WhatsApp Float Button

Gas and Stove Subsidy: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಉಚಿತವಾಗಿ ಸಿಗಲಿದೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್!

Gas and Stove Subsidy: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಉಚಿತವಾಗಿ ಸಿಗಲಿದೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಒಂದು ಸಿಹಿ ಸುದ್ದಿಯನ್ನು ನೀಡಲು ಹೊರಟಿದ್ದೇವೆ ಅದರಲ್ಲೂ ಈ ಸುದ್ದಿ ಮಹಿಳೆಯರಿಗೆ ಅತ್ಯಂತ ಸಂತೋಷದ ಸುದ್ದಿ ಆಗಲಿದೆ ಏಕೆಂದರೆ ಮಹಿಳೆಯರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಗ್ಯಾಸ್ ಮತ್ತು ಸ್ಟವ್ ಅನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು ನಮ್ಮ ಭಾರತದ ಎಲ್ಲಾ ಮಹಿಳೆಯರು ಈ ಒಂದು ಯೋಜನೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು ಕಡ್ಡಾಯ? ಮತ್ತು ಅರ್ಹತೆಗಳು ಏನಿರಬೇಕು? ಎಲ್ಲ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಿದ್ದೇವೆ ನೋಡಿ.

ಅದರಲ್ಲೂ ಸ್ನೇಹಿತರೆ ಈಗಂತೂ ಕೇಳುವಂತೆ ಇಲ್ಲ ಅಷ್ಟರಮಟ್ಟಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌಗಳು ಜನಪ್ರಿಯವಾಗಿವೆ ಮತ್ತು ಜನ ಮನ್ನಣೆ ಗಳಿಸಿವೆ. ಶ್ರೀಮಂತರಿಂದ ಹಿಡಿದು ಬಡವರ ಮನೆಗಳಲ್ಲೂ ಕೂಡ ಇಂದು ಸಿಲಿಂಡರ್ ಮತ್ತು ಗ್ಯಾಸ್ ಇಲ್ಲದೆ ಅಡುಗೆ ಮಾಡೋದಿಲ್ಲ. ಆದರೆ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆ ದೊರ ಏರಿಕೆಯಾಗಿರುವುದು ಒಂದು ದೊಡ್ಡ ಹೊರೆಯೇ ಆಗಿದೆ.

PMUY ಪಿಎಂ ಉಜ್ವಲ ಯೋಜನೆ: ₹500/- ಗೆ ಗ್ಯಾಸ್ ಸಿಲೆಂಡರ್!

ಈ ಪಿಎಂ ಉಜ್ವಲ ಯೋಜನೆಯಡಿಯಲ್ಲಿ ನಮ್ಮ ಭಾರತ ದೇಶದ ಮಹಿಳೆಯರು ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಕೇವಲ 500 ರೂಪಾಯಿ ಎಲ್ಲಿ ಗ್ಯಾಸ್ ಸಿಲಿಂಡರ್ ಲಭ್ಯವಾಗುತ್ತದೆ. ಇನ್ನು 300 ರೂಪಾಯಿ ಸಬ್ಸಿಡಿಯನ್ನು ಮಹಿಳೆಯರು ತಮ್ಮ ಗ್ಯಾಸ್ ಸಿಲಿಂಡರನ್ನು ತುಂಬಿಸಿಕೊಳ್ಳುವ ಸಲವು ಕೂಡ ತಮ್ಮ ಖಾತೆಗೆ ಪಡೆದುಕೊಳ್ಳುತ್ತಾರೆ.

ಬೇಕಾಗುವ ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕನಿಷ್ಠ 18 ವರ್ಷದಿಂದ 60 ವರ್ಷದ ಒಳಗಿನವರ ಆಗಿರಬೇಕು.
  • ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ಮಹಿಳೆಯರು ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರಬೇಕು.
  • ಒಂದು ಕುಟುಂಬದ ಮಹಿಳೆಯರಿಗೆ ಕೇವಲ ಒಮ್ಮೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ.
  • ಅರ್ಜಿ ಸಲ್ಲಿಸುವ ಮಹಿಳೆಯರು ಈ ಮೊದಲ ಗ್ಯಾಸ್ ಕನೆಕ್ಷನ್ ಹೊಂದಿರಬಾರದು.

ಯಾವೆಲ್ಲ ದಾಖಲೆಗಳು ಕಡ್ಡಾಯ?

  • ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಆದಾಯ ಪ್ರಮಾಣ ಪತ್ರ
  • ಭಾವಚಿತ್ರ
  • ಜಾತಿ ಪ್ರಮಾಣ ಪತ್ರ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ನೀವು ಪಿಎಂ ಉಜ್ವಲ ಯೋಜನೆ ಅಧಿಕೃತ ವೆಬ್ಸೈಟ್ ಗೆ ತೆರಳಿ: pmuy.gov.in
  • ನಂತರ ನಿಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ಅಲ್ಲಿ ಲಾಗಿನ್ ಆಗಿ.
  • ಈಗ ಅಲ್ಲಿ ನಿಮಗೆ ಕೇಳಲಾದ ಎಲ್ಲಾ ವಿವರಗಳನ್ನು ಒಂದೊಂದಾಗಿ ಪೂರ್ತಿಯಾಗಿ ಭರ್ತಿ ಮಾಡಿ.
  • ಅಲ್ಲಿ ನಿಮಗೆ ಈಗ ಕೇಳುವಂತಹ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.
  • ಈಗ ನಿಮ್ಮ ಅರ್ಜಿಯನ್ನು ಪೂರ್ತಿಯಾಗಿ ಪರಿಶೀಲಿಸಿಕೊಂಡು ಎಲ್ಲಾ ಸರಿ ಇದ್ದರೆ ಅರ್ಜಿಯನ್ನು ಸಲ್ಲಿಕೆ ಮಾಡಿ.
  • ನಂತರ ನಿಮ್ಮ ಅರ್ಜಿ ಸಂಖ್ಯೆಯನ್ನು ತೆಗೆದುಕೊಂಡು ನೀವು ಅರ್ಜಿ ಸ್ಥಿತಿಯನ್ನು ಯಾವಾಗ್ಲಾದರೂ ಪರಿಶೀಲಿಸಬಹುದು.

ಇದಾದ ನಂತರ ನೀವು ನಿಮ್ಮ ಗ್ರಾಮ ಪಂಚಾಯಿತಿಯ ಕಚೇರಿಗೆ ತೆರಳಿ ಒಂದು ತಿಂಗಳ ಒಳಗೆ ನಿಮ್ಮ ಗ್ಯಾಪ್ ಸಿಲಿಂಡರನ್ನು ಮತ್ತು ಸ್ಟವ್ ಅನ್ನು ತೆಗೆದುಕೊಳ್ಳಬಹುದು.

ಈ ರೀತಿಯಾಗಿ ನೀವು ಪಿಎಮ್ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಅನ್ನು ತೆಗೆದುಕೊಳ್ಳಬಹುದು.

Leave a Comment