WhatsApp Float Button

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಜನವರಿ 9 ರಿಂದ ಭಾರಿ ಮಳೆ ಶುರುವಾಗುವ ಸಾಧ್ಯತೆ ಇದೆ! Karnataka Weather

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಜನವರಿ 9 ರಿಂದ ಭಾರಿ ಮಳೆ ಶುರುವಾಗುವ ಸಾಧ್ಯತೆ ಇದೆ! Karnataka Weather

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಜನರು ಚಳಿಗೆ ತತ್ತರಿಸಿ ಹೋಗಿದ್ದಾರೆ ಅಷ್ಟು ಮೈ ಕೊರೆಯುವಂತಹ ಚಳಿ ಬೆಳಗಿನ ಜಾವ ಆಗುತ್ತದೆ. ಅದೇ ರೀತಿ ಮಧ್ಯಾಹ್ನ ನೋಡಿದರೆ ಬಿಸಿಲೋ ಬಿಸಿಲು, ಇದರ ನಡುವೆ ಮಳೆ ಕೂಡ ಬಿದ್ದರೆ ಹೇಗಿರುತ್ತೆ. ಹೌದು ಸ್ನೇಹಿತರೆ ಹವಾಮಾನದಲ್ಲಿ ದಿಡೀರ್ ಬದ್ಲಾವಣೆ ಆಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಇದರ ಅನ್ವಯ ಮಳೆಯು ಕೂಡ ಚಳಿ ಮತ್ತು ಬಿಸಿಲಿನ ಜೊತೆಗೆ ಈ ಜಿಲ್ಲೆಗಳಲ್ಲಿ ಬೆಳೆದಿದೆ ಎಂಬ ಮುನ್ಸೂಚನೆ ಇದೆ. ಹಾಗಾದರೆ ಸಂಪೂರ್ಣ ವರದಿಯನ್ನು ಈ ಕೆಳಗಡೆ ವಿವರಿಸಿದ್ದೇವೆ ಪೂರ್ತಿಯಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ಸಂಕ್ರಾಂತಿ ಹಬ್ಬವು ಇನ್ನೇನು ಹತ್ತಿರ ಬರುತ್ತಿದೆ ಹೀಗೆ ಜನವರಿ ತಿಂಗಳಲ್ಲಿ ಸಂಕ್ರಾಂತಿ ಹಬ್ಬವು ಹತ್ತಿರ ಬಂದಂತೆ ಹೇಳಿವೆ ವಿಪರೀತವಾಗಿ ಆಗುವುದು ಸರ್ವೆ ಸಾಮಾನ್ಯ. ಇದರ ನಡುವೆ ಈ ಬಾರಿ ಚಳಿಯ ಜೊತೆಗೆ ಮಳೆಯೂ ಕೂಡ ಬರಲಿದೆ, ನೀವೇನಾದರೂ ಈ ವಾರದ ಅಂತ್ಯದಲ್ಲಿ ಪ್ರವಾಸಕ್ಕೆ ಹೋಗುವ ನಿರೀಕ್ಷೆ ಇಟ್ಟಿದ್ದೀರಾ? ಅಥವಾ ರೈತರು ಬೆಳೆಕಡಾಗು ಮಾಡುವ ನಿರ್ಧಾರ ಮಾಡಿದ್ದೀರಾ? ಹಾಗಾದರೆ ಮೊದಲು ನೀವು ಹವಾಮಾನದ ಮುನ್ಸೂಚನೆಯನ್ನು ತಿಳಿದುಕೊಂಡು ನಂತರ ನಿರ್ಧಾರ ಮಾಡುವುದು ಒಳ್ಳೆಯದು. ಸಂಪೂರ್ಣ ಹವಾಮಾನ ವರದಿಯನ್ನು ಕೆಳಗೆ ನೀಡಲಾಗಿದೆ.

ಹೀಗೆ ಆಗುತ್ತಿರುವ ದಿಡೀರ್ ಬದಲಾವಣೆಗೆ ಕಾರಣ ಏನು?

ಉತ್ತರ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಚಳಿಯಂತೂ ತುಂಬಾನೇ ಹೆಚ್ಚಾಗುತ್ತಿದೆ ಸ್ನೇಹಿತರೆ, ಇನ್ನೊಂದು ಕಡೆಯಲ್ಲಿ ನಮ್ಮ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆಯೂ ಕೂಡ ಆಗಲಿದೆ. ಇದಕ್ಕೆ ಬಹುದೊಡ್ಡ ಕಾರಣವೆಂದರೆ ಅದು ಹಿಂದೂ ಮಹಾಸಾಗರದಲ್ಲಿ ಮತ್ತು ಬಂಗಾಳ ಕೊಲ್ಲಿ ಸಾಗರದಲ್ಲಿ ಆಗುತ್ತಿರುವ ಸೈಕ್ಲೋನ್ ಎಫೆಕ್ಟ್. ಹೌದು ಬಂಗಾಳ ಕೊಲ್ಲಿಯಲ್ಲಿ ಮತ್ತು ಹಿಂದೂ ಮಹಾ ಸಾಗರದಲ್ಲಿ ಆಗುತ್ತಿರುವ ಸುಳಿಗಾಳಿಯ ಪರಿಣಾಮ ಆಕಾಶದಲ್ಲಿ ಮೋಡಗಳು ನಮ್ಮ ಕರ್ನಾಟಕ ರಾಜ್ಯದತ್ತ ಬರುತ್ತಿದೆ ಈ ಕಾರಣದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಇದೆ.

ಎಲ್ಲೆಲ್ಲಿ ಮಳೆ ಎಚ್ಚರಿಕೆಯನ್ನು ನೀಡಲಾಗಿದೆ ತಿಳಿಯಿರಿ:

ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಇದೇ ಜನವರಿ ತಿಂಗಳ 9ನೇ ತಾರೀಖಿನಿಂದ ವಾತಾವರಣದಲ್ಲಿ ಹಲವಾರು ಬದಲಾವಣೆಗಳಾಗಲಿದೆ.

ಜನವರಿ ತಿಂಗಳ 9ನೇ ತಾರೀಕು ಮತ್ತು 10ನೇ ತಾರೀಖಿನಂದು ಈ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಸ್ನೇಹಿತರೆ ಈ 5 ಜಿಲ್ಲೆಗಳ ಹೆಸರನ್ನು ಈ ಕೆಳಗಿನ ನೀಡಲಾಗಿದೆ ನೋಡಿ.

  • ಕೊಡಗು
  • ಮಂಡ್ಯ
  • ಚಾಮರಾಜನಗರ
  • ಹಾಸನ
  • ಮೈಸೂರು

ಈ 5 ಜಿಲ್ಲೆಗಳಲ್ಲಿ ಹಗುರವಾಗಿ ಮಳೆ ಸುರಿಯುವ ಎಲ್ಲಾ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಮತ್ತು ಅದೇ ರೀತಿ ಈ 8 ಜಿಲ್ಲೆಗಳಲ್ಲೂ ಕೂಡ ಮಳೆಯಾಗಲಿದೆ ಎಂದು ಮಾಹಿತಿ ಇದೆ.

  • ಕೋಲಾರ
  • ತುಮಕೂರು
  • ಚಿತ್ರದುರ್ಗ
  • ಶಿವಮೊಗ್ಗ
  • ಚಿಕ್ಕಬಳ್ಳಾಪುರ
  • ದಾವಣಗೆರೆ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ

ಈ 8 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ವರದಿಯನ್ನು ನೀಡಿದೆ. ಇದರ ಅನ್ವಯ ಒಟ್ಟು 12 ಜಿಲ್ಲೆಗಳಲ್ಲಿ ಸುಮಾರು ಐದು ದಿನಗಳ ಕಾಲ ಜನವರಿ 9ನೇ ತಾರೀಖಿನಿಂದ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ ಸ್ನೇಹಿತರೆ.

ಇನ್ನೊಂದು ಕಡೆ ಉತ್ತರ ಕರ್ನಾಟಕದಲ್ಲಿ ಭಾರಿ ಚಳಿ ಇರಲಿದೆ:

ಹೌದು ಸ್ನೇಹಿತರೆ, ಮುಂದಿನ 5 ದಿನಗಳ ಕಾಲ ನಮ್ಮ ಉತ್ತರ ಕರ್ನಾಟಕದ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಚಳಿಯು ಬಿಟ್ಟುಬಿಡದಂತೆ ಕಾಡಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿ ಎಚ್ಚರಿಕೆ ನೀಡಿದೆ.

ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನವು ಕಡಿಮೆಯಾಗಲಿದ್ದು ಬೆಳಿಗ್ಗೆ ಮತ್ತು ರಾತ್ರಿ ಜನರು ಮನೆಯಿಂದ ಆಚೆ ಬರುವುದು ಕಷ್ಟವಾಗಬಹುದು. ಏಕೆಂದರೆ ಚಳಿಯು ಅಷ್ಟರಮಟ್ಟಿಗೆ ಇರಲಿದೆ ಎಂದು ಹೇಳಬಹುದು.

ಅದೇ ರೀತಿ ರಾಜ್ಯದಲ್ಲಿ ಚಳಿ ಕೂಡ ಮುಂದುವರೆಯಲಿದೆ ಹಾಗೇನೇ ಚಳಿ ಜೊತೆಗೆ ಈಗ ತಿಳಿಸಿದಂತಹ ಎಲ್ಲಾ ಜಿಲ್ಲೆಗಳಲ್ಲಿ ಮಳೆಯೂ ಕೂಡ ಸರಳ ಪ್ರಮಾಣದಲ್ಲಿ ಆಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ ಸ್ನೇಹಿತರೆ. ಹಾಗೇನೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳನ್ನು ಕೂಡ ಬೆಳಗಿನ ಜಾವದೊಂದು ಭಾರಿ ಚಳಿ ಜೊತೆಗೆ ಭಾರಿ ಮಂಜು ಕೂಡ ಆವರಿಸಲಿದೆ ಎಂದು ಹೇಳಲಾಗುತ್ತಿದೆ. ಆದ ಕಾರಣ ಮಂಜಿನಲ್ಲಿ ಯಾರು ಕೂಡ ಪ್ರಯಾಣ ಮಾಡುವುದು ಅಪಾಯಕಾರಿ ಎಂದು ತಿಳಿಸಲಾಗಿದೆ.

ಅದೇ ರೀತಿ ಈ ವರ್ಷವೂ ಕೂಡ ಕಳೆದ ವರ್ಷದಂತೆ ಮುಂಗಾರು ಮಳೆ ಮೇ ತಿಂಗಳು ಮುಗಿದ ನಂತರ ಜೂನ್ ತಿಂಗಳಿನ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಶುರುವಾಗಿದೆ ಎಂಬ ಮಾಹಿತಿಯನ್ನು ಕೂಡ ಮತ್ತು ವರದಿಯನ್ನು ಕೂಡ ಹವಾಮಾನ ಇಲಾಖೆಯ ನೀಡಿದೆ ಸ್ನೇಹಿತರೆ. ಹಾಗೆಯೇ ಈ ಮುಂಗಾರಿನ ಜೊತೆಗೆ ಈ ಬಾರಿಗೆ ರೈತರಿಗೆ ಸಂತಸದ ಸುದ್ದಿ ಏನೆಂದರೆ ಅದು ಈ ಬಾರಿಯೂ ಕೂಡ ರೈತರು ತಮ್ಮ ಕೃಷಿಯನ್ನು ಬಹಳ ಬೇಗನೆ ಅಂದರೆ ಜೂನ್ ತಿಂಗಳಲ್ಲಿ ಶುರು ಮಾಡುವುದು ಉತ್ತಮ ಎಂದು ಕೂಡ ತಜ್ಞರು ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಬೆಳೆಗಳು ಚೆನ್ನಾಗಿ ಬರಬೇಕೆಂದರೆ ಮುಂಗಾರು ನ ಜೊತೆಗೆ ರೈತರು ಕೂಡ ತಮ್ಮ ಬೆಳೆಗಳನ್ನು ಆ ಸಮಯದಲ್ಲಿ ಮಾಡಬೇಕು ಹಾಗಾಗಿ ನೀರಿನ ಕೊರತೆ ಇರದೆ ಬೆಳೆಯು ಕೂಡ ಉತ್ತಮವಾಗಿ ಬರುತ್ತದೆ ಎಂದು ಡಾಕ್ಟರ್ ಅಭಿಪ್ರಾಯ. ಹಾಗೆ ಈ ಬಾರಿ ಜೂನ್ ತಿಂಗಳಲ್ಲೇ ರೈತರು ತಮ್ಮ ಬೆಳೆಯನ್ನು ಬೆಳೆಯಲು ಶುರು ಮಾಡಿದರೆ ರೈತರಿಗೆ ನಷ್ಟ ಆಗುವುದು ಕಡಿಮೆಯಾಗಿ ಇಳುವರಿ ಕೂಡ ಹೆಚ್ಚಾಗಿ ಬರಲಿದೆ ಹಾಗಾಗಿ ಜೂನ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಬಿದ್ದನೆ ಆರಂಭ ಮಾಡುವುದು ಉತ್ತಮ ನಿರ್ಧಾರ.

ಹಾಗೇನೆ ಸಾಕಷ್ಟು ರೈತರು ಕಳೆದ ಬಾರಿ ಕಳಪೆ ಬಿತ್ತನೆ ಬೀಜವನ್ನು ಖರೀದಿ ಮಾಡಿ ತಮ್ಮ ಬೆಳೆಗಳನ್ನು ನಾಶ ಮಾಡಿಕೊಂಡಿದ್ದರು ಆದರೆ ಈ ಬಾರಿ ನೀವು ಈ ರೀತಿಯ ತಪ್ಪನ್ನು ಮಾಡಬೇಡಿ. ಸಾಕಷ್ಟು ಕಳಪೆ ಬೀಜ ಮಾರಾಟ ಮಾಡವ ಕಂಪನಿಗಳು ಮಾರುಕಟ್ಟೆಯಲ್ಲಿ ಇದ್ದು ನೀವು ನಿಮ್ಮ ನಂಬಿಕೆ ಇರುವಂತಹ ಅಂಗಡಿಗಳಲ್ಲಿ ಮಾತ್ರ ಬಿತ್ತನೆ ಬೀಜವನ್ನು ಖರೀದಿ ಮಾಡುವ ಮೂಲಕ ನಿಮ್ಮ ಬೆಳವಣಿಗೆ ಸುರಕ್ಷತೆಯನ್ನು ನೀಡಿ ರೈತರೆ, ಹಾಗೆಯೇ ರೈತರು ತಮ್ಮ ಬೆಳೆಗಳನ್ನು ಹೆಚ್ಚು ರಾಸಾಯನಿಕ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಿದರೆ ಮತ್ತು ಹವಾಮಾನದ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳಿಗೆ ಹಂತ ಹಂತವಾಗಿ ಏನು ಕೆಲಸ ಮಾಡಬೇಕು ಮಾಡಿದರೆ ರೈತರಿಗೆ ಲಾಭವು ಕೂಡ ಅಧಿಕವಾಗಲಿದೆ. ಇಷ್ಟು ಕೂಡ ಇವತ್ತಿನ ಮಾಹಿತಿಯಾಗಿತ್ತು. ಇದೆ ರೀತಿ ಮಾಹಿತಿಗೆ ನಮ್ಮ ಕನ್ನಡ ಲಕ್ಷ್ಮಿ ವೆಬ್ ಸೈಟ್ ಗೆ ಭೇಟಿ ನೀಡುತ್ತಾ ಇರಿ.

Leave a Comment