WhatsApp Float Button

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭವಾಗಿದೆ! ಈ ಕೂಡಲೇ ನಿಮ್ಮ ಅರ್ಜಿಯನ್ನು ಕೂಡ ಸಲ್ಲಿಸಿ! New Ration Card Application

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭವಾಗಿದೆ! ಈ ಕೂಡಲೇ ನಿಮ್ಮ ಅರ್ಜಿಯನ್ನು ಕೂಡ ಸಲ್ಲಿಸಿ! New Ration Card Application

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಬಹಳಷ್ಟು ಕುಟುಂಬಗಳಿಗೆ ರಾಜ್ಯ ಸರ್ಕಾರವು ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ. ಈ ಯೋಜನೆಗಳ ಲಾಭಗಳನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳು ಪಡೆಯಬೇಕೆಂದರೆ ಅತ್ಯಂತ ಮುಖ್ಯವಾದ ದಾಖಲೆ ಬೇಕು ಅದೇನೆಂದರೆ ಅದೇ ರೇಷನ್ ಕಾರ್ಡ್ (Ration Card) ಹೌದು ರೇಷನ್ ಕಾರ್ಡ್ ರಾಜ್ಯ ಸರ್ಕಾರವು ತರುವಂತಹ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಲು ಬೇಕಾಗುವಂತಹ ಒಂದು ಅತಿ ಮುಖ್ಯವಾದ ದಾಖಲೆಯಾಗಿದೆ.

ಈ ರೇಷನ್ ಕಾರ್ಡ್ ನಿಂದ ಬಡ ಕುಟುಂಬಗಳು (ಪಡಿತರವನ್ನು ಪ್ರತಿ ತಿಂಗಳು ಪಡೆಯಬಹುದು, ಹಾಗೆ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆಯನ್ನು ಕೂಡ ಪಡೆಯಬಹುದು, ಅದೇ ರೀತಿ ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಾಕಷ್ಟು ಲಾಭವನ್ನು ಕೂಡ ಪಡೆಯಬಹುದು) ಹಾಗೆ ಇನ್ನು ಹಲವಾರು ಲಾಭಗಳನ್ನು ಈ ರೇಷನ್ ಕಾರ್ಡ್ ನಿಂದ ಜನಸಾಮಾನ್ಯರು ಮತ್ತು ಬಡ ಕುಟುಂಬಗಳು ಪಡೆದುಕೊಳ್ಳಬಹುದು. ಅದೇ ರೀತಿ ಗಿಗ್ ಶ್ರಮಿಕರು ಮತ್ತು ಕಾರ್ಮಿಕರು ಹಾಗೂ ಅಸಂಘಟಿತ ವಲಯದಿಂದ ಬರುವಂತಹ ಕೆಲಸಗಾರರಿಗಾಗಿ ಶ್ರಮ ಕಾರ್ಡ್ ಒಂದು ಮುಖ್ಯವಾದ ದಾಖಲೆಯಾಗಿದೆ.

ಹಾಗಾದರೆ ಈ ಶ್ರಮ ಕಾರ್ಡ್ ಹೊಂದಿರುವ ಕಾರ್ಮಿಕರು ಹೊಸ BPL Ration Card ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಬಹುದೇ? ಈ ಪ್ರಶ್ನೆಗೆ ಅನಿಕ ಕಾರ್ಮಿಕರು ಹಾಗೂ ಹಲವರು ಉತ್ತರವನ್ನು ಹುಡುಕುತ್ತಿದ್ದಾರೆ. ಈ ಲೇಖನದಲ್ಲಿ ಶ್ರಮ ಕಾರ್ಡ್ ಸಂಪೂರ್ಣ ಮಹತ್ವ, ಹಾಗೂ ಬಿಪಿಎಲ್ ಕಾರ್ಡ್ ಗೆ ಅರ್ಹತೆಗಳು, ಅದೇ ರೀತಿ ಅರ್ಜಿ ಪ್ರಕ್ರಿಯೆ, ಮತ್ತು ಶ್ರಮ ಕಾರ್ಡ್ ನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಲಾಗಿದೆ ಪೂರ್ತಿಯಾಗಿ ಓದಿರಿ.

ಶ್ರಮ ಕಾರ್ಡ್ ಎಂದರೆ ಏನು?

ನಮ್ಮ ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯದಿಂದ ಬರುವಂತಹ ಕೆಲಸಗಾರರು ಮತ್ತು ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ನೀಡಲಾಗುವಂತಹ ಒಂದು ಮುಖ್ಯವಾದ ಗುರುತಿನ (E-Shram) ಅಥವಾ (Shram-Card) ಚೀಟಿಯಾಗಿದೆ. ಈ ಕಾರ್ಡ್ ನಲ್ಲಿ ಕಾರ್ಮಿಕರ ಆದಾಯದ ಮಟ್ಟ ಮತ್ತು ಅವರ ಸಾಮಾಜಿಕ ಪರಿಸ್ಥಿತಿ ಹೇಗಿದೆ ಹಾಗೂ ಇನ್ನೂ ಹಲವಾರು ದಾಖಲೆಗಳನ್ನು ಸಂಗ್ರಹಿಸುವ ಕಾರ್ಡ್ ಆಗಿದೆ.

ಈ ಶ್ರಮ ಕಾರ್ಡ್ ಅನ್ನು ಕಾರ್ಮಿಕರು ಹೊಂದಿದ್ದರೆ ಅವರಿಗೆ ಅನೇಕ ಲಾಭಗಳು ಈ ದಾಖಲೆಯಿಂದ ಸಿಗಲಿದೆ:

  • ಆರೋಗ್ಯದ ನೆರವು ಅಥವಾ ಸಹಾಯ
  • ಮಕ್ಕಳಿಗೆ ಶಿಕ್ಷಣ ಮತ್ತು ಗರ್ಭಿಣಿಯರಿಗೆ ಸಹಾಯಧನ
  • ಅದೇ ರೀತಿಯ ಅಪಘಾತದ ವಿಮೆ
  • ಕೇಂದ್ರ ಸರ್ಕಾರದಿಂದ ಪಿಂಚಣಿ ಯೋಜನೆ ಲಾಭ

ಆದರೆ ಸಾಕಷ್ಟು ಜನರಿಗೆ ಇದು ಗೊತ್ತಿಲ್ಲ:

ಆದರೆ ಶ್ರಮ ಕಾರ್ಡ್ ಕಾರ್ಮಿಕರಿಗೆ ಒಂದು ಆದಾಯದ ಮಿತಿ ಇರುವ ಅಥವಾ ಅವರ ಬಡತನ ಗುರುತಿಸುವ ಪ್ರಮಾಣ ಪತ್ರವಲ್ಲ.
ಶ್ರಮ ಕಾರ್ಡು ಕಾರ್ಮಿಕರಿಗೆ ಅವರ ಕೆಲಸ ಅಥವಾ ಉದ್ಯೋಗ ಮತ್ತು ವೃತ್ತಿಯನ್ನು ದಾಖಲು ಮಾಡುವ ಅಥವಾ ದೃಢೀಕರಿಸುವ ಒಂದು ಕಾರ್ಮಿಕರ ಗುರುತಿನ ಚೀಟಿ ಆಗಿದೆ ಅಷ್ಟೇ.

ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಬೇಕಾಗುವ ಅರ್ಹತೆಗಳೇನು?

ನಮ್ಮ ಕರ್ನಾಟಕದ ರಾಜ್ಯ ಸರ್ಕಾರವು ರೇಷನ್ ಕಾರ್ಡನ್ನು ಅಳೆಯಲು ಅಳವಡಿಸಿರುವ ನಿಯಮಗಳನ್ನು ನೋಡುವುದಾದರೆ :

  • ಬಿಪಿಎಲ್ BPL ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲು ನಿಮ್ಮ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು. ಇದು ಕೇವಲ ಗ್ರಾಮಾಂತರ ಪ್ರದೇಶದ ನಿವಾಸಿಗಳಿಗೆ ಮಾತ್ರ.
  • ಮತ್ತು ನೀವು ನಗರದಲ್ಲಿ ವಾಸವಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯವು 1.80 ಲಕ್ಷಕ್ಕಿಂತ ನಿಮ್ಮ ಆದಾಯವು ಕಡಿಮೆ ಇರಬೇಕು.
  • ಅದೇ ರೀತಿ ನಿಮ್ಮ ಬಳಿ ಯಾವುದೇ ರೀತಿಯ ಕಾರು ಇರಬಾರದು, ನೀವು ವ್ಯಾಪಾರ ಮಾಡುತ್ತಿರಬಾರದು ಮತ್ತು ನಿಮ್ಮ ಕುಟುಂಬದವರ ಹೆಸರಿನಲ್ಲಿ ಯಾವುದೇ ರೀತಿಯ ದೊಡ್ಡ ಆಸ್ತಿ ಇರಬಾರದು.
  • ಈಗಾಗಲೇ ನಿಮ್ಮ ಬಳಿ BPL ರೇಷನ್ ಕಾರ್ಡ್ ಇರಬಾರದು.
  • ಅದೇ ರೀತಿ ನಿಮ್ಮ ಕುಟುಂಬದವರ ಬಳಿ ಮುಖ್ಯವಾಗಿ ಆಧಾರ್ ಕಾರ್ಡ್ ಇರಲೇಬೇಕು.

ಈ ಮೇಲಿನ ಎಲ್ಲಾ ಅರ್ಹತೆಗಳನ್ನು ನಮ್ಮ ರಾಜ್ಯ ಸರ್ಕಾರವು ಪರಿಶೀಲಿಸುವಾಗ ನಿಮ್ಮ ಎಲ್ಲಾ ಮುಖ್ಯ ದಾಖಲೆಗಳನ್ನು ಕೇಳುತ್ತದೆ. ಈ ಪ್ರಕ್ರಿಯೆಯಲ್ಲಿ ಶ್ರಮ ಕಾರ್ಡನ್ನು ಕೂಡ ಪರಿಶೀಲಿಸಲಾಗುತ್ತದೆ ಆದರೆ ಅದನ್ನು ಬಿಪಿಎಲ್ ಕಾರ್ಡ್ ನೀಡುವ ಪ್ರಮುಖ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

ಶ್ರಮ ಕಾರ್ಡ್ ಅನ್ನು ಬಳಸಿಕೊಂಡು ಬಿಪಿಎಲ್ BPL ಪಡಿತರ ಕಾರ್ಡ್ ಮಾಡಿಸಿಕೊಳ್ಳಬಹುದು?

ಶ್ರಮ ಕಾರ್ಡ್ ಬಳಸಿಕೊಂಡು ನೀವು ಪರೋಕ್ಷವಾಗಿ ಬಿಪಿಎಲ್ ಕಾರ್ಡ್ ಅನ್ನು ಮಾಡಿಸಬಹುದು ಆದರೆ ನೇರವಾಗಿ ಮಾಡಿಸಲು ಆಗುವುದಿಲ್ಲ ಏಕೆಂದರೆ ಕೆಳಗೆ ಓದಿ:

  • ಶ್ರಮ ಕಾರ್ಡ್ ನಿಮ್ಮ ಉದ್ಯೋಗವನ್ನು ಗುರುತಿಸುತ್ತದೆ ಮತ್ತು ನೀವು ಕಾರ್ಮಿಕರೆಂದು ಗುರುತಿಸುತ್ತದೆ.
  • ಅದೇ ರೀತಿ ನಿಮ್ಮ ಆದಾಯದ ಮಿತಿಯನ್ನು ಕೂಡ ಶ್ರಮ ಕಾರ್ಡ್ ಗುರುತಿಸುತ್ತದೆ.
  • ಅರ್ಜಿಯಲ್ಲಿ ಶ್ರಮ ಗಾರ್ಡನ್ನು ನೀವು (ಆ ಕ್ಯೂಪೇಶನ್ ಪ್ರೂಫ್ – Occupation Proof) ಅಂದರೆ ಉದ್ಯೋಗ ಪುರಾವೆಯಾಗಿ ಬಳಸಬಹುದು.
  • ಆದರೆ ಶ್ರಮ ಕಾರ್ಡ್ ನಿಮ್ಮ ಬಳಿ ಇದ್ದ ಮಾತ್ರಕ್ಕೆ ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮತ್ತು ನಿಯಮದ ಪ್ರಕಾರ ನೀವು BPL ಬಿಪಿಎಲ್ ಕಾರ್ಡ್ ಗಾರ್ಡನ್ನು ಮಾಡಿಸಲು ಸಾಧ್ಯವಿಲ್ಲ.
  • ಏಕೆಂದರೆ ಇದು ಆದಾಯ ಪ್ರಮಾಣ ಪತ್ರಕ್ಕೆ ಸಮವಾದ ದಾಖಲೆಯಲ್ಲ ಹಾಗಾಗಿ ನೀವು ಇದನ್ನು ಬಳಸಿಕೊಂಡು ರೇಷನ್ ಕಾರ್ಡ್ ಮಾಡಿಸಲು ಸಾಧ್ಯವಿಲ್ಲ.

ಬಿಪಿಎಲ್ BPL ಕಾರ್ಡ್ ಮಾಡಿಸುವಾಗ ಶ್ರಮ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?

ಸಾಕಷ್ಟು ಬಳ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸದಸ್ಯರು ತಾವು ಕೆಲಸ ಮಾಡುತ್ತಿದ್ದರೂ ಕೂಡ ತಮ್ಮ ಆದಾಯದ ಮಿತಿಯನ್ನು ಅಥವಾ ಸ್ಯಾಲರಿ ಸ್ಲಿಪ್ಪನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಅಂತಹ ಸಮಯದಲ್ಲಿ ಶ್ರಮ ಕಾರ್ಡ್ ನಿಮ್ಮ ಸಹಾಯಕ್ಕೆ ಬರುತ್ತದೆ:

  • ನೀವು ನಿರ್ದಿಷ್ಟವಾದ ಉದ್ಯೋಗವನ್ನು ಮಾಡುತ್ತಿದ್ದೀರಿ ಎಂದು ಸೂಚಿಸುತ್ತದೆ.
  • ನೀವು ಅಸಂಘಟಿತ ವಲಯದ ಕಾರ್ಮಿಕರು ಎಂದು ಸೂಚಿಸುತ್ತದೆ.
  • ನಿಮಗೆ ಸ್ಥಿರವಾದ ಆದಾಯವಿಲ್ಲವೆಂದು ಕೂಡ ಸೂಚಿಸುತ್ತದೆ.
  • ಅದೇ ರೀತಿ ನೀವು ದುರ್ಬಲ ಮತ್ತು ಆರ್ಥಿಕವಾಗಿ ಸದೃಢವಾಗಿಲ್ಲ ಎಂದು ಸೂಚಿಸುತ್ತದೆ.

ಬಿಪಿಎಲ್ ಕಾರ್ಡ್ ಮಾಡಿಸುವಾಗ ಜಿಲ್ಲಾ ಆಹಾರ ಇಲಾಖೆಯು ನಿಮ್ಮ ಮೂಲ ದಾಖಲೆಗಳನ್ನು ಪರಿಶೀಲಿಸುವಾಗ ಶ್ರಮ ಕಾರ್ಡ್ ಅನ್ನು ಸಹಾಯ ಕಾರ್ಡ್ ಆಗಿ ಮತ್ತು ದಾಖಲೆಯಾಗಿ (Supporting Document) ಆಗಿ ಪರಿಗಣಿಸಲಾಗುತ್ತದೆ.

BPL ಪಡಿತರ ಕಾರ್ಡನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು?

ಬಿಪಿಎಲ್ ಪಡಿತರ ಗಾರ್ಡನ್ನು ಮಾಡಿಸಲು ಶ್ರಮ ಕಾರ್ಡ್ ಜೊತೆಗೆ ನಿಮಗೆ ಇನ್ನೂ ಹಲವಾರು ಪ್ರಮುಖ ದಾಖಲೆಗಳು ಬೇಕಾಗುತ್ತವೆ ಆ ದಾಖಲೆಗಳ ಪಟ್ಟಿ ಕೇಳಗಿದೆ:

  • ಆಧಾರ್ ಕಾರ್ಡ್ – ನಿಮ್ಮ ಎಲ್ಲಾ ಕುಟುಂಬ ಸದಸ್ಯರದ್ದು ಬೇಕು.
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ನಿಮ್ಮ ವಿಳಾಸ ಪುರಾವೆ ಅಥವಾ ನಿವಾಸದ ಪ್ರಮಾಣ ಪತ್ರ
  • ಕರೆಂಟ್ ಬಿಲ್
  • ಕುಟುಂಬದ ಮುಖ್ಯಸ್ಥರ ಭಾವಚಿತ್ರ (ಫೋಟೊ)
  • ಶ್ರಮ ಕಾರ್ಡ್ (ಸಹಾಯ ದಾಖಲೆಯಾಗಿ ಮಾತ್ರ)

ಹೊಸ ಬಿಪಿಎಲ್ BPL ಕಾರ್ಡಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು?

ನೀವು ಹೊಸ ಪಡಿತರ ಚೀಟಿಯನ್ನು ಪಡೆಯಲು ನಿಮಗೆ ಎರಡು ವಿಧಾನಗಳಿವೆ ಒಂದು ಆನ್ಲೈನ್ ಮೂಲಕ ಇನ್ನೊಂದು ಆಫ್ಲೈನ್ ಮೂಲಕ ಎರಡನ್ನು ಕೂಡ ವಿವರಿಸಲಾಗಿದೆ ನೋಡಿ:

  • ಆನ್ಲೈನ್ ಮೂಲಕ ಜನ ಸೇವಾ ಕೇಂದ್ರದಲ್ಲಿಯೂ ಬಿಬಿಎಲ್ ಕಾರ್ಡ್ ಅನ್ನು ಮಾಡಿಸಬಹುದು.
  • ಮೊದಲನೆಯದಾಗಿ ಸರ್ಕಾರದ ಆಹಾರ ಕರ್ನಾಟಕ (Ahara Karnataka) ಪೋರ್ಟಲ್ ಗೆ ಭೇಟಿ ನೀಡಿ.
  • ನಂತರ ಅಲ್ಲಿ (New Ration Card) ಆಯ್ಕೆಯನ್ನು ಕ್ಲಿಕ್ ಮಾಡಿ.
  • ಈಗ ಅರ್ಜಿದಾರರ ಎಲ್ಲಾ ಮುಖ್ಯ ನ್ಯಾಯಾಧಿಗಳನ್ನು ನಮೂದಿಸಿ.
  • ಈಗ ಇಲ್ಲಿ ನಿಮ್ಮ ಕುಟುಂಬ ಸದಸ್ಯರ ಆಧಾರ್ ಸೀಲಿಂಗ್ ಅನ್ನು ಮಾಡಿಸಿಕೊಳ್ಳಿ.
  • ನಂತರ ಅಲ್ಲಿ ಕೇಳಲಾಗುವ ಎಲ್ಲಾ ಮುಖ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.
  • ಅಂತಿಮವಾಗಿ ನಿಮ್ಮ ಅರ್ಜಿಯನ್ನು ಈಗ ಸಲ್ಲಿಸಿ.
  • ಈಗ ಅಂತಿಮವಾಗಿ ನಿಮಗೆಲ್ಲಾ ವಿವರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಮಗೆ ಪೋಸ್ಟ್ ನ ಮೂಲಕ ಕಾರ್ಡ್ ಬರುವುದು.

Offline ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ತೆರಳಿ.
  • ಈಗ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ಪಡೆದುಕೊಳ್ಳಿ.
  • ಈಗ ನಿಮ್ಮ ಅರ್ಜಿಗೆ ಬೇಕಾಗುವ ಪ್ರಮುಖ ದಾಖಲೆಗಳನ್ನು ಅರ್ಜಿಯ ಜೊತೆಗೆ ಜೋಡಿಸಿ.
  • ಶ್ರಮ ಕಾರ್ಡ್ ನಿಮ್ಮಲ್ಲಿ ಇದ್ದರೆ ಅದರ ಪ್ರತಿಯನ್ನು ನೀವು ಅರ್ಜಿ ಜೊತೆಗೆ ಜೋಡಿಸಿ.
  • ಈಗ ನಿಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ಅಧಿಕಾರಗಳಿಗೆ ಸಲ್ಲಿಸಿ.
  • ನಂತರ ಅಲ್ಲಿನ ಸ್ಥಳೀಯ ತಾಸಿಲ್ದಾರ್ ಅವರ ಪರಿಶೀಲನೆ ನಂತರ ನಿಮಗೆ ರೇಷನ್ ಕಾರ್ಡ್ ದೊರೆಯುತ್ತದೆ.

ಬಿಪಿಎಲ್ ಕಾರ್ಡ್ಗೆ Approval ಪಡೆಯಲು ಶ್ರಮ ಕಾರ್ಡು ಒಂದು ಪ್ರಮುಖ ಹಂತವಾಗುತ್ತದೆ:

ಶ್ರಮ ಕಾರ್ಡ್ ಹೊಂದಿರುವವರು ಹೆಚ್ಚಾಗಿ ದುರ್ಬಲ ವರ್ಗದವರು ಮತ್ತು ಬಡ ಕುಟುಂಬದ ಕಾರ್ಮಿಕರಾಗಿದ್ದಾರೆ. ಹೀಗಾಗಿ ಎಲ್ಲಾ ಜಿಲ್ಲೆಗಳ ತಾಸಿಲ್ದಾರ್ಗಳು ಶ್ರಮ ಕಾರ್ಡ್ ಹೊಂದಿರುವ ಎಲ್ಲಾ ಕಾರ್ಮಿಕ ವರ್ಗದವರಿಗೆ ಬಿಪಿಎಲ್ ಗಾರ್ಡನ್ನು ಪಡೆಯಲು ಅನುಮೋದನೆ ಅಂದರೆ ಅಪ್ರುವಲ್ಲನ್ನು Approval ಕೊಡಲು ಯೋಚನೆ ಮಾಡುವುದಿಲ್ಲ

  • ಈ ಶ್ರಮ ಕಾರ್ಡ್ ನಿಮಗೆ ನಿಮ್ಮ ಉದ್ಯೋಗದ ಪೂರಾವೆ ಆಗಿರುತ್ತೆ.
  • ಅದೇ ರೀತಿ ನಿಮ್ಮ ಆದಾಯದ ಮಿತಿಯನ್ನು ಕೂಡ ಪರಿಗಣಿಸುತ್ತದೆ.
  • ನೀವು ಸರ್ಕಾರದ ದೃಷ್ಟಿಯಲ್ಲಿ ಕಡಿಮೆ ಆದಾಯ ಮಿತಿಯನ್ನು ಹೊಂದಿರುವರ ಗುಂಪಿಗೆ ಸೇರುತ್ತೀರಿ.

ಆದರೆ ಅಂತಿಮವಾಗಿ ತಾಶಿಲ್ದಾರ್ ರವರ ನಿರ್ಧಾರ ಮತ್ತು ನಿಮ್ಮ ಆದಾಯದ ಪ್ರಮಾಣ ಪತ್ರದ ಮೇಲೆ ನಿರ್ಧಾರವಾಗುತ್ತದೆ

ಮುಖ್ಯ ಸೂಚನೆಗಳು & ಸಾರಾಂಶ:

  • ನಿಮ್ಮ ಬಳಿ ಶ್ರಮ ಕಾರ್ಡ್ ಇದ್ದ ಮಾತ್ರಕ್ಕೆ ಪಡಿತರ ಚೀಟಿಯನ್ನು ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ.
  • ಆದರೆ ನೀವು ನಿಮ್ಮ ರೇಷನ್ ಕಾರ್ಡ್ ನ ಅರ್ಜಿಯ ಜೊತೆಗೆ ಅದನ್ನು ಸಹಾಯ ದಾಖಲೆಯಾಗಿ ಸಲ್ಲಿಸಬಹುದು.
  • ಸರ್ಕಾರದ ಪ್ರಕಾರ ನಿಮ್ಮ ಬಳಿ ಆದಾಯ ಪ್ರಮಾಣ ಪತ್ರವಿದ್ದರೆ ನಿಮಗೆ ಪಡಿತರ ಚೀಟಿ ಸಿಗುತ್ತದೆ.
  • ನಾವು ಮೇಲೆ ತಿಳಿಸಲಾದ ಎಲ್ಲಾ ಮುಖ್ಯ ದಾಖಲೆಗಳು ಕೂಡ ನೀವು ಅರ್ಜಿಯ ಜೊತೆಗೆ ಕಡ್ಡಾಯವಾಗಿ ಸಲ್ಲಿಸಲೇಬೇಕು.
  • ಶ್ರಮ ಕಾರ್ಡ್ ನಿಮ್ಮ ಬಳಿ ಇದ್ದರೆ ಅದು ನಿಮ್ಮ ಆದಾಯ ಮಿತಿಯನ್ನು ಮತ್ತು ನಿಮ್ಮ ಉದ್ಯೋಗವನ್ನು ದೃಢೀಕರಿಸುವ ಕಾರ್ಡ್ ಆಗಿ ನೀವು ಸಲ್ಲಿಸುವ ಬಿಪಿಎಲ್ ಕಾರ್ಡ್ ಅರ್ಜಿಗೆ ಸಹಾಯವಾಗುತ್ತದೆ.

ಕೊನೆಯ ಮಾತು:

ನೀವು ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದರೆ ಮತ್ತು ಬಡ ಕುಟುಂಬಕ್ಕೆ ಸೇರಿದವರಾಗಿದ್ದರೆ. ಮತ್ತು ನೀವು ಶ್ರಮ ಕಾರ್ಡನ್ನು ಹೊಂದಿದ್ದರೆ ನೀವು ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ನಿಮಗೆ ಶ್ರಮ ಕಾರ್ಡ್ ನೆರವಾಗುತ್ತದೆ. ಆದರೆ ಇದು ಸರ್ಕಾರದ ಲೆಕ್ಕದಲ್ಲಿ ಮುಖ್ಯ ದಾಖಲೆ ಆಗಿ ಪರಿಗಣಿಸಲಾಗುವುದಿಲ್ಲ. ಹಾಗಾಗಿ ನೀವು ಬಿಪಿಎಲ್ ಕಾರ್ಡ್ ಪಡೆಯಲು ಇದು ನಿಮಗೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಅದೇ ರೀತಿ ನಿಮ್ಮ ಬಳಿ ಆದಾಯ ಪ್ರಮಾಣ ಪತ್ರ ಇದ್ದಲ್ಲಿ ನೀವು ಬಿಪಿಎಲ್ ಕಾರ್ಡ್ ಪಡೆಯಲು ನೇರವಾಗಿ ಪ್ರಯತ್ನಿಸಬಹುದು. ಧನ್ಯವಾದ

Leave a Comment