WhatsApp Float Button

ಬೋರ್ವೆಲ್ ಕೊರಿಸಲು ಬರೋಬ್ಬರಿ ₹4 ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ! ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಕಡ್ಡಾಯ! Ganga Kalyana Yojana

ಬೋರ್ವೆಲ್ ಕೊರಿಸಲು ಬರೋಬ್ಬರಿ ₹4 ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ! ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಕಡ್ಡಾಯ! Ganga Kalyana Yojana

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಬಹಳ ಸಮಸ್ಯೆಗಳಿದ್ದು ಅದರಲ್ಲಿಯೂ ಕೂಡ ಬೇಸಿಗೆ ಬಂದರಂತೂ ತೋಟ ಮತ್ತು ಕೃಷಿ ಜಮೀನುಗಳು ಹೊಂದಿರುವ ರೈತರಿಗಂತು ನೀರಾವರಿಯದ್ದೆ ಚಿಂತೆ. ಹೀಗಾಗಿ ಕ್ರಿಶ್ಚಿಯನ್ ಸಮುದಾಯದ ರೈತರಿಗೆ ಸಬ್ಸಿಡಿಯಲ್ಲಿ ಸಹಾಯಧನ ನೀಡಿ ಬೋರ್ವೆಲ್ ಕುರಿಸಲು ಸರ್ಕಾರ ಅವಕಾಶ ನೀಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನಿರಬೇಕು? ಯಾವೆಲ್ಲ ದಾಖಲೆಗಳು ಕಡ್ಡಾಯ? ಎಷ್ಟು ಸಬ್ಸಿಡಿ ಸಿಗಲಿದೆ? ಇನ್ನು ಎಲ್ಲ ಮಾಹಿತಿಗಳನ್ನು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.

ಈ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಹರಾಗಿರುವ ರೈತರಿಗೆ ಬೋರ್ವೆಲ್ ಕೊರೆಸುವುದರಿಂದ ಹಿಡಿದು ಅದಕ್ಕೆ ಪಂಪ್ಸೆಟ್ ತರುವುದು ಹಾಗೂ ಕರೆಂಟ್ ಅಳವಡಿಕೆ ಮಾಡುವುದು ಇದಕ್ಕೆಲ್ಲ ಸುಮಾರು ₹3 ರಿಂದ ₹4 ಲಕ್ಷ ರೂಪಾಯಿಗಳ ವರೆಗೂ ಸರ್ಕಾರದಿಂದ ಸಬ್ಸಿಡಿ ಹಣ ದೊರೆಯಲಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ರೈತರಿಗೆ ಆರ್ಥಿಕವಾಗಿ ನೆರವು ನೀಡಿ ತೋಟಗಾರಿಕೆ ಮತ್ತು ಕೃಷಿಯಲ್ಲಿ ಅತಿ ಹೆಚ್ಚು ಲಾಭವನ್ನು ಗಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕಡ್ಡಾಯವಾಗಿ ರೈತರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಮೊದಲನೆಯದಾಗಿ ಕರ್ನಾಟಕದಲ್ಲಿ ಖಾಯಂ ನಿವಾಸಿಗಳಾಗಿರುವ ರೈತರಿಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಎರಡನೆಯದಾಗಿ ನಮ್ಮ ಕರ್ನಾಟಕದಲ್ಲಿ ಇರುವಂತಹ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ರೈತರಿಗೆ ಮಾತ್ರ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ.
  • ಮೂರನೆಯದಾಗಿ ರೈತರ ಬಳಿ 1.20 ಎಕರೆಯಿಂದ 5 ಎಕರೆ ತನಕ ಖುಷ್ಕಿ ಜಮೀನು ಇರಬೇಕು.
  • ನೀರಿನ ಸಮಸ್ಯೆ ಇರುವ ಜಿಲ್ಲೆಗಳಲ್ಲಿ ಕೇವಲ 1 ಎಕರೆ ಜಮೀನು ಇದ್ದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತೀರಾ.
  • 18 ವರ್ಷಕ್ಕಿಂತ ಮೇಲ್ಪಟ್ಟ ರೈತರು ಅಡ್ಡಿ ಸಲ್ಲಿಸಬಹುದು.

ಆದಾಯದ ಅರ್ಹತೆ:

ಈ ಯೋಜನೆಗೆ ಅರ್ಜಿ ಸಲ್ಲಿಸುವ ಗ್ರಾಮೀಣ ಭಾಗದ ರೈತರ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಕಂದಾಯ ಪ್ರಮಾಣ ಪತ್ರ ಕಡ್ಡಾಯ:

ಕಂದಾಯ ಇಲಾಖೆಯಿಂದ “ಜಮೀನಿನಲ್ಲಿ ಬೋರ್ವೆಲ್ ಇಲ್ಲ” ಎಂಬ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು.

ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವೋಟರ್ ಐಡಿ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್ ಬುಕ್
  • ಭೂ ಕಂದಾಯ ಪಾವತಿಸಿರುವ ರಶೀದಿ
  • ಪಹಣಿ/RTC
  • ಸಣ್ಣ ರೈತ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಅಧ್ಯಕ್ಷ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಂತರ “ಗಂಗಾ ಕಲ್ಯಾಣ ಸ್ಕೀಮ್” “Ganga Kalyana Scheme” ಆಯ್ಕೆ ಮಾಡಿಕೊಂಡು, ನಂತರ Apply Online ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಇದಾದ ನಂತರ ಹೊಸ ಬಳಕೆದಾರರೆಂದು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಅಲ್ಲಿ OTP ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ.
  • ಇದಾದ ಮೇಲೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಮತ್ತು ನಿಮ್ಮ ಜಮೀನಿನ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಈಗ ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಇದೇ ರೀತಿ ಇನ್ನು ಹೆಚ್ಚಿನ ಎಲ್ಲಾ ಹೊಸ ಹೊಸ ಮಾಹಿತಿಗಳನ್ನು ನೋಡಲು ಮತ್ತು ತಾಜಾ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ಹಾಗೂ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ ಗೆ ಭೇಟಿ ನೀಡಿ.

Leave a Comment