WhatsApp Float Button

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಮೂರು ದಿನ ಬಾರಿ ಮಳೆ ಬರುವ ಸಾಧ್ಯತೆ ಇದೆ! Karnataka Weather Report

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಮೂರು ದಿನ ಬಾರಿ ಮಳೆ ಬರುವ ಸಾಧ್ಯತೆ ಇದೆ! Karnataka Weather Report

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಮುಂದುವರೆದಿದೆ ಅದರಲ್ಲಿಯೂ ರಾಜ್ಯದ ಉತ್ತರ ಭಾಗದಲ್ಲಿ ಭಾರಿ ಗಾತ್ರದ ಸೀತ ಗಾಳಿಯು ಜನರನ್ನು ನಿಬ್ಬೆರಗಾಗಿಸಿದೆ. ಇದರ ಬೆನ್ನಲ್ಲೇ ನಮ್ಮ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆಯು ಅಭಿಪ್ರಾಯಪಟ್ಟು ಮುನ್ಸೂಚನೆಯನ್ನು ನೀಡಿದೆ. ಹಾಗಿದ್ದರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬುದನ್ನು ನೋಡೋಣ ಬನ್ನಿ.

ಇಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ ನಮ್ಮ ಬೆಂಗಳೂರಿನಲ್ಲಿ ಚಳಿ ಹಾಗೂ ದಟ್ಟ ಮಂದಿರ ನಡುವೆ ಮೂಡ ಕವಿದ ವಾತಾವರಣ ಬೆಳಿಗ್ಗೆಯಿಂದಲೂ ಇತ್ತು. ಮಧ್ಯಾಹ್ನ ಅಥವಾ ಸಂಜೆಯ ಬಳಿಗೆ ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಮುನ್ಸೂಚನೆ ಇತ್ತು. ಈಗಾಗಲೇ ಕಳೆದ ವರ್ಷದ ಅಂತ್ಯದಲ್ಲಿ ಕಡೆ ದಿನ ಅಂದರೆ ಡಿಸೆಂಬರ್ 31 ನೇ ತಾರೀಕಿನಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಿದೆಯೋ ಅಲ್ಲೆಲ್ಲಾ ಹೊಸ ವರ್ಷದ ಸಂಭ್ರಮಕ್ಕೆ ಮಳೆ ಅಡ್ಡಿ ಪಡಿಸಿದೆ.

ಇದರ ಬೆನ್ನಲ್ಲೇ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳವರೆಗೆ ನಮ್ಮ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಜಾರಿ ಮಾಡಿದೆ.

ಬೆಂಗಳೂರಿನ ಹವಾಮಾನ ವರದಿ:

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ಕೂಡ ಚಳಿ ಮತ್ತು ಶೀತದ ಪ್ರಮಾಣ ಕಡಿಮೆಯಾಗಿದ್ದು ಉಷ್ಣಾಂಶದಲ್ಲಿ ಮತ್ತು ತಾಪಮಾನದಲ್ಲಿ ಕೊಂಚಮಟ್ಟಿಗೆ ಏರಿಕೆ ಕಂಡಿದೆ. ಇನ್ನು ಮುಂದಿನ ಹಲವು ದಿನಗಳವರೆಗೂ ಕೂಡ ಬೆಂಗಳೂರು ಕೂಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಯಾಗುವ ಮುನ್ಸೂಚನೆ ಇದೆ. ಗುಡುಗು ಸಹಿತ ಉತ್ತಮವಾಗಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ.

ಇದನ್ನೂ ಓದಿ: Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಮಳೆ ಆಗುವ ಸಾಧ್ಯತೆ ಇದೆ:

ನಮ್ಮ ರಾಜ್ಯದ ದಕ್ಷಿಣದ ಒಳನಾಡಿನ ಮುಂದಿನ ಮೂರು ದಿನ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಾಹಿತ್ಯ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿ ವರದಿ ನೀಡಿದೆ. ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಯಿರಿ.

  • ಚಾಮರಾಜನಗರ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಕೊಡಗು
  • ಮಂಡ್ಯ ಜಿಲ್ಲೆ
  • ಮೈಸೂರು ಜಿಲ್ಲೆ

ಈ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ವಣಹವೇ ಇರಲಿದ್ದು ಕೇಳಿಗಾಲವು ಮುಂದುವರೆಯಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಏನು ನೀಡಿದೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮತ್ತು ಚಳಿಗಾಲ ಮುಂದುವರೆಯಲಿದೆ ಎಂದು ತಿಳಿದುಕೊಳ್ಳಿ. ತುಮಕೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ರಾಮನಗರ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲಿ ಒಣಹಾವೆ ಮತ್ತು ಚಳಿಗಾಳಿ ಇರಲಿದ್ದು ಚಳಿಗಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.

ಭೀಕರ ಚಳಿ ಇರಲಿದೆ:

ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೇಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯನಗರ, ಹಾವೇರಿ, ಗದಗ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣವು ಸ್ವಲ್ಪ ಹೆಚ್ಚಿಗೆ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.

ಇದೀಗ ಹಲವು ಜಿಲ್ಲೆಗಳಲ್ಲಿ ಚಳಿ ಪ್ರಮಾಣ ತಗ್ಗಿದ್ದು ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಆಗುತ್ತಿದೆ ಮುಂದಿನ ದಿನಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಚಳಿ ಪ್ರಮಾಣವು ಹಗ್ಗಲಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯ ಪಟ್ಟಿದೆ. ಮುಂಬರುವ ಶಿವರಾತ್ರಿ ಹಬ್ಬದ ಬೆಳಗೆ ಚಳಿಗಾಲ ಸಂಪೂರ್ಣವಾಗಿ ಕಡಿಮೆಯಾಗಿ ಬೇಸಿಗೆಗಾಲವು ಬರಲಿದೆ. ಈ ನಡುವೆ ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕಳೆದ 2025 ವರ್ಷದಂತೆ ಈ ಬಾರಿಯೂ ಕೂಡ ಜೂನ್ ನಲ್ಲಿಯ ಮುಂಗಾರು ಬರಲಿದೆ ಎಂಬ ವರದಿಯನ್ನು ಹವಾಮಾನ ಇಲಾಖೆಯು ನೀಡಿದೆ. ಇದರಿಂದ ನಮ್ಮ ರೈತರು ಸಂತಸದಲ್ಲಿ ಇರಬಹುದು.

Leave a Comment