WhatsApp Float Button

ಗ್ಯಾಸ್ ಸಿಲಿಂಡರ್ ಮೇಲೆ ಭಾರಿ ₹500 ರೂ. ಸಬ್ಸಿಡಿ! ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! LPG Gas Cylinder Subsidy

ಗ್ಯಾಸ್ ಸಿಲಿಂಡರ್ ಮೇಲೆ ಭಾರಿ ₹500 ರೂ. ಸಬ್ಸಿಡಿ! ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! LPG Gas Cylinder Subsidy

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿರುವಂತಹ ಬಡ ಮತ್ತು ದುರ್ಬಲ ವರ್ಗಗಳ ಕುಟುಂಬಗಳಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡಲೆಂದು ಹಾಗೆ ಅವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಲೆಂದು ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಸ್ನೇಹಿತರೆ, ಹಾಗೆ ಜಾರಿಯಾಗಿರುವಂತಹ ಯೋಜನೆಗಳಲ್ಲಿ ಒಂದಾದ ಯೋಜನೆ ಎಂದರೆ ಅದು ಗ್ಯಾಸ್ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ನೀಡುವ (PMUY) ಸಬ್ಸಿಡಿ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ಸಬ್ಸಿಡಿ ದರದಲ್ಲಿ ತಮ್ಮ ಗೃಹ ಬಳಕೆಗೆ ಗ್ಯಾಸ್ ಸಿಲಿಂಡರನ್ನು ಪಡೆಯಬಹುದು. ಇದರಿಂದ ಬಡವರ್ಗಕ್ಕೆ ಆರ್ಥಿಕವಾಗಿ ತುಂಬಾ ಸಹಾಯವಾಗಲಿದೆ.

ಅದರಲ್ಲೂ ಈಗಂತೂ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಮಾಡಲು ಆಗುವುದಿಲ್ಲ ಅನ್ನುವಷ್ಟು ವ್ಯಾಪ್ತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹರಡಿಕೊಂಡಿದೆ. ಏಕೆಂದರೆ ಬಡ ವರ್ಗಗಳಿಂದ ಹಿಡಿದು ಶ್ರೀಮಂತರೂ ಕೂಡ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ದೇಶದಾದಂತ ಎಲ್ಲಾ ಜನರು ಗ್ಯಾಸ್ ಸಿಲಿಂಡರನ್ನು ಅವಲಂಬಿಸಿಕೊಂಡಿದ್ದಾರೆ. ಅದೇ ರೀತಿ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆಯೂ ಕೂಡ ಈಗ ಹೆಚ್ಚಾಗಿದ್ದು ಬಡ ಕುಟುಂಬಗಳಿಗೆ ಇದು ಹೊರಗೆ ಆಗಿದೆ.

ಕೇವಲ ₹300 ರೂ. ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್!

ಈಗ ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯವಾಗಲಿ ಎಂದು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರನ್ನು ನೀಡಲು ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಬಡವರ್ಗದಲ್ಲಿ ಇರುವಂತಹ ಜನರು ಮತ್ತು ಮಧ್ಯಮ ವರ್ಗದ ಜನರು ಸಬ್ಸಿಡಿ ದರದಲ್ಲಿ ಅಂದರೆ ಕೇವಲ ₹300 ರೂಪಾಯಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರನ್ನು ಖರೀದಿಸಬಹುದಾಗಿದೆ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು? ಮತ್ತು ಯಾವೆಲ್ಲ ದಾಖಲೆಗಳು ಬೇಕು? ಇನ್ನು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿ.

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು?

  • ಈ ಯೋಜನೆಗೆ ಕೇವಲ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವಂತಹ ಮಹಿಳೆಯರಿಗೆ ವಯಸ್ಸಿನ ಮಿತಿಯು ಸುಮಾರು 18 ರಿಂದ 59 ವರ್ಷದ ಒಳಗೆ ಇರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆಯರ ಬಳಿ ಎಪಿಎಲ್ APL ಅಥವಾ ಬಿಪಿಎಲ್ BPL ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಅವರು ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆಯರ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇರಬಾರದು.
  • ಒಂದು ಕುಟುಂಬದ ಮಹಿಳೆಯರಿಗೆ ಕೇವಲ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಎಪಿಎಲ್ APL ಅಥವಾ ಬಿಪಿಎಲ್ BPL ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಪಾಸ್ ಬುಕ್
  • ಭಾವಚಿತ್ರ (Photo)
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೀವು ಪಿಎಂ ಉಜ್ವಲ ಯೋಜನೆಯ ಅಧಿಕೃತ pmuy.gov.in ವೆಬ್ಸೈಟ್ಗೆ ಭೇಟಿ ನೀಡಿ.
  • ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಮುಖಾಂತರ ನೀವು ಲೋಗಿನ್ ಮಾಡಿಕೊಳ್ಳಬೇಕು.
  • ಈಗ ನೀವು ಅಲ್ಲಿ ನಿಮಗೆ ಕೇಳಲಾದ ಎಲ್ಲಾ ನಿಮ್ಮ ವಿವರಗಳನ್ನು ತಪ್ಪದೇ ಭರ್ತಿ ಮಾಡಿಕೊಳ್ಳಿ.
  • ಈಗ ನಿಮಗೆ ಅಲ್ಲಿ ಕೇಳಲಾಗುವಂತಹ ನಿಮ್ಮ ಎಲ್ಲಾ ದಾಖಲೆಗಳನ್ನು ಒಂದೊಂದಾಗಿ ಅಪ್ಲೋಡ್ ಮಾಡಿಕೊಳ್ಳಿ.
  • ನೀವು ಈಗ ನಿಮ್ಮ ಅರ್ಜಿಯನ್ನು ಒಮ್ಮೆ ಪರಿಶೀಲಿಸಿಕೊಂಡು ಎಲ್ಲಾ ಸರಿ ಇದ್ದರೆ ನಿಮ್ಮ ಅಜ್ಜಿಯನ್ನು ಸಲ್ಲಿಸಿ.
  • ನಂತರ ನಿಮ್ಮ ಅರ್ಜಿಯ ರೆಫರೆನ್ಸ್ ನಂಬರ್ ನ ಮೂಲಕ ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಯಾವಾಗಾದರೂ ಪರಿಶೀಲಿಸಬಹುದು.

ಇದಾದಮೇಲೆ ಒಂದು ಅಥವಾ ಎರಡು ತಿಂಗಳಲ್ಲಿ ನಿಮಗೆ ನಿಮ್ಮ ಮೊಬೈಲ್ ನಂಬರ್ ಮೂಲಕ ಕರೆ ಅಥವಾ ಎಸ್ಎಂಎಸ್ ಬರುತ್ತದೆ. ಆಗ ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ತೆರಳಿ ಗ್ಯಾಸ್ ಸಿಲಿಂಡರನ್ನು ತೆಗೆದುಕೊಳ್ಳಬಹುದು.

ಹೀಗೆ ನೀವು ಈ ಪಿಎಂ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಸಬ್ಸಿಡಿ ದರದಲ್ಲಿ ಕೇವಲ 300 ನೀವು ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬಹುದು. ಇದೇ ರೀತಿ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ಮತ್ತು ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಅನ್ನು ಕೂಡಲೇ ಜಾಯಿನ್ ಆಗಿ.

Leave a Comment