WhatsApp Float Button

BPL Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಕೊನೆ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿ!

BPL Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಕೊನೆ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ ನಾವು ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಬಗ್ಗೆ ಮುಖ್ಯವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. ಬಿಪಿಎಲ್ BPL Ration Card ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸ್ನೇಹಿತರೆ. ತುಂಬಾ ದಿನಗಳಿಂದ ನಮ್ಮ ರಾಜ್ಯದ ಹಲವು ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಬೇಕೆಂದು ಕಾಯುತ್ತಿದ್ದರು ಸ್ನೇಹಿತರೆ, ಈ ಒಂದು ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಪೂರ್ತಿ ಓದಿರಿ.

ಹೌದು ಸ್ನೇಹಿತರೆ ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳು ಇದ್ದೀರೋ ಅವರೆಲ್ಲರಿಗೂ ಕೂಡ ರಾಜ್ಯ ಸರ್ಕಾರವು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಮತ್ತೊಂದು ಅವಕಾಶ ನೀಡಿದೆ. ಇದಕ್ಕೆ ಹೇಗೆ ಸುಲಭವಾಗಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು? ಅರ್ಜಿಯಲ್ಲಿ ಸಲ್ಲಿಸಬೇಕು? ಈ ಎಲ್ಲ ಮಾಹಿತಿಗಳನ್ನ ಕೆಳಗಡೆ ಒಂದೊಂದಾಗಿ ವಿವರಿಸಲಾಗಿದೆ ಸಂಪೂರ್ಣವಾಗಿ ನೋಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲಾ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ರಾಜ್ಯ ಸರ್ಕಾರವು ಕೊನೆ ದಿನಾಂಕವನ್ನು ನಿಗದಿ ಮಾಡಿದ್ದು. ಅರ್ಜಿ ಸಲ್ಲಿಸುವಂತಹ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಬರೋಬ್ಬರಿ ಎರಡೂವರೆ ತಿಂಗಳವರೆಗೆ ಅವಕಾಶ ನೀಡಿದ್ದು (ಮಾರ್ಚ್ 31, 2026) ರವರೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಕೊನೆಯ ದಿನಾಂಕದೊಳಗೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿ ನಿಮ್ಮ ರೇಷನ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಮೇಲೆ ಭಾರಿ ₹500 ರೂ. ಸಬ್ಸಿಡಿ! ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! LPG Gas Cylinder Subsidy

ರೇಷನ್ ಕಾರ್ಡ್ ನಲ್ಲಿ ಏನೆಲ್ಲ ತಿದ್ದುಪಡಿ ಮಾಡಿಸಬಹುದು?

  • ನಿಮ್ಮ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹಳೆಯ ಫೋಟೋಗಳನ್ನು ಬದಲು ಮಾಡಿ ಹೊಸ ಫೋಟೋಗಳನ್ನು ಸೇರಿಸಿಕೊಳ್ಳಬಹುದು.
  • ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಯಾವುದಾದರೂ ಸದಸ್ಯರು ಮರಣ ಹೊಂದಿದ್ದಲ್ಲಿ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಸಿಕೊಳ್ಳಬಹುದು.
  • ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಏನಾದ್ರೂ ತಪ್ಪಾಗಿದ್ದರೆ ಅದನ್ನು ಕೂಡ ನೀವು ತಿದ್ದುಪಡಿ ಮಾಡಿಸಿಕೊಳ್ಳಬಹುದು.
  • ಅದೇ ರೀತಿ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ತಪ್ಪಾಗಿದ್ದರೆ ನಿಮ್ಮ ಹೆಸರನ್ನು ಕೂಡ ತಿದ್ದುಪಡಿ ಮಾಡಿಸಿ ಸರಿಪಡಿಸಿಕೊಳ್ಳಬಹುದು.
  • ಅದೇ ರೀತಿ ನಿಮ್ಮ ಮನೆಯಲ್ಲಿ ಹೊಸ ಸದಸ್ಯರು (ಸೊಸೆ, ಮಗು, ಪತ್ನಿ) ಸೇರ್ಪಡೆಯಾಗಿದ್ದರೆ ಅವರ ಹೆಸರನ್ನು ಕೂಡ ನೀವು ರೇಷನ್ ಕಾರ್ಡ್ ನಲ್ಲಿ ಸೇರಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ಸದಸ್ಯರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮಗುವಿನ ಜನನ ಪ್ರಮಾಣ ಪತ್ರ (ಮಗುವಿನ ಹೆಸರು ಸೇರ್ಪಡೆ ಮಾಡಬೇಕಾದಲ್ಲಿ)
  • ಮದುವೆ ಪ್ರಮಾಣ ಪತ್ರ (ಪತ್ನಿಯ/ ಸೊಸೆಯ ಹೆಸರು ಸೇರ್ಪಡೆ ಮಾಡಬೇಕಾದಲ್ಲಿ)

ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ಹತ್ತಿರದಲ್ಲಿ ಇರುವಂತಹ ಯಾವುದಾದರೂ ಒಂದು ಸರ್ಕಾರಿ ಸೇವಾ ಕೇಂದ್ರಕ್ಕೆ ತೆರಳಿ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಅಥವಾ ಯಾವುದಾದರೂ ಒಂದು ಸೈಬರ್ ಸೆಂಟರ್ ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯ ಅರ್ಜಿಯನ್ನು ಸಲ್ಲಿಸಬಹುದು.
  • ಅಥವಾ ನೀವು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಸರ್ಕಾರದ ಅಧಿಕೃತ ಜಾಲತಾಣವಾದ ( ahara.kar.nic.in ) ಮುಖಾಂತರ ನೀವು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.

Leave a Comment