WhatsApp Float Button

ಬಿಪಿಎಲ್ ಕಾರ್ಡಿನಿಂದ ಪಡಿತರ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! Indira Kit Yojana

ಬಿಪಿಎಲ್ ಕಾರ್ಡಿನಿಂದ ಪಡಿತರ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! Indira Kit Yojana

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಸ್ನೇಹಿತರೆ. ಹಿಂದುಳಿದ ವರ್ಗಗಳಿಗೆ ಮತ್ತು ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ನೀಡಲು ಮತ್ತು ಅವರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಮುಖ್ಯ ಉದ್ದೇಶದಿಂದೊಂದಿಗೆ ಹೊಸ ಪಡಿತರವನ್ನು ಫಲಾನುಭವಿಗಳಿಗೆ ಹಂಚಲು ಒಂದು ಮುಖ್ಯ ನಿರ್ಧಾರವನ್ನು ಕೈಗೊಂಡಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾಗಿರುವಂತಹ ಸನ್ಮಾನ್ಯ ಶ್ರೀ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿಯನ್ನಾದ ವಿಷಯವೂ ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ, ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗಿನ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ ಪೂರ್ತಿ ವಿವರವಾಗಿ ಓದಿ ಮತ್ತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಆಹಾರ ಸಚಿವರು ನೀಡಿರುವ “ಆಹಾರ ಇಂದಿನ ಕಿಟ್” ಯೋಜನೆಯು ಈಗ ನಮ್ಮ ರಾಜ್ಯದ ಎಲ್ಲಾ ಬಿಪಿಎಲ್ ಫಲಾನುಭವಿಗಳಿಗೆ ಈ ಯೋಜನೆಯ ಮುಖ್ಯ ಆಕರ್ಷಣೆಯಾಗಿದೆ ಎಂದು ಹೇಳಬಹುದು. ಮುಂದಿನ ಫೆಬ್ರವರಿ ತಿಂಗಳಿನಿಂದ ಎಲ್ಲಾ ಬಿಪಿಎಲ್ ಕಾರ್ಡ್ದಾರರಿಗೆ ಇಂದಿರ ಆಹಾರ ಕಿಟ್ ಅನ್ನು ವಿತರಣೆ ಮಾಡಲು ರಾಜ್ಯ ಸರ್ಕಾರವು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರಿಗೆ ಮತ್ತು ಅಂತ್ಯೋದಯ ಕಾರ್ಡ್ ಅನ್ನು ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆಯ ತುಂಬಾ ದೊಡ್ಡಮಟ್ಟದಲ್ಲಿ ನೆರವಾಗಲಿದೆ.

ಈ ಹೊಸ ಪಡಿತರ ವ್ಯವಸ್ಥೆ ಯಾಕೆ?

ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸಾಕಷ್ಟು ಜನ ನಕಲಿ ದಾಖಲೆಗಳನ್ನು ಬಳಸಿಕೊಂಡು ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡು ಉಚಿತ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರವು ಗಮನಿಸಿ ಈ ವಿಷಯವನ್ನು ಒಂದು ದೊಡ್ಡ ವಿಷಯವನ್ನಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಹಾಗಾಗಿ ಈ ಪಡಿತರವನ್ನು ಪಡೆಯಲು ಅರ್ಹರಾಗಿರುವ ಫಲಾನುಭವಿಗಳಿಗೆ ಪಡಿತರವು ಅಂದರೆ ರೇಷನ್ ಸರಿಯಾಗಿ ಸಿಗುತ್ತಿಲ್ಲ.

  • ಹಾಗಾಗಿ ಯಾರೆಲ್ಲಾ ನಕಲಿ ದಾಖಲೆಗಳನ್ನು ಬಳಸಿಕೊಂಡು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದರು ಅಂತಹ ಅವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕಾರ್ಯ ಜಾರಿಯಲ್ಲಿದೆ.
  • ಯಾರಿಲ್ಲ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೋ ಅಂತವರಿಗೆ ಎಲ್ಲರಿಗೂ ಕೂಡ ಎಪಿಎಲ್ APL ಕಾರ್ಡಿಗೆ ವರ್ಗಾವಣೆ ಮಾಡಲಾಗುತ್ತದೆ.
  • ಹೀಗೆ ಮಾಡುವುದರಿಂದ ಎಲ್ಲಾ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಪಡಿತರವು ಸರಿಯಾಗಿ ದೊರೆಯಲಿದೆ ಎಂದು ರಾಜ್ಯ ಸರ್ಕಾರವು ಅಭಿಪ್ರಾಯ ಪಟ್ಟಿದೆ.

ಇಂದಿರಾ ಕಿಟ್ ನಲ್ಲಿ ಏನೆಲ್ಲಾ ದೊರೆಯಲಿದೆ?

ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಇಂದಿನ ಕಿಟ್ ಅನ್ನು ವಿತರಣೆ ಮಾಡಲಾಗುತ್ತದೆ ಈ ಇಂದಿರಾ ಕಿಟ್ ನಲ್ಲಿ ಫಲಾನುಭವಿಗಳಿಗೆ ಈ ಕೆಳಗಿನ ಎಲ್ಲಾ ವಸ್ತುಗಳು ದೊರೆಯಲಿವೆ:

  • ಉಪ್ಪು
  • ಸಕ್ಕರೆ
  • ಅಡಿಗೆ ಎಣ್ಣೆ
  • ತೊಗರಿ ಬೇಳೆ
  • ಇನ್ನು ಹಲವು ಗೃಹ ಉಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ.
  • ಅದೇ ರೀತಿ ಈ ಒಂದು ಆಹಾರ ಕಿಟ್ ನಲ್ಲಿ ನೀಡಲಾಗುವ ಎಲ್ಲಾ ವಸ್ತುಗಳು ಪ್ರಮಾಣವ ಅವರ ಕುಟುಂಬದಲ್ಲಿರುವ ಸದಸ್ಯರ ಅನುಗುಣವಾಗಿ ಮತ್ತು ಸಂಖ್ಯೆ ಆಧಾರದ ಮೇಲೆ ವಿಂಗಡಣೆ ಆಗಿರುತ್ತದೆ.

ಈ ಇಂದಿರಾ ಕಿಟ್ ಅನ್ನು ಯಾವ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ?

ನಮ್ಮ ಕೇಂದ್ರ ಸರ್ಕಾರದ ಒಂದು ಮುಖ್ಯಮಂತ್ರಿ ಯೋಜನೆಯ ಅಂದರೆ (ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ) ಅಡಿಯಲ್ಲಿ ಈ ಒಂದು ಇಂದಿರಾ ಕಿಟ್ ಅನ್ನು ಎಲ್ಲಾ ಫಲಾನುಭವಿಗಳಿಗೆ ನೀಡಲು ಸರ್ಕಾರವು ಮುಂದಾಗಿದೆ. ಹೀಗೆ ಈ ಯೋಜನೆ ಅಡಿ ಈಗ ಸರ್ಕಾರವು ಗುಣಮಟ್ಟ ಪರಿಶೀಲನೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ತೊಡಗಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ.

ಈ ಯೋಜನೆಯು ಯಾವಾಗ ಪ್ರಾರಂಭವಾಗಲಿದೆ?

ಸಚಿವರು ನೀಡಿರುವಂತಹ ಮಾಹಿತಿಯ ಪ್ರಕಾರ ನೋಡುವುದಾದರೆ:

  • ಇದೇ 2026ರ ಫೆಬ್ರವರಿ ತಿಂಗಳ ಮೊದಲನೇ ವಾರದಲ್ಲಿ ಈ ಇಂದಿರಾ ಕಿಟ್ ಯೋಜನೆಯ ಜಾರಿಯಾಗುವ ನಿರೀಕ್ಷೆ ಇದೆ.
  • ಅದೇ ರೀತಿ ಫೆಬ್ರವರಿ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಎಲ್ಲಾ ಫಲಾನುಭವಿಗಳಿಗೆ ವಿತರಣೆ ಮಾಡಲು ಶುರುವಾಗಬಹುದು ಎಂದು ನಿರೀಕ್ಷೆ ಇದೆ.
  • ಇದು ನಮ್ಮ ರಾಜ್ಯ ಸರ್ಕಾರದ ಪಡಿತರ ಹಂಚಿಕೆಯ ವ್ಯವಸ್ಥೆಯಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ತರುವ ನಿರೀಕ್ಷೆ ಇದೆ.

ಹೊಸ ಮೊಬೈಲ್ ಆಪ್ ವ್ಯವಸ್ಥೆ ಮಾಡಲಾಗಿದೆ:

ಹೌದು ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಈಗ ಒಂದು ಹೊಸ ಮೊಬೈಲ್ ವ್ಯವಸ್ಥೆ ಮಾಡಿದ್ದು ಇದರ ಹೆಸರು (EPOS) Electronic Point Of Sales ಈ ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಅನ್ನು ಮಾಡಲು ಕಾರಣವೆಂದರೆ (PDS) ಅಂದರೆ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ನಿಂದ ಪಡಿತರ ಹಂಚಿಕೆಯಲ್ಲಿ ಆಗುವ ಎಲ್ಲಾ ಮೋಸಗಳನ್ನು ತಡೆಯಲು ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ.

ಈ ಅಪ್ಲಿಕೇಶನ್ ಮೂಲಕ ಸಿಗುವ ಲಾಭಗಳು:

  • ಪಡಿತರ ಹಂಚಿಕೆಯಲ್ಲಿ ಆಗುವ ತೂಕದಲ್ಲಿನ ಮೋಸವನ್ನು ತಕ್ಷಣ ಪತ್ತೆ ಹಚ್ಚಬಹುದು.
  • ಪಡಿತರ ಹಂಚಿಕೆಯಲ್ಲಿ ತೂಕದ ಯಂತ್ರವನ್ನು ಬಯೋಮೆಟ್ರಿಕ್ ಗೆ ನೇರವಾಗಿ ಲಿಂಕ್ ಮಾಡಲಾಗುತ್ತದೆ.
  • ಫಲಾನುಭವಿಗಳು ರಾಜ್ಯದ ಯಾವ ಭಾಗದಲ್ಲಿ ಆದರೂ ಕೂಡ ತಮ್ಮ ಪಡಿತರವನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ.
  • ಪಡಿತರ ವಿತರಣೆ ಮಾಡುವ ಎಲ್ಲಾ ಕೇಂದ್ರಗಳ ಮೇಲೆ ನಿಗಾ ಇಡುವ ಕೆಲಸ ಮಾಡುತ್ತದೆ.

ಈ ಒಂದು ಅಪ್ಲಿಕೇಶನ್ ನ ವ್ಯವಸ್ಥೆಯನ್ನಾಗಿ ರಾಜ್ಯ ಸರ್ಕಾರದ ಮೇಲೆ ಇನ್ನಷ್ಟು ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗುವಲ್ಲಿ ಸಂಶಯವೇ ಇಲ್ಲ ಎಂದು ಹೇಳಬಹುದು.

ಉತ್ತರ ಕರ್ನಾಟಕ ಜನರಿಗೆ ಆಗುವ ಸಮಸ್ಯೆ ಮತ್ತು ಸಚಿವರ ಪ್ರಕ್ರಿಯೆ!

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಉತ್ತರ ಕರ್ನಾಟಕದ ಜನರು ಹೆಚ್ಚಾಗಿ ಬಳಸುವುದು ಜೋಳ ಈ ಜೋಳದ ಸಂಗ್ರಹದ ಕೊರತೆ ಉಂಟಾಗಿದ್ದು, ಆಹಾರ ಸಚಿವ ಕೆಎಚ್ ಮುನಿಯಪ್ಪನವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಜೋಳವನ್ನು ಉತ್ಪಾದನೆ ಮಾಡಲು ಮತ್ತು ಸಂಗ್ರಹಣೆ ಮಾಡಲು ಹೊಸ ಮಾರ್ಗಸೂಚಿಗಳು ಬೇಕು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನರಿಗೆ ಆಗುವ ಪ್ರಯೋಜನಗಳು ಮತ್ತು ಪಡಿತರದ ಭವಿಷ್ಯ:

ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ಪಡಿತರ ಹಂಚಿಕೆಯಲ್ಲಿ ದೊಡ್ಡ ಬದಲಾವಣೆಯನ್ನು ದೊರೆಯುವ ರಾಜ್ಯ ಸರ್ಕಾರ ಮುಂದಾಗಿದ್ದು ಇದರ ಬೆನ್ನಲ್ಲೇ ಅರ್ಹತೆ ಇಲ್ಲದಿರುವ ಎಲ್ಲಾ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಮತ್ತು ಈ ಕಾರ್ಯವು ಈಗ ಜಾರಿಯಲ್ಲಿದ್ದು ಸುಮಾರು 8 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗಳು ರದ್ದಾಗಿದೆ. ಅದೇ ರೀತಿ ಹೊಸ ತಂತ್ರಜ್ಞಾನದ ಮೂಲಕ ಪಡಿತರ ಹಂಚಿಕೆಯನ್ನು ಮಾಡಲು ಕೂಡ ಸರ್ಕಾರ ಹೊರಟಿದೆ. ಇದರಿಂದಾಗಿ ಕೋಟ್ಯಾಂತರ ಮಂದಿ ಬಡ ಕುಟುಂಬಗಳಿಗೆ ಸಹಾಯವಾಗಲಿದೆ.

ರಾಜ್ಯ ಸರ್ಕಾರ ಮಾಡಿರುವಂತಹ ಹೊಸ ನಿಯಮಗಳಿಂದಾಗಿ:

  • ರಾಜ್ಯದಲ್ಲಿ ಪಡಿದರು ಪಡೆಯುತ್ತಿರುವ ಕುಟುಂಬಗಳ ಮಾಸಿಕ ಖರ್ಚು ವೆಚ್ಚ ಕಡಿಮೆಯಾಗಲಿದೆ.
  • ರಾಜ್ಯದ ಜನರಿಗೆ ಪೌಷ್ಟಿಕಾಂಶದ ಕೊರತೆಯಿಂದ ಮುಕ್ತಿ ಸಿಗಲಿದೆ.
  • ವಿತರಣೆ ವ್ಯವಸ್ಥೆಯಲ್ಲಿ ಜನರಿಗೆ ಹೆಚ್ಚು ಪಾರದರ್ಶಕತೆ ನೋಡಲು ಸಿಗಲಿದೆ.

ಅದೇ ರೀತಿ ಈ ಇಂದಿರಾ ಆಹಾರ ಕಿಟ್ ಯೋಜನೆಯ ಎಲ್ಲಾ ಬಿಪಿಎಲ್ ಪಡಿತರ ಚೀಟಿ ದಾರರಿಗೆ ಒಂದು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುವ ಯೋಜನೆ ಯಾಗಲಿದ್ದು, ಇದರಿಂದಾಗಿ ಸಾಕಷ್ಟು ಬಡ ಕುಟುಂಬಗಳು ನೆಮ್ಮದಿಯ ಜೀವನವನ್ನು ನಡೆಸಲಿದೆ. ಅದೇ ರೀತಿ ಅವರ ಆಹಾರ ಮತ್ತು ಜೀವನಶೈಲಿಯಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಲಿದೆ.

Leave a Comment