WhatsApp Float Button

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಮೊದಲು ಈ 18 ಜಿಲ್ಲೆಗೆ ಜಮಾ ಆಗಲಿದೆ! Gruhalakshmi 25th Installment Update

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಮೊದಲು ಈ 18 ಜಿಲ್ಲೆಗೆ ಜಮಾ ಆಗಲಿದೆ! Gruhalakshmi 25th Installment Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ಗೃಹಲಕ್ಷ್ಮಿ ಯೋಜನೆ, 25ನೇ ಕಂತಿನ 2000 ರೂಪಾಯಿ ಹಣ ಯಾವಾಗ ಜಮಾ ಆಗಲಿದೆ ಮತ್ತು ಎಷ್ಟು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 25ನೇ ಕಂತಿನ ಹಣ ಜಮಾ ಆಗಲ್ತೆ ಎನ್ನುವ ಬಗ್ಗೆ ನಿಮಗೆ ಮುಖ್ಯವಾದ ಮಾಹಿತಿಯನ್ನು ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ. ಇದೇ ರೀತಿಯ ಮಾಹಿತಿಗಳಿಗೆ ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ.

ಸ್ನೇಹಿತರೆ ಈ ಹಿಂದೆ 2025ರ ಡಿಸೆಂಬರ್ ತಿಂಗಳ 2ನೇ ವಾರದಿಂದ ಗೃಹಲಕ್ಷ್ಮಿ 24ನೇ ಕಂತಿರ 2000 ಹಣ ಎಲ್ಲಾ ಫಲಾನುಭವಿಗಳು ಖಾತೆಗಳಿಗೆ ಜಮಾ ಆಗೋದಕ್ಕೆ ಶುರುವಾಗಿತ್ತು. ಇದುವರೆಗೂ ಕೂಡ ಸುಮಾರು 80ರಷ್ಟು ಫಲಾನುಭವಿಗಳ ಖಾತೆಗಳಿಗೆ 24ನೇ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗಿದೆ. ಇನ್ನು ಕೆಲವೇ ದಿನದಲ್ಲಿ 24ನೇ ಕಂತಿನ ಹಣ ಪೂರ್ತಿಯಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತೆ.

ಆದರೆ ಈಗ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು ಕಾಯುತ್ತಿರುವುದು 25ನೇ ಕಂತಿನ 2000 ಹಣಕ್ಕಾಗಿ. 25ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಮತ್ತು ಯಾವೆಲ್ಲ ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲು ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈಗ ನೋಡೋಣ ಬನ್ನಿ.

Gruhalakshmi 25th Installment Update: ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಸ್ನೇಹಿತರೆ ಈಗ ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣದ ತನಕ ಒಟ್ಟು ₹48,000 ಗಳನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಮಾಡಲಾಗಿದೆ ಸ್ನೇಹಿತರೆ. ಈಗ ಎಲ್ಲಾ ಫಲಾನುಭವಿಗಳು 25ನೇ ಕಂತಿನ ಹಣಕ್ಕಾಗಿ ಕಾಯುತ್ತಾ ಇದ್ದೀರಾ. ಹೀಗೆ ಕಾಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಇದೆ ಸ್ನೇಹಿತರೆ.

ಅದೇನೆಂದರೆ 25ನೇ ಕಂತಿನ ಹಣ ಜಮಾ ಆಗೋದಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಈ ದಿನಾಂಕದೊಳಗೆ ನಿಮಗೆ 25ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಮಾಡಲಿಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ಕೆಳಗಿನ ನೀಡಲಾಗಿದೆ.

ಗೃಹಲಕ್ಷ್ಮಿ 25ನೇ ಕಂತು ಈ ದಿನಾಂಕಕ್ಕೆ ಜಮಾ ಶುರು!

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ 2000 ಹಣಕ್ಕಾಗಿ ಯಾವೆಲ್ಲಾ ಮಹಿಳೆಯರು ಕಾಯುತ್ತಿದ್ದೀರೋ ಅಂತಹ ಎಲ್ಲಾ ಮಹಿಳಾ ಫಲಾನುಭವಿಗಳಿಗೆ 25ನೇ ಕಂತಿನ ಹಣವನ್ನ ಇದೇ ಜನವರಿ ತಿಂಗಳ 12ನೇ ತಾರೀಖಿನಿಂದ ಎಲ್ಲಾ ಪ್ಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಸ್ನೇಹಿತರೆ. ಹೌದು ಸ್ನೇಹಿತರೆ ಜನವರಿ ತಿಂಗಳ ಎರಡನೇ ವಾರದಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 25ನೇ ಕಂತಿನ ಹಣ ಜಮಾ ಆಗಲು ಶುರುವಾಗುತ್ತದೆ.

ಅದೇ ರೀತಿ ಈ 25ನೇ ಕಂತಿನ ಹಣ ಸುಮಾರು 18 ಜಿಲ್ಲೆಗಳು ಫಲಾನುಭವಿಗಳ ಖಾತೆಗಳಿಗೆ ಮೊದಲನೇ ಹಂತದಲ್ಲಿ ಜಮಾ ಆಗಲಿದೆ ಸ್ನೇಹಿತರೆ. ಈ 18 ಜಿಲ್ಲೆಗಳ ಹೆಸರನ್ನು ಈ ಕೆಳಗೆ ನೀಡಲಾಗಿದೆ ನೋಡಿ:

  • ಬೆಳಗಾವಿ
  • ಮೈಸೂರು
  • ಚಿಕ್ಕಬಳ್ಳಾಪುರ
  • ಗುಲ್ಬರ್ಗ
  • ಬೀದರ್
  • ಕಲಬುರಗಿ
  • ಉತ್ತರ ಕನ್ನಡ
  • ಮಂಡ್ಯ
  • ಹಾವೇರಿ
  • ಶಿವಮೊಗ್ಗ
  • ವಿಜಯನಗರ
  • ದಕ್ಷಿಣ ಕನ್ನಡ
  • ಕಾರವಾರ
  • ಮಂಗಳೂರು
  • ಹಾಸನ
  • ಕೋಲಾರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ

ಈ 18 ಜಿಲ್ಲೆಗಳಿಗೆ ಮೊದಲನೇ ಹಂತದ 25ನೇ ಕಂತಿನ 2,000 ಹಣ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಜಮಾ ಆಗಲಿದೆ ಸ್ನೇಹಿತರೆ.

ಈ 18 ಜಿಲ್ಲೆಗಳ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ ಇನ್ನೂ ಉಳಿದಂತಹ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತಿನ ಹಣ ಜಮಾ ಆಗಲು ಶುರುವಾಗುತ್ತದೆ.

ಪೆಂಡಿಂಗ್ ಕಂತುಗಳ ಬಗ್ಗೆ ಮಾಹಿತಿ!

ಸ್ನೇಹಿತರೆ ಸಾಕಷ್ಟು ಜನ ಮಹಿಳೆಯರ ಖಾತೆಗಳಿಗೆ ಇನ್ನು ಕೂಡ 21 22 ಮತ್ತು 23 ಹಾಗೂ 24ನೇ ಕಂತಿರ ಹಣ ಸಂಪೂರ್ಣವಾಗಿ ಜಮಾ ಆಗಿಲ್ಲ ಸ್ನೇಹಿತರೆ. ಅಂತಹ ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ ಯಾರಿಗೆಲ್ಲ ಪೆಂಡಿಂಗ್ ಕಂತುಗಳ ಹಣ ಜಮಾ ಆಗಿಲ್ಲವೋ ಅವರೆಲ್ಲರಿಗೂ ಕೂಡ ಇದೇ ಜನವರಿ ತಿಂಗಳು ಮುಗಿಯುವುದರೊಳಗೆ ಎಷ್ಟು ಕಂತುಗಳ ಹಣ ಜಮಾ ಆಗಿಲ್ಲ ಆಗಿಲ್ಲ ಕಂತುಗಳ ಹಣವನ್ನು ಜಮಾ ಮಾಡಲಾಗುವುದು ಎಂದು ಸ್ಪಷ್ಟಣೆ ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಇನ್ನೂ ಹೆಚ್ಚಿಗೆ ಹೇಳುವುದಾದರೆ ಇದುವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 24 ಕಂತುಗಳ ತನಕ ಸಂಪೂರ್ಣ ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದ್ದು ಒಟ್ಟಾರೆಯಾಗಿ ಇದುವರೆಗೆ ಬರೋಬ್ಬರಿ 48000ಗಳನ್ನ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನಮ್ಮ ರಾಜ್ಯ ಸರ್ಕಾರ ಜಮಾ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ನಮ್ಮ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದು ಗೃಹಲಕ್ಷ್ಮಿ ಸಂಘವನ್ನು ಕೂಡ ಈಗ ಸ್ಥಾಪನೆ ಮಾಡಲಾಗಿದೆ.

ಅದೇ ರೀತಿ ಗೃಹಲಕ್ಷ್ಮಿ ಸಂಘದಲ್ಲಿ ಮಹಿಳೆಯರಿಗೆ ಸುಮಾರು ₹3 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯವನ್ನು ಕೂಡ ರಾಜ್ಯ ಸರ್ಕಾರ ಮಹಿಳೆಯರಿಗೆ ಕಲ್ಪಿಸಿಕೊಟ್ಟಿದೆ ಇದು ಕೇವಲ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದ್ದು. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಲಾಭವನ್ನು ಪಡೆಯುತ್ತಿರುವ ಎಲ್ಲಾ ಮಹಿಳಾ ಫಲಾನುಭವಿಗಳು ಈ ಒಂದು ಸಂಘಕ್ಕೆ ಸೇರಬಹುದು ಮತ್ತು ಸಂಘದಿಂದ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಈಗಾಗಲೇ ಸಾಕಷ್ಟು ಜನ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಆರ್ಥಿಕ ಸ್ಥಿತಿಯನ್ನು ಕೊಂಚಮಟ್ಟಿಗೆ ಉತ್ತಮಗೊಳಿಸಿಕೊಂಡಿದ್ದಾರೆ ಏಕೆಂದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣದಿಂದ ಸಾಕಷ್ಟು ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡಿದ್ದು ಅವರ ಮನೆಯಲ್ಲಿ ಈ ಹಿಂದೆ ನೋಡಿರದ ವಾಷಿಂಗ್ ಮಷೀನ್, ರೆಫ್ರಿಜರೇಟರ್, ಇನ್ನು ಹಲವು ವಸ್ತುಗಳನ್ನು ಖರೀದಿ ಮಾಡಿ ಗೃಹಲಕ್ಷ್ಮಿ ಯೋಜನೆ ಎಷ್ಟು ಲಾಭದಾಯಕವಾಗಿದೆ ಎಂದು ತಿಳಿಸಿಕೊಟ್ಟಿದ್ದಾರೆ.

ಅದೇ ರೀತಿ ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಊರ್ವ ಮಹಿಳೆ ತಮ್ಮ ಜಮೀನಿನಲ್ಲಿ ಗೃಹಲಕ್ಷ್ಮಿ ಹಣದಿಂದ ಬೋರ್ವೆಲ್ ಅನ್ನು ಕೊರೆಸಿ ಅವರ ಬೋರ್ವೆಲ್ ನಲ್ಲಿ ಉತ್ತಮ ನೀರು ಕೂಡ ಬಂದಿದ್ದು ಅವರಿಗೆ ಮುಂದಿನ ಆಧಾರವಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಈ ಒಂದು ಘಟನೆಯು ಕೂಡ ಗೃಹಲಕ್ಷ್ಮಿ ಯೋಜನೆ ಎಷ್ಟು ಲಾಭದಾಯಕವಾಗಿದೆ ಎಂದು ಸೂಚಿಸುತ್ತದೆ.

ಇನ್ನೊಂದೆಡೆ ನಮ್ಮ ರಾಜ್ಯದ ಒಂದು ಜಿಲ್ಲೆಯಲ್ಲಿ ಅತ್ತೆ ತಮ್ಮ ಸೊಸೆಗೆ ಗೃಹಲಕ್ಷ್ಮಿ ಯೋಜನೆಯ ಸುಮಾರು 22 ಕಂತುಗಳ ಹಣದ ಕಂತನ್ನು ಜೋಡಿಸಿಕೊಂಡು ತಮ್ಮ ಸೊಸೆಗೆ ಫ್ಯಾನ್ಸಿ ಸ್ಟೋರ್ ಅಂದರೆ ಮಹಿಳೆಯರು ಬಳಸುವ ಶೃಂಗಾರ ಆಭರಣದ ಅಂಗಡಿಯನ್ನು ತೆರೆದು ಕೊಟ್ಟಿದ್ದಾರೆ. ಅದೇ ರೀತಿ ಇನ್ನು ಸಾಕಷ್ಟು ಮಹಿಳೆಯರು ಬೇರೆ ಬೇರೆ ರೀತಿಯಲ್ಲಿ ಈ ಗೃಹಲಕ್ಷ್ಮಿ ಯೋಜನೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ ಹಾಗೂ ಈ ಗೃಹಲಕ್ಷ್ಮಿ ಯೋಜನೆಯ ಯಶಸ್ಸನ್ನು ನೋಡಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ರವರು ಈಗ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಸಂಘವನ್ನು ಕೂಡ ಸ್ಥಾಪಿಸಿ ಕೊಟ್ಟಿದ್ದಾರೆ.

ಈಗ ಮಹಿಳೆಯರು ಈ ಗೃಹಲಕ್ಷ್ಮಿ ಸಂಘಕ್ಕೆ ಸೇರುವ ಮೂಲಕ ತಮ್ಮ ಉದ್ಯಮಕ್ಕೆ ಅಥವಾ ಬೇರೆ ಎಲ್ಲಾ ಕೆಲಸಗಳಿಗೆ ಸಾಲದ ಲಾಭವನ್ನು ಕೂಡ ಪಡೆದುಕೊಳ್ಳಬಹುದು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಲಿದ್ದು ಈ ಒಂದು ನಿರ್ಧಾರದಿಂದ ಸಾಕಷ್ಟು ಜನ ಮಹಿಳಾ ಫಲಾನುಭವಿಗಳು ತುಂಬಾ ಉಪಯುಕ್ತ ಭವಿಷ್ಯವನ್ನು ನೋಡಲಿದ್ದಾರೆ ಎಂದು ಹೇಳಬಹುದಾಗಿದೆ.

ಇದೇ ರೀತಿ ಇನ್ನೂ ಹೊಸ ಹೊಸ ಮಾಹಿತಿಗಳಿಗಾಗಿ ಮತ್ತು ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಅನ್ನು ಕೂಡಲೇ ಜಾಯಿನ್ ಆಗಿ. ನಾವು ಪೋಸ್ಟ್ ಮಾಡುವ ಎಲ್ಲ ಮಾಹಿತಿಗಳನ್ನು ನೀವು ಮೊದಲು ನೋಡಬಹುದು.

Leave a Comment