WhatsApp Float Button

Gold Rate Today: ಶಾಕಿಂಗ್ ಸುದ್ದಿ! ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

Gold Rate Today: ಶಾಕಿಂಗ್ ಸುದ್ದಿ! ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದ್ದು ಚಿನ್ನಪ್ರಿಯರಿಗೆ ಶಾಕಿಂಗ್ ಸುದ್ದಿ ಆಗಿದೆ ಎಂದು ಹೇಳಬಹುದು. ಹೌದು ಅದರಲ್ಲೂ ಕೂಡ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳಿಗೆ ಚಿನ್ನ ಕನಸಾಗಿ ಪರಿಣಮಿಸಿದೆ ಏಕೆಂದರೆ ಚಿನ್ನು ಅಷ್ಟು ದುಬಾರಿಯಾಗಿದ್ದು ಖರೀದಿ ಮಾಡಲು ಜನಸಾಮಾನ್ಯರಿಗೆ ಆಗುತ್ತಿಲ್ಲ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯೋಣ ಬನ್ನಿ.

ಇನ್ನೇನು ಮದುವೆ ಸೀಸನ್ ಶುರುವಾಗಿದ್ದು ಮದುವೆಗೆ ಚಿನ್ನ ಕೊಳ್ಳಲು ಜನರು ಮನಸ್ಸು ಮಾಡುವ ಮುನ್ನ ಯೋಚಿಸುವಂತಾಗಿದೆ ಏಕೆಂದರೆ ಒಂದು ಗ್ರಾಮ ಚಿನ್ನಕ್ಕೆ ₹14,800 ರೂ. ಗಡಿ ದಾಟಿದೆ. ಹೀಗಾಗಿ ಚಿನ್ನ ಕರೀದಿಸಲು ಯೋಚಿಸುವಂತಾಗಿದೆ. ಅದೇ ರೀತಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ಈಗ ನೋಡೋಣ.

Gold Rate Today: ಇಂದಿನ ಚಿನ್ನದ ಬೆಲೆ ಎಷ್ಟಿದೆ?

  • 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಇಂದು ಸುಮಾರು: ₹1,48,689 ರೂಪಾಯಿ ಇದೆ.
  • 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಇಂದು ಸುಮಾರು: ₹1,36,890 ರೂಪಾಯಿ ಇದೆ.
  • 18 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಇಂದು ಸುಮಾರು: ₹1,24,659 ರೂಪಾಯಿ ಇದೆ.

ಹೌದು ಸ್ನೇಹಿತರೆ, ಇಂದು ಮೂರು ವಿಧದ ಚಿನ್ನದ ಮೇಲು ಕೂಡ ಬೆಲೆ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಮೇಲೆ ಸುಮಾರು 1,800 ಏರಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆಯ ಮೇಲೆ ಸುಮಾರು 888 ರೂಪಾಯಿ ಏರಿಕೆ ಆಗಿದೆ. ಹಾಗೆಯೇ 18 ಕ್ಯಾರೆಟ್ ನ ಚಿನ್ನದ ಮೇಲೆ ಸುಮಾರು 550 ರೂಪಾಯಿ ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿ ಚೀನ್ನದ ಬೆಲೆ ಎಷ್ಟಿದೆ?

  • ಬೆಂಗಳೂರು ನಗರದಲ್ಲಿ: 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು ಬೆಂಗಳೂರು ಮಾರುಕಟ್ಟೆಯಲ್ಲಿ ಸುಮಾರು ₹14,832 ರೂಪಾಯಿ ಇದೆ. ಬೆಂಗಳೂರಿನಲ್ಲಿ ನೆನ್ನೆಗಿಂತ ಇಂದು ಸುಮಾರು 1500 ರೂಪಾಯಿ ಏರಿಕೆಯಾಗಿದೆ.
  • ಬೀದರ್ ನಲ್ಲಿ ಎಷ್ಟಿದೆ: 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು ಬೀದರ್ ನಗರದ ಮಾರುಕಟ್ಟೆಯಲ್ಲಿ ಸುಮಾರು ₹14,943 ರೂಪಾಯಿ ಇದೆ. ಬೀದರ್ ನಲ್ಲಿ ನೆನ್ನೆಗಿಂತ ಇಂದು ಸುಮಾರು 1,340 ರೂಪಾಯಿ ಏರಿಕೆ ಯಾಗಿದೆ.
  • ಚೆನ್ನೈ ನಗರದಲ್ಲಿ: 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು ಇಂದು ಚೆನ್ನೈನಲ್ಲಿ ₹14,898 ರೂಪಾಯಿ ಇದೆ. ಚೆನ್ನೈನಲ್ಲಿ ನೆನ್ನೆಗಿಂತ ಇಂದು ಸುಮಾರು 1,644 ಏರಿಕೆಯಾಗಿದೆ.

ಈಗ ಬೆಲೆಯ ಏರಿಕೆಯಾಗಿರುವ ರೀತಿ ನೋಡಿದರೆ ನೀವು 24 ಕ್ಯಾರೆಟ್ ಚಿನ್ನವನ್ನು ಖರೀದಿಸಿದರೆ ನಿಮಗೆ ಜಾಸ್ತಿ ಖರ್ಚಾಗಬಹುದು ಅದಕ್ಕಾಗಿ ನೀವು 18 ಕ್ಯಾರೆಟ್ ನ ಚಿನ್ನವನ್ನು ತಲಾ 10 ಗ್ರಾಂ ನಂತೆ ನಿಮಗೆ ಬೇಕಾದಷ್ಟು ಚಿನ್ನವನ್ನು ಖರೀದಿ ಮಾಡಿದರೆ ದುಡ್ಡನ್ನು ಉಳಿತಾಯ ಮಾಡಬಹುದು. ಇದು ಒಂದು ಒಳ್ಳೆಯ ಉಪಾಯವಾಗಿದೆ ಹಾಗಾಗಿ ನೀವು ಕೂಡ 18 ಕ್ಯಾರೆಟ್ ನ ಚಿನ್ನವನ್ನು ಖರೀದಿ ಮಾಡಿ ಹೂಡಿಕೆ ಮಾಡಿದರೆ ನಿಮಗೆ ಮುಂದೆ ಭವಿಷ್ಯದಲ್ಲಿ ಅದು ಉಪಯೋಗವಾಗುತ್ತದೆ.

Leave a Comment