WhatsApp Float Button

ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರಿ ಮಳೆ ಜೊತೆಗೆ ಭೀಕರ ಚಳಿ ಕೂಡ ಇರಲಿದೆ! Karnataka Weather Report

ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರಿ ಮಳೆ ಜೊತೆಗೆ ಭೀಕರ ಚಳಿ ಕೂಡ ಇರಲಿದೆ! Karnataka Weather Report

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಇಂದು ನಾವು ಈ ಲೇಖನದಲ್ಲಿ ನಿಮ್ಮೆಲ್ಲರಿಗೂ ಕೂಡ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಹವಾಮಾನ ಬದಲಾವಣೆಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಿದ್ದೇವೆ. ಹೌದು ಸ್ನೇಹಿತರೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ ಜೊತೆಗೆ ಚಳಿ ಕೂಡ ಇರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ಈ ಲೇಖನದಲ್ಲಿ ಇರುತ್ತದೆ ಸಂಪೂರ್ಣವಾಗಿ ಓದಿರಿ.

ರಾಜ್ಯದಲ್ಲಿ ಒಂದು ಕಡೆಯಲ್ಲಿ ಮೈ ನಡುಗಿಸುವ ಚಳಿ ಇದ್ದು, ಇನ್ನೊಂದು ಕಡೆ ಮಳೆ ಬೀಳುವ ಭೀತಿ ಕೂಡ ಇದೆ. ರಾಜ್ಯದಲ್ಲಿ ಚಳಿ ಮಾತ್ರ ಇರಲಿದೆ ಎಂದುಕೊಳ್ಳುವಷ್ಟರಲ್ಲಿ ರಾಜ್ಯದ ದಕ್ಷಿಣ ಭಾಗದಲ್ಲಿ ಹವಾಮಾನ ಇಲಾಖೆಯು ಮಳೆ ಮುನ್ಸೂಚನೆಯನ್ನು ನೀಡಿದೆ. ಹೌದು ಮುಂದಿನ ಮೂರು ದಿನಗಳ ಕಾಲ ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಸ್ನೇಹಿತರೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಅಗಲಿದೆ?

ನಮ್ಮ ಭಾರತದ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವ ಪ್ರಕಾರ ಮುಂದಿನ ಮೂರು ದಿನಗಳ ಕಾಲ ನಮ್ಮ ರಾಜ್ಯದ ಈ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತವಾಗಿ ಭಾರಿ ಮಳೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಈ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ:

  • ಮೊದಲನೆಯ ಜಿಲ್ಲೆ: ಮಂಡ್ಯ
  • ಎರಡನೆಯ ಜಿಲ್ಲೆ: ಕೊಡಗು
  • ಮೂರನೇ ಜಿಲ್ಲೆ: ಚಾಮರಾಜನಗರ
  • ನಾಲ್ಕನೆಯ ಜಿಲ್ಲೆ: ಮೈಸೂರು

ಬೆಂಗಳೂರಿನಲ್ಲಿ ಮತ್ತು ಇತರೆ ಜಿಲ್ಲೆಗಳಲ್ಲಿ ಹವಾಮಾನ ಹೇಗಿರಲಿದೆ?

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ಇರದೆ ಇದ್ದರೂ ಕೂಡ ಭೀಕರ ಚಳಿ ಮಾತ್ರ ಜನರನ್ನು ಬಿಟ್ಟುಬಿಡದೆ ಕಾಡುವುದು ಖಚಿತ. ಇದೇ ಜನವರಿ 5ನೇ ತಾರೀಖಿನ ತನಕ ಬೆಂಗಳೂರಿನಲ್ಲಿ ಹವಾಮಾನವು ಮೋಡ ಕವಿದ ವಾತಾವರಣದಲ್ಲಿ ಹಾಗೂ ಬೆಳಿಗ್ಗೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ನಮ್ಮ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗಗಳಲ್ಲಿ ಅಂದರೆ ಬಾಗಲಕೋಟೆ ವಿಜಯಪುರ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವಾತಾವರಣವು ಚಳಿ ಹಾಗೂ ಬಿಸಿಲು ಎರಡು ಇರಲಿದೆ ಎಂದು ಇಲಾಖೆಯು ತಿಳಿಸಿದೆ.

ಅತಿಯಾದ ಮಂಜು ಈ ಜಿಲ್ಲೆಗಳಲ್ಲಿ ಇರಲಿದೆ?

ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಮತ್ತು ಇತರೆ ಕರಾವಳಿ ಮತ್ತು ಮಲ್ನಾಡಿನ ಭಾಗಗಳ ಜಿಲ್ಲೆಗಳಲ್ಲಿ ಬೆಳಗಿನ ಜಾವ ದಟ್ಟಾದ ಮಂಜು ಕವಿದ ವಾತಾವರಣವಿದ್ದು ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ಹೇಳಬಹುದಾಗಿದೆ ಹಾಗಾಗಿ ಪ್ರಯಾಣಿಕರು ತಮ್ಮ ಎಚ್ಚರಿಕೆಯಲ್ಲಿ ವಾಹನ ಚಾಲನೆ ಮಾಡುವುದು ಉತ್ತಮ.

ಉಷ್ಣಾಂಶದ ವರದಿ:

ಹಾಸನ ಮತ್ತು ದಕ್ಷಿಣ ಕನ್ನಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಉಷ್ಣಾಂಶವು ಸುಮಾರು 17 ಡಿಗ್ರಿ ಯಿಂದ 21 ಡಿಗ್ರಿ ತನಕ ಇರಲಿದ್ದು ಮಳೆ ಬೀಳುವ ಸಾಧ್ಯತೆ ಕಡಿಮೆ ಇದೆ ಹಾಗೆ ಈ ಜಿಲ್ಲೆಗಳಲ್ಲಿ ಬೆಳಗಿನ ಜಾವ ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ರೀತಿ ಇನ್ನೂ ಇಲ್ಲ ಹೊಸ ಹೊಸ ತಾಜಾ ಸುದ್ದಿಗಳನ್ನು ನೀವು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ಗೆ ಕೂಡಲೇ ಜಾಯಿನ್ ಆಗಿ.

Leave a Comment