WhatsApp Float Button

BPL Ration Card: ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! ರೇಷನ್ ಕಾರ್ಡ್ ಬಗ್ಗೆ ಮುಖ್ಯವಾದ ಮಾಹಿತಿ!

BPL Ration Card: ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! ರೇಷನ್ ಕಾರ್ಡ್ ಬಗ್ಗೆ ಮುಖ್ಯವಾದ ಮಾಹಿತಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವಂತಹ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಅನುಕೂಲಕರವಾಗುವಂತೆ ಮಾಡಿದೆ ಇಂತಹ ಯೋಜನೆಗಳಲ್ಲಿ ಒಂದಾಗಿರುವ ಯೋಜನೆ ಅಂದರೆ ಅದು (BPL Ration Card) ಬಿಪಿಎಲ್ ರೇಷನ್ ಕಾರ್ಡ್ ವಿತರಣೆ. ಈ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳು ಹಾಗೂ ರೇಷನ್ ಕೀಟಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಸಾಕಷ್ಟು ಬಡತನ ರೇಖೆಗಿಂತ ಕಡಿಮೆ ಇರುವಂತಹ ಕುಟುಂಬಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ.

ಬಿಪಿಎಲ್ ರೇಷನ್ ಕಾರ್ಡ್ ಬಗ್ಗೆ ವಿವರಣೆ!

ಬಿಪಿಎಲ್ ರೇಷನ್ ಕಾರ್ಡ್ ವಿವರಣೆ ನೋಡುವುದಾದರೆ ಈ ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಅಂದರೆ (Below Poverty Level) ಇರುವಂತಹ ಕುಟುಂಬಗಳಿಗೆ ನೀಡಲಾಗುವಂತಹ ವಿಶೇಷ ಪಡಿತರ ಕಾರ್ಡ್. ಈ ಪಡಿತರ ಚೀಟಿಯನ್ನು ಪಡೆದುಕೊಂಡಂತಹ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಹಾಗೂ ಇನ್ನಿತರ ಎಲ್ಲಾ ಗೃಹ ಉಪಯೋಗಿ ಮತ್ತು ಆಹಾರ ಕಿಟ್ ಗಳ ಜೊತೆಗೆ ಇನ್ನು ಸಾಕಷ್ಟು ಲಾಭಗಳನ್ನು ಸರ್ಕಾರದ ವತಿಯಿಂದ ಈ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಂತಹ ಫಲಾನುಭವಿಗಳಿಗೆ ನೀಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ನೀಡವ ಉದ್ದೇಶವೇನು?

ಈ ಬಿಪಿಎಲ್ ಕಾರ್ಡನ್ನು ಅರ್ಹ ಫಲಾನುಭವಿಗಳಿಗೆ ನೀಡಲು ನಮ್ಮ ಸರ್ಕಾರದ ಮುಖ್ಯ ಉದ್ದೇಶಗಳು ಏನೆಂದರೆ:

  • ಬಡ ಕುಟುಂಬದ ಮಕ್ಕಳಿಗೆ ಅಪೌಷ್ಟಿಕತೆ ಕಾಡದಂತೆ ನೋಡಿಕೊಳ್ಳುವುದು.
  • ಬಡ ಕುಟುಂಬದ ಎಲ್ಲಾ ಅರ್ಹ ಸದಸ್ಯರಿಗೆ ಆಹಾರ ಭದ್ರತೆಯನ್ನು ನೀಡುವುದು.
  • ಆರ್ಥಿಕವಾಗಿ ಹಿಂದುಳಿದಿರುವಂತಹ ಬಡ ಕುಟುಂಬದ ಎಲ್ಲ ಜನರಿಗೆ ನೆರವಾಗುವುದು.
  • ನಮ್ಮ ರಾಜ್ಯ ಸರ್ಕಾರದ ಎಲ್ಲಾ ವಿವಿಧ ಯೋಜನೆಗಳನ್ನು ಅರ್ಹತೆಯುಳ್ಳ ಜನರಿಗೆ ತಲುಪಿಸುವುದು ಬಿಪಿಎಲ್ ಕಾರ್ಡ್ ನ ಮುಖ್ಯ ಉದ್ದೇಶ ಆಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು?

ನಮ್ಮ ರಾಜ್ಯ ಸರ್ಕಾರವು ನೀಡಿರುವಂತಹ ಮಾನದಂಡಗಳ ಮೂಲಕ ನೋಡುವುದಾದರೆ ಬಿಬಿಎಲ್ ಕಾಡುಪಡೆಯಲು ಫಲಾನುಭವಿಗಳು ಕೆಲವೊಂದು ಅರ್ಹತೆಗಳನ್ನು ಒಳಗೊಂಡಿರಬೇಕು. ಆ ಇಲ್ಲ ಅರ್ಹತೆಗಳು ನಿಂತಿವೆ:

  • ನಮ್ಮ ರಾಜ್ಯ ಸರ್ಕಾರವು ನಿಗದಿಪಡಿಸಿರುವಂತೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ಕುಟುಂಬದ ವಾರ್ಷಿಕ ಆದಾಯವು ನಿಗದಿಪಡಿಸಿದ ಆದಾಯಕ್ಕಿಂತ ಕಡಿಮೆ ಇರಬೇಕು.
  • ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ಕುಟುಂಬದ ಬಳಿ ಯಾವುದೇ ರೀತಿಯಾದಂತಹ ನಾಲ್ಕು ಚಕ್ರದ ವಾಹನಗಳು ಇರಬಾರದು.
  • ರೇಷನ್ ಕಾರ್ಡ್ ಪಡೆಯುವ ಕುಟುಂಬದ ಸದಸ್ಯರು ಯಾವುದೇ ರೀತಿಯ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
  • ಹಾಗೆಯೇ ರೇಷನ್ ಕಾರ್ಡ್ ಪಡೆಯುವ ಕುಟುಂಬವು ಮಿತಿಗಿಂತ ಹೆಚ್ಚಿಗೆ ಆಸ್ತಿಯನ್ನು ಹೊಂದಿರಬಾರದು.
  • ಅದೇ ರೀತಿ ಸರ್ಕಾರಕ್ಕೆ ಯಾವುದೇ ರೀತಿಯಾದಂತಹ ತೆರಿಗೆಗಳನ್ನು ಕಟ್ಟುತ್ತಿರಬಾರದು.
  • ಅದೇ ರೀತಿ ಬಡತನ ರೇಖೆಗಿಂತ ಕೆಳಗಿರುವಂತಹ ಎಲ್ಲಾ ವರ್ಗದ ಕುಟುಂಬಗಳಿಗೆ ಮೊದಲ ಆದ್ಯತೆ.

BPL Ration Card ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು!

ಬಡತನ ರೇಖೆಗಿಂತ ಕೆಳಗಿರುವಂತಹ ನಮ್ಮ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡನ್ನು ವಿತರಿಸಲಾಗುತ್ತದೆ ಹಾಗೂ ಈ ಕುಟುಂಬಗಳಿಗೆ ಸಿಗುವಂತಹ ಸೌಲಭ್ಯಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಕಡಿಮೆ ದರದಲ್ಲಿ ಎಲ್ಲಾ ಬಡ ಕುಟುಂಬಗಳಿಗೆ ಅಡುಗೆ ಎಣ್ಣೆ, ಸಕ್ಕರೆ, ಗೋದಿ, ಅಕ್ಕಿ, ಉಪ್ಪು ಹಾಗೂ ಕೇಂದ್ರ ಮತ್ತು ನಮ್ಮ ರಾಜ್ಯ ಸರ್ಕಾರಗಳ ಎಲ್ಲಾ ರೀತಿಯ ವಿವಿಧ ಯೋಜನೆಗಳ ಲಾಭಗಳನ್ನು ಕೂಡ ಪಡೆದುಕೊಳ್ಳಬಹುದು. ಅದೇ ರೀತಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಕೂಡ ಫಲಾನುಭವಿಗಳು ಪಡೆದುಕೊಳ್ಳಬಹುದು. ಹೀಗೆ ಹಲವಾರು ಯೋಜನೆಗಳು ಲಾಭವನ್ನು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಪಡೆದುಕೊಳ್ಳಬಹುದಾಗಿದೆ.

BPL ಮತ್ತು APL ರೇಷನ್ ಕಾರ್ಡ್ ಗಳ ನಡುವಿನ ವ್ಯತ್ಯಾಸ ಹೀಗಿವೆ!

ಬಿಪಿಎಲ್ ಕಾರ್ಡ್:

  • ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆ ಎಂದರೆ ಅದು ಮೊದಲನೇದಾಗಿ ಆದಾಯ ಮಿತಿ ಕಡಿಮೆ ಇರಬೇಕು.
  • ಹಾಗೆ ಬಿಬಿಎಲ್ ಕಾಡು ದಾರರಿಗೆ ಸಬ್ಸಿಡಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ.
  • ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಲ್ಲಿಯೂ ಕೂಡ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
  • ಅದೇ ರೀತಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಮೊದಲ ಮತ್ತು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಎಪಿಎಲ್ ಕಾರ್ಡ್:

  • ಎಪಿಎಲ್ ಕಾರ್ಡ್ ಸಿಗುವುದು ಹೆಚ್ಚು ಆಸ್ತಿ ಉಳ್ಳವರು ಹಾಗೂ ಆರ್ಥಿಕವಾಗಿ ಸದೃಢರಾಗಿರುವಂತಹ ಎಲ್ಲ ಜನರಿಗೆ ಎಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
  • ಎಪಿಎಲ್ ಕಾರ್ಡ್ ನಲ್ಲಿ ಆದಾಯ ಮಿತಿಯು ಹೆಚ್ಚಿಗೆ ಇರುತ್ತದೆ.
  • ಎಲ್ಲ ಯೋಜನೆಗಳಲ್ಲೂ ಕಡಿಮೆ ಪ್ರಮಾಣದ ಸಬ್ಸಿಡಿಯನ್ನು ಪಡೆಯಬಹುದು.
  • ಅದೇ ರೀತಿ ಎಲ್ಲ ಯೋಜನೆಗಳಲ್ಲೂ ಕೂಡ ಕಡಿಮೆ ಆದ್ಯತೆ ಸಿಗುತ್ತದೆ ಹಾಗೂ ಲಾಭವು ಕೂಡ ಕಡಿಮೆ ಇರುತ್ತದೆ.

ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

  • ಮೊದಲನೇದಾಗಿ ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಫಲಾನುಭವಿಗಳು ತಮ್ಮ ಹತ್ತಿರದಲ್ಲಿ ಇರುವಂತಹ ಸರ್ಕಾರಿ ಸಹಾಯ ಕೇಂದ್ರಗಳಿಗೆ ತೆರಳಿ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು.
  • ಈಗ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿಗಳು ವರ್ಷಕ್ಕೆ ಎರಡು ಬಾರಿ ಕರೆಯಲ್ಪಡುತ್ತವೆ ಆ ಸಮಯಗಳಲ್ಲಿ ಫಲಾನುಭವಿಗಳು ಸಹಾಯ ಕೇಂದ್ರಗಳಿಗೆ ತೆರಳಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ರೇಷನ್ ಕಾರ್ಡ್ ಗಳು ಹೆಚ್ಚಾಗಿ ರದ್ದಾಗುತ್ತಿವೆ ಯಾಕೆ?

ಸ್ನೇಹಿತರೆ, ನಮ್ಮ ರಾಜ್ಯದಲ್ಲಿರುವಂತಹ ಬಡ ಮತ್ತು ಮಧ್ಯಮ ವರ್ಗದಲ್ಲಿ ಇರುವಂತಹ ಎಲ್ಲಾ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಈ ರೇಷನ್ ಕಾರ್ಡ್ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. ಹೀಗೆ ನೀಡುವ ಈ ರೇಷನ್ ಕಾರ್ಡ್ ನಿಂದ ಬಡ ಕುಟುಂಬದ ಎಲ್ಲಾ ಫಲಾನುಭವಿಗಳು ಉಚಿತವಾಗಿ ಪಡಿತರವನ್ನು ಪಡೆದುಕೊಳ್ಳ ಬಹುದು. ಹಾಗೂ ಸರ್ಕಾರದ ಎಲ್ಲ ಯೋಜನೆಗಳಿಗೂ ಕೂಡ ಅವರು ಲಾಭವನ್ನು ಪಡೆದುಕೊಳ್ಳಬಹುದು.

ಆದರೆ ನಕಲಿ ದಾಖಲೆಗಳನ್ನು ಬಳಸಿಕೊಂಡು ರೇಷನ್ ಕಾರ್ಡ್ಗಳನ್ನು ಅನರ್ಹ ಜನರು ಕೂಡ ಮಾಡಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಹೀಗಾಗಿ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮವನ್ನು ಇಂತಹ ಅನರ್ಹ ಜನರ ಮೇಲೆ ಜರುಗಿಸಿದೆ. ಇದರ ಇದರ ಬಗ್ಗೆ ರಾಜ್ಯ ಸರ್ಕಾರ ಈ ಹಿಂದೆ ಎಚ್ಚರಿಕೆ ನೀಡಿದ್ದರು ಸಹ ಸಾಕಷ್ಟು ಜನ ಫಲಾನುಭವಿಗಳು ಅನರ್ಹರಾಗಿದ್ದರು ಕೂಡ ಪಡಿತರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಿಲ್ಲ. ಹಾಗಾಗಿ ಸರ್ಕಾರವು ಅಂತಹ ಎಲ್ಲ ಅನರ್ಹ ಜನರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವುದಾಗಿ ಘೋಷಿತ್ತು.

ಇದರ ಪರಿಣಾಮವಾಗಿ ಈಗ ನಮ್ಮ ರಾಜ್ಯದಲ್ಲಿ ಸುಮಾರು 4 ವರ್ಷಗಳಲ್ಲಿ 6 ರಿಂದ 8 ಲಕ್ಷ ರೇಷನ್ ಕಾರ್ಡ್ ಗಳು ರದ್ದಾಗಿವೆ. ಹೀಗಾಗಿ ಇನ್ನು ಮುಂದೆ ಯಾರೂ ಕೂಡ ರೇಷನ್ ಕಾರ್ಡ್ ಗಳನ್ನು ನಕಲಿ ದಾಖಲೆಗಳನ್ನು ಕೊಟ್ಟು ಮಾಡಿಸಿಕೊಳ್ಳಬಾರದು ಎಂದು ಆದೇಶ ಸರ್ಕಾರ ಈ ರೀತಿಯಾದ ಮಹತ್ತರ ಆದೇಶವನ್ನು ಹೊರಡಿಸಿ ಕಟ್ಟಲಿಟ್ಟಾದ ಕ್ರಮವನ್ನು ಜರುಗಿಸಿದೆ.

ಅದೇ ರೀತಿ ನಕಲಿ ದಾಖಲೆಗಳನ್ನು ಬಳಸಿಕೊಂಡು ರೇಷನ್ ಕಾರ್ಡ್ಗಳನ್ನು ಮಾಡಿಸಿ ಕೊಡುತ್ತಿದ್ದ ಜಾಗಗಳ ಮೇಲೆ ಕೂಡ ರಾಜ್ಯ ಸರ್ಕಾರವು ನಿಗಾ ಇಟ್ಟು ಅಂಥವರ ಜಾಗಗಳ ಮೇಲು ಕೂಡ ದಾಳಿ ನಡೆಸಿ ಅದನ್ನು ನಿಲ್ಲಿಸಿದೆ. ಹಾಗೆ ಈ ರೀತಿ ಇನ್ನು ಮುಂದೆ ಮಾಡುವವರ ಮೇಲೆ ಕಾನೂನು ಕ್ರಮವನ್ನು ಕಠಿಣವಾಗಿ ವಿಧಿಸಲಾಗುವುದು ಮತ್ತು ಅಂಥವರ ವಿರುದ್ಧ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

Leave a Comment