WhatsApp Float Button

LPG Cylinder Subsidy: ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ ₹500 ರೂ. ಸಬ್ಸಿಡಿ! ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್!

LPG Cylinder Subsidy: ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ ₹500 ರೂ. ಸಬ್ಸಿಡಿ! ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಭಾರತದಲ್ಲಿ ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ಒಂದಾದ ಪ್ರಮುಖ ಯೋಜನೆ ಎಂದರೆ ಅದು ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯೋಜನೆ (PMUY) ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆಯಬಹುದು. ಇದರಿಂದ ಆರ್ಥಿಕವಾಗಿ ಹಾಗೂ ಅಡುಗೆಗೆ ಜನರಿಗೆ ತುಂಬಾ ಸಹಾಯಕವಾಗಲಿದೆ.

LPG Cylinder Subsidy: ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್

ಹೌದು ಸ್ನೇಹಿತರೆ, ಸಬ್ಸಿಡಿ ದರದಲ್ಲಿ ಈಗ ನೀವು ಗ್ಯಾಸ್ ಸಿಲಿಂಡರನ್ನು ಪಡೆಯಬಹುದು. ಹೀಗೆ ಸಬ್ಸಿಡಿ ದರದಲ್ಲಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆಯಲು ನೀವು ಏನು ಮಾಡಬೇಕು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಕಡ್ಡಾಯ? ಮತ್ತು ಅರ್ಹತೆಗಳು ಏನಿರಬೇಕು? ಇದೆಲ್ಲ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ. ಇದೇ ರೀತಿ ಎಲ್ಲಾ ಹೊಸ ಹೊಸ ಮಾಹಿತಿಗಾಗಿ ನಮ್ಮ ಕನ್ನಡ ಲಕ್ಷ್ಮಿ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ಗಗೆ ಜಾಯಿನ್ ಆಗಿ.

ಬರೋಬ್ಬರಿ ₹500 ರೂ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್


ಹೌದು ಸ್ನೇಹಿತರೆ, ಕೇವಲ ₹300 ರೂಪಾಯಿಗೆ ನೀವು ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬಹುದು, ಮತ್ತು ಆ ಗ್ಯಾಸ್ ಸಿಲಿಂಡರ್ ಮೇಲೆ ₹500 ರೂಪಾಯಿ ನಿಮಗೆ ಸಬ್ಸಿಡಿ ಸಿಗಲಿದೆ. ಇದಕ್ಕೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಇನ್ನಿತರ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು?

  • ಅರ್ಜಿ ಸಲ್ಲಿಸುವ ಮಹಿಳೆಯರು 18ರಿಂದ 59 ವರ್ಷದ ಒಳಗಿನವರ ಆಗಿರಬೇಕು.
  • ಅರ್ಜಿ ಸಲ್ಲಿಸುವ ಫಲಾನುಭವಿ ಕುಟುಂಬದವರು ಬಿಪಿಎಲ್ (BPL) ಮತ್ತು (APL) ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಮೊದಲ ಆದ್ಯತೆ.
  • ಅರ್ಜಿ ಸಲ್ಲಿಸುವ ಫಲಾನುಭವಿ LPG ಗ್ಯಾಸ್ ಕಲೆಕ್ಷನ್ ಇರಬಾರದು.
  • ಒಂದು ಕುಟುಂಬಕ್ಕೆ ಕೇವಲ ಒಂದು ಬಾರಿ ಅಷ್ಟೇ ಗ್ಯಾಸ್ ಕನೆಕ್ಷನ್ ನೀಡಲಾಗುವುದು.

ಇದನ್ನೂ ಓದಿ: Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಬಿಪಿಎಲ್ (BPL) ಅಥವಾ ಎಪಿಎಲ್ (APL) ರೇಷನ್ ಕಾರ್ಡ್
  • ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ನಂಬರ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ

ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?


ಪಿಎಂ ಉಜ್ವಲ ಯೋಜನೆಗೆ ನೀವು ಆನ್ಲೈನ್ ನಲ್ಲಿ ಗೆ ಸುಲಭವಾಗಿ ನಿಮ್ಮ ಅಜ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಸಹಾಯ ಕೇಂದ್ರಕ್ಕೆ ಅಂದರೆ ಗ್ರಾಮ ಒನ್ ನಂತಹ ಕೇಂದ್ರಗಳಿಗೆ ತೆರಳಿ ನಿಮ್ಮ ಅಜ್ಜಿಯನ್ನು ಸಲ್ಲಿಸಬಹುದು.

  • ಮೊದಲನೆಯದಾಗಿ PMUY.GOV.IN ವೆಬ್ ಸೈಟ್ಗೆ ನೀವು ಭೇಟಿ ನೀಡಬೇಕು.
  • ನಂತರ ನಿಮ್ಮ ಆಧಾರ್ ಕಾರ್ಡ್ ಮೂಲಕ ಅಲ್ಲಿ ನೀವು ಲಾಗಿನ್ ಮಾಡಿಕೊಳ್ಳಬೇಕು.
  • ಇದಾದ ನಂತರ ಅಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿಕೊಳ್ಳಬೇಕು.
  • ಈಗ ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಬೇಕು.
  • ಈಗ ನಿಮಗೆ ಸಿಗುವ ರೆಫರೆನ್ಸ್ ನಂಬರ್ನ ಮೂಲಕ್ಕ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು.

ಈ ರೀತಿ ನೀವು ಪಿಎಂ ಉಜ್ವಲ ಯೋಜನೆಯ ಅಡಿಯಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೂಲಕ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆಯಬಹುದು ಹಾಗೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಇದೇ ರೀತಿಯ ಇನ್ನು ಹೊಸ ಹೊಸ ಯೋಜನೆಗಳ ಮಾಹಿತಿಗಾಗಿ ಹಾಗೂ ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ ಸೈಟಿಗೆ ಭೇಟಿ ನೀಡಿ ಮತ್ತು ಟೆಲಿಗ್ರಾಂ ಚಾನಲ್ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗಳನ್ನು ಜಾಯಿನ್ ಆಗಿ.



Leave a Comment