WhatsApp Float Button

Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಆರಂಭವಾಗಿದೆ! ಕೊನೆ ದಿನಾಂಕದೊಳಗೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿ!

Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಆರಂಭವಾಗಿದೆ! ಕೊನೆ ದಿನಾಂಕದೊಳಗೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿ!

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಶುರುವಾಗಿದ್ದು ನೀವೇನಾದರೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಬೇಕು ಅಥವಾ ಏನಾದರೂ ಅಪ್ಡೇಟ್ ಮಾಡಬೇಕು ಅಂದುಕೊಂಡಿದ್ದರೆ ನಿಮಗೆ ಇದು ಅತ್ಯಂತ ಒಳ್ಳೆಯ ಸಮಯ ಎಂದು ಹೇಳಬಹುದು. ಏಕೆಂದರೆ ರೇಷನ್ ಕಾರ್ಡ್ ತಿದ್ದುಪಡಿ ಎರಡು ತಿಂಗಳು ನಂತರ ಶುರುವಾಗಿದ್ದು ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಮಾಡಿಸಬೇಕೆಂದರೆ ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ. ರೇಷನ್ ಕಾರ್ಡ್ ತಿದ್ದುಪಡಿ ಹೇಗೆ ಅರ್ಜಿ ಸಲ್ಲಿಸಬೇಕು? ತಿದ್ದುಪಡಿಗೆ ಕೊನೆ ದಿನಾಂಕ ಯಾವುದು? ಈ ಎಲ್ಲಾ ಮಾಹಿತಿ ಬಗ್ಗೆ ವಿವರವನ್ನು ಕೆಳಗೆ ನೀಡಲಾಗಿದೆ ಓದಿರಿ.

ಇದೇ ರೀತಿ ಎಲ್ಲಾ ಹೊಸ ಹೊಸ ಅಪ್ಡೇಟ್ಗಳಿಗಾಗಿ ಮತ್ತು ಮಾಹಿತಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಿ.

Ration Card Correction Starts: ರೇಷನ್ ಕಾರ್ಡ್ ತಿದ್ದುಪಡಿ ಶುರು!

ಸ್ನೇಹಿತರೆ ನಿಮಗೇನಾದರೂ ಹೊಸದಾಗಿ ಮದುವೆಯಾಗಿದ್ದರೆ, ಅಥವಾ ನಿಮ್ಮ ಕುಟುಂಬದಲ್ಲಿ ಯಾವುದಾದರೂ ಸದಸ್ಯರು ನಿಧನ ಹೊಂದಿದ್ದರೆ. ಅಥವಾ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು ಅಥವಾ ತೆಗೆಸಬೇಕು ಅಂದುಕೊಂಡಿದ್ದರೆ ಇದು ನಿಮಗೆ ಸುವರ್ಣ ಅವಕಾಶ, ಹೌದು ಸ್ನೇಹಿತರೆ ಈ ಬಾರಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಸರ್ಕಾರದಿಂದ ಬಹಳ ಸಮಯ ಅವಕಾಶ ನೀಡಿದ್ದಾರೆ.

ಹೌದು ಸುಮಾರು ಎರಡುವರೆ ತಿಂಗಳ ಕಾಲ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಅವಕಾಶ ನೀಡಲಾಗಿದ್ದು ಈ ಸಮಯವನ್ನು ನೀವು ಸದುಪಯೋಗಪಡಿಸಿಕೊಂಡು ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿಗಳು ಮಾಡಿಸಬೇಕಾದಲ್ಲಿ ಬೇಗ ಅರ್ಜಿಯನ್ನು ಸಲ್ಲಿಸಿ.

Ration Card ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ?

ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಬಯಸಿದರೆ ಇದೇ ವರ್ಷ 2026ರ ಮಾರ್ಚ್ ತಿಂಗಳ 31ನೇ ತಾರೀಕಿನ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ನೀವು ಇನ್ನು ಬಹಳ ಸಮಯ ಕಾಯಬೇಕಾಗುತ್ತದೆ ಹಾಗಾಗಿ ಕೂಡಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಿ.

ಏನೆಲ್ಲಾ ತಿದ್ದುಪಡಿ ಮಾಡಿಸಬಹುದು?

  • ನೀವೇನಾದ್ರೂ ಹೊಸದಾಗಿ ಮದುವೆಯಾಗಿದ್ದರೆ ನಿಮ್ಮ ಮಡದಿಯ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬಹುದು.
  • ನಿಮ್ಮ ಹೆಸರು ರೇಷನ್ ಕಾರ್ಡ್ ನಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಬಹುದು.
  • ಹಾಗೆಯೇ ನಿಮ್ಮ ಫೋಟೋವನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಬದಲಿಸಿ ತಿದ್ದುಪಡಿ ಮಾಡಬಹುದು.
  • ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ತೀರಿಕೊಂಡಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಸಬಹುದು.

ಅರ್ಜಿ ಸಲ್ಲಿಸಲು ದಾಖಲೆಗಳು ಏನು ಬೇಕು?

  • ಸದಸ್ಯರ ಆಧಾರ್ ಕಾರ್ಡ್
  • ಮಕ್ಕಳ ಜನನ ಪ್ರಮಾಣ ಪತ್ರ (ಮಕ್ಕಳ ಹೆಸರು ಸೇರ್ಪಡೆಗೆ)
  • ಪೋಷಕರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮದುವೆ ಪ್ರಮಾಣ ಪತ್ರ (marriage certificate)

ಅರ್ಜಿ ಸಲ್ಲಿಸುವುದು ಹೇಗೆ?

ಈ ರೇಷನ್ ಕಾರ್ಡ್ ತಿದ್ದುಪಡಿಗೆ ನೀವು ಅರ್ಜಿಯನ್ನು ಸಲ್ಲಿಸಲು ಮೊದಲನೆಯದಾಗಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಸರ್ಕಾರಿ ಸೇವಾ ಕೇಂದ್ರಕ್ಕೆ ತೆರಳಿ (ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್) ಇಲ್ಲವಾದಲ್ಲಿ ಯಾವುದಾದರೂ ಒಂದು ಸೈಬರ್ ಸೆಂಟರ್ಗೆ ತೆರಳಿ ಅಲ್ಲಿ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಅಥವಾ ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣವಾದ ahara.kar.nic ಗೆ ತೆರಳಿ ನೀವು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.

Leave a Comment