WhatsApp Float Button

Ashraya Vasati Yojana: ಸರ್ಕಾರದಿಂದ ಸ್ವಂತ ಮನೆ ಕಟ್ಟಲು ₹2 ಲಕ್ಷ ರೂಪಾಯಿ ಸಹಾಯಧನ! ಕೂಡಲೆ ಅರ್ಜಿ ಸಲ್ಲಿಸಿ!

Ashraya Vasati Yojana: ಸರ್ಕಾರದಿಂದ ಸ್ವಂತ ಮನೆ ಕಟ್ಟಲು ₹2 ಲಕ್ಷ ರೂಪಾಯಿ ಸಹಾಯಧನ! ಕೂಡಲೆ ಅರ್ಜಿ ಸಲ್ಲಿಸಿ!

ಯಾರಿಗೆಲ್ಲ ಸ್ವಂತ ಮನೆ ಕಟ್ಟಿಕೊಳ್ಳಲು ಆಸೆ ಇದೆಯೋ ಅಂತಹವರಿಗೆ ಭರ್ಜರಿ ಗುಡ್ ನ್ಯೂಸ್, ಹೌದು ನಮ್ಮ ಕರ್ನಾಟಕ ಸರ್ಕಾರದ ಆಶ್ರಯ ಯೋಜನೆಯ ಅಡಿಯಲ್ಲಿ (Ashraya Vasati Yojana) ಅಂತ ಮನೆ ಕಟ್ಟಿಕೊಳ್ಳಲು ಅರ್ಹ ಫಲಾನುಭವಿಗಳಿಗೆ ಬರೋಬರಿ 2 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಈ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು ಇರಬೇಕು? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು? ಈ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ.

ಸ್ನೇಹಿತರೆ ಸ್ವಂತ ಮನೆ ಕಟ್ಟುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ ಎಲ್ಲರಿಗೂ ಕೂಡ ವಾಸ ಮಾಡುವುದಕ್ಕೆ ಅವರದ್ದೆ ಆದ ಸ್ವಂತ ಮನೆ ಬೇಕು, ಈಗ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿ ಹಲವಾರು ಹೊಸ ಹೊಸ ವಿಷಯಗಳನ್ನು ಮತ್ತು ಸುದ್ದಿಗಳನ್ನು ನಿಮಗಾಗಿ ನಾವು ನಮ್ಮ ಜಾಲತಾಣದಲ್ಲಿ ಪ್ರತಿನಿತ್ಯ ನೀಡುತ್ತೇವೆ ಅವುಗಳನ್ನು ನೀವು ಮೊದಲು ನೋಡಲು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

Ashraya Vasati Yojana ಎಂದರೆ ಏನು?

ಸ್ನೇಹಿತರೆ ಈ ಆಶ್ರಯ ವಸತಿ ಯೋಜನೆ ಎಂದರೆ ಬಡತನ ರೇಖೆಗಿಂತ ಕೆಳಗಿರುವಂತಹ ಎಲ್ಲಾ ಬಡ ಕುಟುಂಬಗಳಿಗೆ ಸರ್ಕಾರದಿಂದ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡುವಂತಹ ಯೋಜನೆಯಾಗಿದೆ. ನಿಮ್ಮದೇ ಹೆಸರಿನಲ್ಲಿ ನಿವೇಶನ ಇದ್ದು ಹಣದ ಸಮಸ್ಯೆಯಿಂದಾಗಿ ಮನೆ ಕಟ್ಟಲು ನಿಮಗೆ ತೊಂದರೆ ಆಗುತ್ತಿದ್ದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ನಿಮಗೆ ಹಂತ ಹಂತವಾಗಿ ಹಣ ನೀಡುವ ಮೂಲಕ ಸಹಾಯ ಮಾಡುತ್ತದೆ.

ಈ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಮೊದಲ ಆದ್ಯತೆಯನ್ನು (SC/ST) ಎಸ್ಸಿ/ಎಸ್ಟಿ ವರ್ಗದ ಎಲ್ಲಾ ಕುಟುಂಬಗಳಿಗೆ ನೀಡಲಾಗುತ್ತಿದೆ. ಹಾಗಾಗಿ (SC/ST) ಎಸ್ಸಿ/ಎಸ್ಟಿ ವರ್ಗದ ಜನರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಎಷ್ಟು ಸಬ್ಸಿಡಿ (Subsidy) ನೀಡಲಾಗುತ್ತಿದೆ? ಇಲ್ಲಿದೆ ವಿವರ!

ಈ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯ ಸರ್ಕಾರ ಎಲ್ಲಾ ವರ್ಗದ ಜನಕ್ಕೆ ಒಂದೇ ರೀತಿಯಾದಂತಹ ಹಣವನ್ನು ಕೊಡುತ್ತಿಲ್ಲ. ಸರ್ಕಾರವು ಜಾತಿ ಹಾಗೂ ನೀವು ಇರುವ ಪ್ರದೇಶಗಳ ಅನುಗುಣವಾಗಿ ಅಂದರೆ ನೀವು ಸಿಟಿ ಅಥವಾ ಹಳ್ಳಿಯಲ್ಲಿ ವಾಸವಿರುವ ಅನುಗುಣವಾಗಿ ನಿಮಗೆ ಹಣ ನೀಡಲಾಗುತ್ತದೆ. ಇತರ ವಿವರ ಈ ಕೆಳಗಿದೆ:

ಅರ್ಜಿದಾರರ ಜಾತಿ/ವರ್ಗಗಳು ವಾಸವಿರುವ ಪ್ರದೇಶಸಹಾಯಧನದಲ್ಲಿ ಸಿಗುವ ಮೊತ್ತ
ಸಾಮಾನ್ಯ (General) ವರ್ಗದವರಿಗೆಗ್ರಾಮೀಣ₹1.20 ಲಕ್ಷ ರೂಪಾಯಿ
(SC/ST) ಎಸ್ಸಿ/ಎಸ್ಟಿ ವರ್ಗದವರಿಗೆಗ್ರಾಮೀಣ₹1.75 ಲಕ್ಷ ರೂಪಾಯಿ
(SC/ST) ಎಸ್ಸಿ/ಎಸ್ಟಿ ವರ್ಗದವರಿಗೆನಗರ ₹2.00 ಲಕ್ಷ ರೂಪಾಯಿ

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು?

ಈ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳ ವಿವರ ಈ ಕೆಳಗೆ ವಿವರಿಸಲಾಗಿದೆ:

  • ಮೊದಲನೆಯದಾಗಿ ನೀವು ನಮ್ಮ ಕರ್ನಾಟಕದ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ಬಳಿ ಬಿಪಿಎಲ್ (BPL) ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕು.
  • ಅರ್ಜಿ ಸಲ್ಲಿಸುವ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  • ಗೆಲ್ಲೋದಕ್ಕಿಂತ ಮುಖ್ಯವಾಗಿ ನಿಮ್ಮ ಬಳಿ ಅಥವಾ ನಿಮ್ಮ ಕುಟುಂಬಸ್ಥರ ಹೆಸರಲ್ಲಿ ಯಾವುದೇ ರೀತಿಯ ಸ್ವಂತ ಮನೆ ಇರಬಾರದು.
  • ಈ ಯೋಜನೆಗೆ ಅರ್ಜಿ ಸಲ್ಲಿಸುವ ವರ ಬಳಿ ಅವರ ಹೆಸರಲ್ಲಿ ಖಾಲಿ ಸೈಟ್ ಅಥವಾ ಜಾಗ ಇರಬೇಕು ಇದು ಕಡ್ಡಾಯ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಸ್ನೇಹಿತರೆ ಈ ವಸತಿ ಆಶ್ರಯ ಯೋಜನೆಯಡಿಯಲ್ಲಿ ನೀವು ಸುಲಭವಾಗಿ ಆನ್ಲೈನ್ ನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಒಂದು ಸೈಬರ್ ಸೆಂಟರ್ಗೆ ಅಥವಾ ಗ್ರಾಮ ಒನ್ ಸಹಾಯ ಕೇಂದ್ರಕ್ಕೆ ಹೋಗಿ ಆದಿ ಸಲ್ಲಿಸಬಹುದು.

  • ಮೊದಲನೆಯದಾಗಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತವಾದ ಜಾಲತಾಣಕ್ಕೆ ನೀವು ಭೇಟಿ ನೀಡಬೇಕು. ಇಲ್ಲಿ ಕ್ಲಿಕ್ ಮಾಡಿ: ashraya.karnataka.gov.in
  • ಅಲ್ಲಿ ಭೇಟಿ ನೀಡಿದ ನಂತರ ನಿಮ್ಮ ಜಿಲ್ಲೆಯ ತಾಲೂಕು ಮತ್ತು ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಹೆಸರನ್ನು ಆಯ್ಕೆಮಾಡಿಕೊಳ್ಳಿ.
  • ಇದಾದ ನಂತರ ನಿಮ್ಮ ರೇಷನ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಸರಿಯಾಗಿ ನಮೂದಿಸಿ.
  • ಇದಾದ ನಂತರ ನಿಮ್ಮ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರದ RD Number ಸಂಖ್ಯೆಯನ್ನು ನಮೂದಿಸಿ.
  • ನಂತರ ನೀವು ಸಲ್ಲಿಸಿರುವ ಎಲ್ಲಾ ವಿವರಗಳು ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ನಂಬರ್ಗೆ ಲಿಂಕ್ ಇರುವ ಫೋನ್ ನಂಬರ್ ಗೆ ಓಟಿಪಿ (OTP) ಬರುತ್ತದೆ ಅದನ್ನು ನಮೂದಿಸಿ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ.

ಈ ಒಂದು ಆಶ್ರಯ ಯೋಜನೆ ಅಡಿ ಸಾಕಷ್ಟು ನಿರಾಶ್ರಿತರು ತಮ್ಮ ಮನೆಗಳನ್ನು ಕೂಡ ಕಟ್ಟಿಕೊಳ್ಳಬಹುದು ಹಾಗೆ ಮನೆ ಕಟ್ಟುದುಕೊಳ್ಳುವುದರ ಜೊತೆಗೆ ನಿಮಗೆ ಮನೆ ಕಟ್ಟಲು ಸಹಾಯಧನವನ್ನು ಕೂಡ ಈ ಒಂದು ಯೋಜನೆಯಿಂದ ಸಿಗಲಿದೆ ಅದೇ ರೀತಿ ಸಾಮಾನ್ಯ ವರ್ಗದವರಿಗೆ ಸಬ್ಸಿಡಿ ದೊರೆಯಲಿದೆ ಮತ್ತು ಎಸ್ಸಿ ಎಸ್ಟಿ ವರ್ಗದವರಿಗೂ ಕೂಡ ಸಬ್ಸಿಡಿಯನ್ನು ಸರ್ಕಾರದಿಂದ ದೊರಕಲಿತೆ. ಅದೇ ರೀತಿ ಎಸ್ ಸಿ ಎಸ್ ಟಿ ವರ್ಗದವರಿಗೆ ಸ್ವಲ್ಪ ಹೆಚ್ಚಿನ ಸಬ್ಸಿಡಿ ದೊರೆಯಲಿದ್ದು ಅದರಲ್ಲಿ ನಗರಗಳಲ್ಲಿ ವಾಸವಿರುವಂತಹ ಎಸ್ಸಿ ಎಸ್ಟಿ ನಿವಾಸಿಗಳಿಗೆ ಜಾಸ್ತಿ ಸಹಾಯಧನ ಸಿಗಲಿದ್ದು ಈ ಸಹಾಯದಿಂದ ಉಪಯೋಗಿಸಿಕೊಂಡು ಅವರು ತಮ್ಮ ಮನೆಯನ್ನು ನಿರ್ಮಿಸಿಕೊಳ್ಳಬಹುದು.

ಈ ಒಂದು ಯೋಜನೆಯಿಂದ ಸಾಕಷ್ಟು ಬಡ ಕುಟುಂಬಗಳಿಗೆ ತುಂಬಾನೇ ಅನುಕೂಲವಾಗಲಿದ್ದು ಅವರು ಈ ಒಂದು ಬಸವ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ತಮ್ಮ ಮನೆಯನ್ನು ನಿರ್ಮಿಸಿಕೊಂಡರೆ ಅವರಿಗೆ ಹೆಚ್ಚಿನ ಲಾಭವಾಗಲಿದೆ ಮತ್ತು ತಮಗೆ ಇರಲು ಸೂರು ಕೂಡ ದೊರೆಯಲಿದೆ ಹಾಗಾಗಿ ಈ ಯೋಜನೆಗೆ ಆದಷ್ಟು ಬೇಗ ಅರ್ಜಿ ಸಲ್ಲಿಕೆ ಮಾಡಿ ಸಬ್ಸಿಡಿ ಯನ್ನು ಪಡೆಯುವ ಮೂಲಕ ನಿಮ್ಮ ಮನೆಯನ್ನು ನಿರ್ಮಿಸಿಕೊಳ್ಳಿ.

ನೀವು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಶುರು ಮಾಡಲಾಗುತ್ತದೆ ಹಾಗೂ ಈ ಅರ್ಜಿ ಪ್ರಕ್ರಿಯೆಯ ಮೂಲಕ ನೀವು ಸಲ್ಲಿಸಲಾಗಿರುವ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ನಂತರ ನಿಮಗೆ ಎಷ್ಟು ಸಬ್ಸಿಡಿ ದೊರೆಯಲಿದೆ ಎಂದು ಎಸ್ಎಂಎಸ್ ಮೂಲಕ ನಿಮಗೆ ತಿಳಿಸಲಾಗುತ್ತದೆ ಅಥವಾ ಕರೆಮಾಡುವ ಮೂಲಕ ನಿಮಗೆ ತಿಳಿಸಲಾಗುತ್ತದೆ ಹಾಗಾಗಿ ನಿಮ್ಮ ಊರಿನ ಅಥವಾ ನಿಮ್ಮ ಗ್ರಾಮದ ಪಂಚಾಯತಿಯ ಜೊತೆ ನೀವು ನಿರಂತರ ಸಂಪರ್ಕದಲ್ಲಿ ಇದ್ದರೆ ಈ ಕೆಲಸ ಇನ್ನೂ ಸುಲಭವಾಗಲಿದೆ.

ಜಾಸ್ತಿ ಜನರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸದೇ ಇರುವ ಕಾರಣ ಅರ್ಜಿ ಹಾಕುವ ಎಲ್ಲಾ ಜನರಿಗೆ ಮತ್ತು ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಸಬ್ಸಿಡಿ ಹಣವನ್ನು ಕೂಡ ಸರ್ಕಾರದ ನಿಯಮಗಳಂತೆ ಮತ್ತು ಮಿತಿಯು ಮೀರದಂತೆ ನೀಡಿ ಅವರಿಗೆ ಸಬ್ಸಿಡಿ ಹಣ ದೊರೆಯುವಂತೆ ಮಾಡುವುದು ಎಲ್ಲಾ ಪಂಚಾಯಿತಿಗಳು ಕೆಲಸವಾಗಿದೆ.

ಇದೇ ರೀತಿಯಾದ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯ ನಾವು ನಿಮಗಾಗಿ ನಮ್ಮ ಕನ್ನಡ ಲಕ್ಷ್ಮಿ ಜಾಲತಾಣದಲ್ಲಿ ನೀಡುತ್ತೇವೆ ಹಾಗಾಗಿ ನೀವು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗಳಿಗೆ ಕೂಡಲೇ ಜಾಯಿನ್ ಆಗಿ.

Leave a Comment