WhatsApp Float Button

PDO-994 ಹುದ್ದೆಗಳಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಸಚಿವರಿಂದ ಗ್ರೀನ್ ಸಿಗ್ನಲ್, ಪರೀಕ್ಷೆ ಯಾವಾಗ? PDO Vacancies Update

PDO-994 ಹುದ್ದೆಗಳಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ಸಚಿವರಿಂದ ಗ್ರೀನ್ ಸಿಗ್ನಲ್, ಪರೀಕ್ಷೆ ಯಾವಾಗ? PDO Vacancies Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಕೂಡ ಸ್ವಾಗತ. ಈ ಲೇಖನದಲ್ಲಿ ನಾವು (PDO 994 Vacancies) ಪಿಡಿಒ 994 ಹುದ್ದೆಗಳ ಬಗ್ಗೆ ಮುಖ್ಯವಾದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹೊರಟಿದ್ದೇವೆ. ಹೌದು ಸಾಕಷ್ಟು ಜನ ಅಭ್ಯರ್ಥಿಗಳು ಪಿಡಿಒ ಹುದ್ದೆಗಳಿಗೆ ಆಕಾಂಕ್ಷಿಗಳಾಗಿದ್ದರು ಆದರೆ ಸರ್ಕಾರದ ಕಡೆಯಿಂದ ಈ ಹುದ್ದೆಗಳನ್ನು ನಡೆಸಲು ಅನುಮತಿ ಸಿಕ್ಕಿರಲಿಲ್ಲ, ಈ ಹೊಸ ವರ್ಷದ ಸಂಭ್ರಮದಲ್ಲೇ ನಿಮಗೆ ಪಿಡಿಒ (PDO) ಹಗಲು ಸುವರ್ಣ ಅವಕಾಶ ಒದಗಿ ಬಂದಿದೆ. ಲೇಖನವನ್ನು ಸಂಪೂರ್ಣವಾಗಿ ಓದಿ ಪೂರ್ತಿ ಮಾಹಿತಿ ತಿಳಿಯಿರಿ.

ಸ್ನೇಹಿತರೆ ಇದು ಕೇವಲ ಸುದ್ದಿಯಾಗಿ ಉಳಿದಿಲ್ಲ ಏಕೆಂದರೆ ಇದು ನಿಮ್ಮ ಜೀವನವನ್ನೇ ಬದಲಾಯಿಸುವ ಸುವರ್ಣ ಅವಕಾಶವೆಂದೇ ಹೇಳಬಹುದು ಏಕೆಂದರೆ ಬೆಳಗಾವಿಯಲ್ಲಿ ಮೊನ್ನೆ ನಡೆದ ಅಧಿವೇಶನದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು 994 ಪಿಡಿಒ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಹಸಿರು ನಿಶಾನೆ ನೀಡುವ ಮೂಲಕ ಮುದ್ರೆಯನ್ನು ಒತ್ತಿದ್ದಾರೆ. ಈ ಹುದ್ದೆಗಳಿಗೆ ಅರ್ಹತೆಗಳು ಏನಿರಬೇಕು ಎಂದರೆ ನೀವು ಪದವೀಧರರಾಗಿದ್ದರೆ ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿಯನ್ನು ಹಾಕಬಹುದು?

ಈ ಹುದ್ದೆಗಳನ್ನು ನಿಮ್ಮ ಪಾಲಾಗಿಸಿಕೊಳ್ಳಲು ನೀವು ಯಾವುದೇ ರೀತಿಯ ದೊಡ್ಡ ದೊಡ್ಡ ಪದವಿ ಅಥವಾ ಹೆಚ್ಚಿಗೆ ಓದಿ ಪಿ ಎಚ್ ಡಿ ಮಾಡಿರುವ ಅಗತ್ಯವಿಲ್ಲ. ಈ ಹುದ್ದೆಗಳಿಗೆ ಬೇಕಾಗಿರುವುದು ಕೇವಲ ನೀವು ನಿಮ್ಮ ಪದವಿಯನ್ನು ಪೂರ್ಣಗೊಳಿಸಬೇಕು ಅಷ್ಟೇ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಯಾವುದೇ ಒಂದು ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾನಿಲಯದಲ್ಲಿ ಯಾವುದಾದರೂ ಒಂದು (Any Degree) ಪದವಿಯನ್ನು ಪೂರ್ಣಗೊಳಿಸಬೇಕು.

ಇದನ್ನೂ ಓದಿ: ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣ ಈ 15 ಜಿಲ್ಲೆಗಳು ಫಲಾನುಭವಿಗಳಿಗೆ ಮೊದಲು ಜಮಾ! Gruhalakshmi 25th Installment Update

ವಯೋಮಿತಿ ವಿವರ:

ಈ ಹುದ್ದೆಗಳಿಗೆ ನೀವು ಹಾಕಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ತುಂಬಿರುವ ಅಭ್ಯರ್ಥಿಗಳ ತನಕ ಅರ್ಜಿ ಸಲ್ಲಿಸಬಹುದು. SC, ST, OBC ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಈ ಮೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಆಹ್ವಾನಿಸಲಾಗುವುದು:

ಈ ಬಾರಿಯೂ ಕೂಡ ಪಿಡಿಒ ಹುದ್ದೆಯಲ್ಲಿ ಉತ್ತರ ಕನ್ನಡ ಜಿಲ್ಲೆಗಳಿಗೆ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಸಿಕ್ಕಿದಂತಾಗಿದೆ. ಹೌದು ಉತ್ತರ ಕನ್ನಡ ಜಿಲ್ಲೆಗೆ ಸುಮಾರು: 75 ಹುದ್ದೆಗಳು, ಅದೇ ರೀತಿ ದಾವಣಗೆರೆ ಜಿಲ್ಲೆಗೆ ಸುಮಾರು: 72 ಹುದ್ದೆಗಳು, ಮತ್ತು ಕಲಬುರಗಿ ಜಿಲ್ಲೆಗೆ ಸುಮಾರು: 68 ಹುದ್ದೆಗಳು ಅದಿಸೂಚನೆ ಹೊರಡಿಸಲಾಗುತ್ತದೆ.

ಇನ್ನು ಉಳಿದಂತಹ ಜಿಲ್ಲೆಗಳಿಗೆ ಎಷ್ಟೆಷ್ಟು ಹುದ್ದೆಗಳು ಹಂಚಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ ನೋಡಿ:

  • ಉತ್ತರ ಕನ್ನಡ : 75
  • ದಾವಣಗೆರೆ : 72
  • ಕಲಬುರಗಿ : 68
  • ಬೆಂಗಳೂರು ನಗರ : 67
  • ವಿಜಯಪುರ : 69
  • ಚಿಕ್ಕಮಗಳೂರು : 55
  • ಹಾವೇರಿ : 53
  • ತುಮಕೂರು : 49
  • ಹಾಸನ : 48
  • ವಿಜಯನಗರ : 47
  • ರಾಯಚೂರು : 45
  • ಕೋಲಾರ : 43
  • ಬೀದರ್ : 40
  • ಮಂಡ್ಯ : 33
  • ಕೊಪ್ಪಳ : 30
  • ಬೆಂಗಳೂರು ಗ್ರಾಮಾಂತರ : 29
  • ಚಿಕ್ಕಬಳ್ಳಾಪುರ : 28
  • ಉಡುಪಿ : 26
  • ಚಾಮರಾಜನಗರ : 26
  • ಧಾರವಾಡ : 18
  • ಯಾದಗಿರಿ : 18
  • ಚಿತ್ರದುರ್ಗ : 13
  • ಕೊಡಗು : 10
  • ಗದಗ : 09
  • ಮೈಸೂರು : 01
  • ಬಾಗಲಕೋಟೆ : 01
  • ಒಟ್ಟು ಹುದ್ದೆಗಳ ಸಂಖ್ಯೆ : 994

ಆಯ್ಕೆ ಪ್ರಕ್ರಿಯೆಯ ವಿವರ!

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಪಿಎಸ್ಸಿ (KPSC) ವತಿಯಿಂದ ಪರೀಕ್ಷೆ ನಡೆಸಲಾಗುತ್ತದೆ. ಪೇಪರ್ 1 ಮತ್ತು ಪೇಪರ್ 2 ರಂತೆ ಒಟ್ಟು 2 ಪೇಪರ್ಗಳ ಪರೀಕ್ಷೆ ನಡೆಯಲಿದೆ. ಪೇಪರ್ 1 ರಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಇರಲಿವೆ ಇದು 100 ಅಂಕಕ್ಕೆ ನಡೆಯಲಿದೆ. ಪೇಪರ್ 2 ಅನ್ನೋ ಪಾಸ್ ಮಾಡಲು ನೀವು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಷಯಗಳ ಮೇಲೆ ನೀವು ಚೆನ್ನಾಗಿ ಅಭ್ಯಾಸ ಮಾಡಿರಬೇಕು.

ಪರೀಕ್ಷೆ ಯಾವಾಗ ನಡೆಯಲಿದೆ?

ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಂತೆ ಮತ್ತು ಸಚಿವರು ಆದೇಶ ನೀಡಿರುವಂತೆ ಇನ್ನು 2 ಅಥವಾ 3 ತಿಂಗಳುಗಳಲ್ಲಿ ಈ ಪಿಡಿಒ ಹುದ್ದೆಗಳಿಗೆ (PDO 994 Vacancies) ಅಧಿಕೃತವಾಗಿ ಅದಿಸೂಚನೆ ಹೊರಡಿಸಲಾಗುತ್ತದೆ ಎಂಬ ಮಾಹಿತಿ ಇದೆ.

Leave a Comment