WhatsApp Float Button

PM Kisan 22nd Installment List: ಪಿಎಂ ಕಿಸಾನ್ ಈ 22ನೇ ಕಂತಿನ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ!

PM Kisan 22nd Installment List: ಪಿಎಂ ಕಿಸಾನ್ ಈ 22ನೇ ಕಂತಿನ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ!

PM Kisan 22nd Installment List: ಎಲ್ಲಾ ರೈತರಿಗೂ ಇಂದಿನ ಮುಖ್ಯವಾದ ಮಾಹಿತಿಗೆ ಸ್ವಾಗತ, ಈ ಒಂದು ಲೇಖನದಲ್ಲಿ ನಾವು ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಬಗ್ಗೆ ಹಾಗೂ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಈ 22ನೇ ಕಂತಿನ ಪಟ್ಟಿ ಬಿಡುಗಡೆ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ರೈತರಿಗೆ ನೀಡಲು ಹೊರಟಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿರಿ ಹಾಗೂ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಇದೇ ರೀತಿ ಇನ್ನೂ ಹೆಚ್ಚಿನ ಹೊಸ ಹೊಸ ದಿನನಿತ್ಯದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಅನ್ನು ಜಾಯಿನ್ ಆಗಿ.

PM Kisan 22nd Installment List:

ಪಿಎಂ ಕಿಸಾನ್ ಯೋಜನೆಯಲ್ಲಿ ಇದುವರೆಗೂ ಕೂಡ 21ನೇ ಕಂತಿನ ಹಣದ ತನಕ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರದ ಕಡೆಯಿಂದ ಜಮಾ ಮಾಡಲಾಗಿದೆ. 21ನೇ ಕಂತು ಅಂದರೆ ಒಟ್ಟು ಸುಮಾರು ₹42,000 ಗಳನ್ನ ನಮ್ಮ ದೇಶದ ಎಲ್ಲಾ ಪಿಎಂ ಕಿಸಾನ್ ಯೋಜನೆಯ ರೈತ ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ. ಇದೀಗ ನಮ್ಮ ಎಲ್ಲಾ ರೈತ ವರ್ಗದವರು ಕೂಡ ಕಾಯುತ್ತಿರುವುದು ಪಿಎಮ್ ಕಿಸಾನ್ ಯೋಜನೆಯ 22ನೇ ಕಂತಿಗಾಗಿ, 22ನೇ ಕಂತು ಯಾವಾಗ ಜಮಾ? ಹಾಗೂ 22ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಇದನ್ನ ಹೇಗೆ ಚೆಕ್ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಪೂರ್ತಿಯಾಗಿ ಓದಿರಿ.

PM Kisan 22nd Installment List ಎಂದರೆ ಏನು?

PM Kisan 22nd Installment ಪಟ್ಟಿ ಅಂದರೆ ಪಿಎಂ ಕಿಸನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಅರ್ಹರಾಗಿರುವಂತಹ ಎಲ್ಲಾ ರೈತರ ಹೆಸರು ಈ ಪಟ್ಟಿಯಲ್ಲಿ ಇರುತ್ತದೆ. ಇದನ್ನು ಸ್ವತಃ ಕೇಂದ್ರ ಸರ್ಕಾರದಿಂದ ಪ್ರತಿ ಬಾರಿಯೂ ಒಂದೊಂದು ಕಂತು ಬಿಡುಗಡೆಯಾಗುವ ಮುನ್ನ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ. ಇದನ್ನು ಎಲ್ಲಾ ರೈತರು ವೀಕ್ಷಿಸಬಹುದು ಹಾಗೆಯೇ ತಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಇದೆಯಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳಬಹುದು.

PM Kisan 22nd Installment List ನಲ್ಲಿ ನಿಮ್ಮ ಹೆಸರನ್ನು ನೋಡುವುದು ಹೇಗೆ?

ನಾವು ಈ ಕೆಳಗೆ ತಿಳಿಸಿರುವಂತೆ ಅತಿ ಸರಳವಾದ ವಿಧಾನದಲ್ಲಿ ನೀವು ನಿಮ್ಮ ಹೆಸರನ್ನು ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಪಟ್ಟಿಯಲ್ಲಿ ಇದೆಯ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಿ ಕೊಳ್ಳಬಹುದು:

  • ಮೊದಲನೆಯದಾಗಿ PM Kisan ಯೋಜನೆಯ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು.
  • ಆ ವೆಬ್ ಸೈಟ್ ನಲ್ಲಿ ನೀವು “Farmers Corner” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
  • ಇದಾದ ನಂತರ ಅಲ್ಲಿ “Beneficiary List” ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
  • ಇದಾದ ಮೇಲೆ ಅಲ್ಲಿ ನಿಮ್ಮ ರಾಜ್ಯದ ಹೆಸರು, ಜಿಲ್ಲೆ ಹೆಸರು ನಂತರ ತಾಲೂಕು ಹೆಸರನ್ನು ಮತ್ತು ಗ್ರಾಮದ ಹೆಸರನ್ನು ಆಯ್ಕೆಮಾಡಿಕೊಳ್ಳಿ.
  • ನಂತರ ಕೆಳಗೆ ಕಾಣಿಸುವ “Get Report” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರ ನಿಮಗೆ ಪಿಎಂ ಕಿಸಾನ್ ಯೋಜನೆಯ ರೈತರ ಪಟ್ಟಿ ಕಾಣುತ್ತದೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

ಪಿಎಂ ಕಿಸಾನ್ ಯೋಜನೆಗೆ ಬೇಕಾಗುವ ಅರ್ಹತೆಗಳು:

  • ಮೊದಲನೇದಾಗಿ ಭಾರತದಲ್ಲಿ ಖಾಯಂ ರೈತರಾಗಿ ಇರಬೇಕು.
  • ಎರಡನೆಯದಾಗಿ ಅರ್ಹತೆ ಹೊಂದಲು ನಿಮ್ಮ ಬಳಿ ಜಮೀನು ಇರಬೇಕು.
  • ಮೂರನೆಯದಾಗಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
  • ನಾಲ್ಕನೆಯದಾಗಿ ನೀವು E-KYC ಅನ್ನು ಮಾಡಿಸಬೇಕು.

ಈ ಯೋಜನೆಗೆ ಸರ್ಕಾರಿ ಉದ್ಯೋಗದಲ್ಲಿ ಇರುವವರು ಹಾಗೂ ತೆರಿಗೆಗಳನ್ನು ಪಾವತಿಸುವವರು ಅರ್ಹರ ಆಗುವುದಿಲ್ಲ.

ಪಿಎಂ ಕಿಸಾನ್ ಹಣ ಜಮಾ ಆಗದೇ ಇರಲು ಕಾರಣ ಏನು?

ಈ ನಾಲ್ಕು ಕಾರಣಗಳಿಂದ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗದೇ ಇರಬಹುದು.

  • ಪಿಎಂ ಕಿಸಾನ್ ಯೋಜನೆಯ ಅರ್ಹತೆಯುಳ್ಳ “Farmers List” ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿರುವುದು.
  • E-KYC ಅನ್ನು ನೀವು ಇನ್ನೂ ಪೂರ್ಣಗೊಳಿಸದೆ ಇರುವುದು ಆಗಿರಬಹುದು.
  • ನಿಮ್ಮ ಬ್ಯಾಂಕ್ ಖಾದಿಯಲ್ಲಿ ಏನಾದರೂ ಸಮಸ್ಯೆ ಇರಬಹುದು.
  • ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಕೂಡ ಕಾರಣ ಆಗಿರಬಹುದು.

ಈ ಸಮಸ್ಯೆಗಳನ್ನು ನೀವು ಸರಿಪಡಿಸಿಕೊಂಡ ನಂತರ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗಲು ಶುರುವಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳು ಏನು?

  • ಈ ಯೋಜನೆ ಅಡಿಯಲ್ಲಿ ಅರ್ಹರಾಗಿರುವಂತಹ ಎಲ್ಲ ರೈತರಿಗೆ ಪ್ರತಿವರ್ಷ ಮೂರು (3) ಕಂತಿನಂತೆ ₹6000 ರೂಪಾಯಿಗಳನ್ನು ಅವರ ಖಾತೆಗಳಿಗೆ ಜಮ್ಮ ಮಾಡಲಾಗುತ್ತದೆ.
  • ನೇರವಾಗಿ ಎಲ್ಲಾ ರೈತರ ಖಾತೆಗಳಿಗೆ ಹಣವನ್ನ DBT ಮುಖಾಂತರ ಜಮ್ಮ ಮಾಡಲಾಗುತ್ತದೆ.
  • ಎಲ್ಲ ರೈತರಿಗೆ ಕೃಷಿ ಮಾಡಲು ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ.
  • ಪ್ರತಿ ವರ್ಷವೂ ಹೊಸ ರೈತರು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಲಾಭವನ್ನು ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ ಹಣವನ್ನು ಯಾವೆಲ್ಲ ರೈತಪಲಾನುಭವಿಗಳು ಪಡೆದುಕೊಳ್ಳಲು ಬಯಸುತ್ತಾರೋ ಅಂತಹ ಎಲ್ಲ ರೈತರು ಕೂಡ ತಮ್ಮ ಹತ್ತಿರದ ಸಹಾಯ ಕೇಂದ್ರಕ್ಕೆ ತೆರಳಿ, ಅಲ್ಲಿ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ನಂತರ ತಮ್ಮ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಮತ್ತು ಸರ್ಕಾರದ ಸೂಚನೆಯಂತೆ ಸಂಪೂರ್ಣವಾಗಿ ತಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಂತರ ಅವರ ಅರ್ಜಿಯ ಅಂತಿಮ ಪುಟವನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಳ್ಳಬೇಕು.

ಅದೇ ರೀತಿ ನಂತರ ಬರುವಂತಹ ಎಲ್ಲಾ ಪಿಎಂ ಕಿಸಾನ್ ಯೋಜನೆಯ ಕಂತುಗಳನ್ನು ರೈತರು ಕೂಡ ಪಡೆದುಕೊಳ್ಳಬಹುದು. ಈ ಒಂದು ಯೋಜನೆಯಿಂದಾಗಿ ನಮ್ಮ ದೇಶದಲ್ಲಿ ಇರುವಂತಹ ಸಾಕಷ್ಟು ಜನ ರೈತರು ಕುಂಚಮಟ್ಟಿನ ಆರ್ಥಿಕವಾಗಿ ಸದೃಢರಾಗಲು ಮತ್ತು ತಮಗೆ ಬೇಕಾಗಿರುವ ಕೃಷಿ ಸಾಮಗ್ರಿಗಳನ್ನು ತೆಗೆದುಕೊಳ್ಳುವಲ್ಲಿ ಆ ಹಣವನ್ನು ಬೆಳೆಸಿಕೊಂಡು ಕೃಷಿಯಲ್ಲಿ ಹೆಚ್ಚು ಲಾಭಗಳನ್ನು ಗಳಿಸುತ್ತಿದ್ದಾರೆ.

ಅದಲ್ಲದೆ ಇನ್ನು ಸಾಕಷ್ಟು ಪ್ಲಾನುಭವಿಗಳು ಬೇರೆ ಬೇರೆ ವಿಷಯಗಳನ್ನು ಮಾಡಿ ಮುಂಬರುವ ಹೆಜ್ಜೆಯನ್ನು ಕೂಡ ಇಟ್ಟಿದ್ದಾರೆ ಇಂತಹ ಬೆಳವಣಿಗೆಯನ್ನು ಸರ್ಕಾರ ಬಯಸಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು ಈಗ ಈ ಯೋಜನೆ ಜಾರಿಗೆ ಬಂದಂತಹ ದಿನದಿಂದ ಹಿಡಿದು ಇಲ್ಲಿಯವರೆಗೆ ಕೋಟ್ಯಾಂತರ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಂಡು ತುಂಬಾ ಅಭಿವೃದ್ಧಿ ಕಂಡಿದ್ದಾರೆ.

Leave a Comment