ಬೋರ್ವೆಲ್ ಅನ್ನು ಕೊರೆಸಿಕೊಳ್ಳಬಹುದು.

ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

Leave a Comment