WhatsApp Float Button

Job News: SBI ಬ್ಯಾಂಕ್ ನಲ್ಲಿ 1146 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅರ್ಹತೆ, ವೇತನ, ಕೊನೆ ದಿನಾಂಕ? SBI SO Requirement

Job News: SBI ಬ್ಯಾಂಕ್ ನಲ್ಲಿ 1146 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅರ್ಹತೆ, ವೇತನ, ಕೊನೆ ದಿನಾಂಕ? SBI SO Requirement

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹೌದು ಸ್ನೇಹಿತರೆ SBI ಬ್ಯಾಂಕ್ ನಲ್ಲಿ ಸುಮಾರು 1146 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾರಿಗೆಲ್ಲ ಆಸಕ್ತಿ ಇದೆಯೋ ಅಂತಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು? ಕೊನೆ ದಿನಾಂಕ ಯಾವಾಗ? ವೇತನ ಎಷ್ಟು? ಈ ಎಲ್ಲ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ ತಪ್ಪದೆ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿಯಿರಿ.

ಬ್ಯಾಂಕ್ ಹೆಸರು SBI (State Bank of India)
ಹುದ್ದೆಗಳ ಹೆಸರುSO (ಸ್ಪೆಷಲ್ ಕೇಡೆ ಆಫೀಸರ್) & CRM (ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜರ್)
ಒಟ್ಟು ಹುದ್ದೆಗಳು1146 ಹುದ್ದೆಗಳು
ಸಂಬಳSO (ಸ್ಪೆಷಲ್ ಕೇಡೆ ಆಫೀಸರ್) – 44 ಲಕ್ಷ, RM- 30 ಲಕ್ಷ & ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜರ್ – 6.20 ಲಕ್ಷ.

ಹುದ್ದೆಗಳ ವಿವರ:

  • VP Wealth (SMR) : 582 ಹುದ್ದೆಗಳು
  • AVP Wealth (RM) : 237 ಹುದ್ದೆಗಳು
  • Coustomer Relationship Exicutive : 237 ಹುದ್ದೆಗಳು

ಅರ್ಹತೆಗಳ ವಿವರ:

  • ಅಭ್ಯರ್ಥಿಯು ನಮ್ಮ ಭಾರತದ ಖಾಯಂ ನಿವಾಸಿ ಆಗಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ಯಾವುದಾದರೂ ಒಂದು ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಮೊದಲ ಆದ್ಯತೆ: ಅಭ್ಯರ್ಥಿಯು MBA ನಲ್ಲಿ (Finance, Marketing, Banking) ಕೋರ್ಸ್ ಗಳನ್ನು ಮಾಡಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಅಭ್ಯರ್ಥಿಯ ಭಾವಚಿತ್ರ (ಫೋಟೋ)
  • ಅಭ್ಯರ್ಥಿಯ ಸಹಿ
  • ಆಧಾರ್ ಕಾರ್ಡ್
  • ಅಭ್ಯರ್ಥಿಯ ರೆಸೂಮ್
  • SSLC ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ
  • ಅಂಗವಿಕಲತೆಯ ಪ್ರಮಾಣ ಪತ್ರ (ಬೇಕಾದಲ್ಲಿ)
  • ಹಿಂದಿನ ವರ್ಷದ ಎಲ್ಲಾ ಅಂಕಪಟ್ಟಿಗಳು

ವಯೋಮಿತಿ ವಿವರ:

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳ ಕನಿಷ್ಠ ವಯೋಮಿತಿಯು 20 ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿಯು 40 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಸಂಬಳದ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನಂತರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ತಕ್ಕಂತೆ ವೇತನವನ್ನು ನೀಡಲಾಗುತ್ತದೆ. ವೇತನವು ಸುಮಾರು (₹6 ಲಕ್ಷದಿಂದ ಹಿಡಿದು ₹44 ಲಕ್ಷದ ತನಕ ವಾರ್ಷಿಕವಾಗಿ ಇದೆ)

ಅರ್ಜಿ ಶುಲ್ಕದ ವಿವರ:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ವರ್ಗಗಳನ್ನುಸರ ಅರ್ಜಿ ಶುಲ್ಕ ವಿಧಿಸಲಾಗಿದೆ:

  • ಜನರಲ್ ಅಭ್ಯರ್ಥಿಗಳಿಗೆ ಸುಮಾರು : ₹750 ರೂ
  • OBC (ಒಬಿಸಿ) ಹಾಗೂ EWS ಅಭ್ಯರ್ಥಿ ಗಳಿಗೆ ಸುಮಾರು: ₹750 ರೂ.
  • SC/ST & ವಿಶೇಷ ಚೇತನರಿಗೆ: ಅರ್ಜಿ ಶುಲ್ಕದಿಂದ ವಿನಾಯತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ಅವರು ಸಲ್ಲಿಸಿರುವ ಅರ್ಜಿಗಳ (Applications) ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು.
  • ನಂತರ ವೈಯಕ್ತಿಕವಾಗಿ ಅಥವಾ ಕರೆಯ ಮುಖಾಂತರ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಇಂಟರ್ವ್ಯೂವನ್ನು ನಡೆಸಲಾಗುವುದು.
  • ಇದಾದ ಮೇಲೆ ಅಭ್ಯರ್ಥಿಗಳಿಗೆ ತಮ್ಮ ಸಂಬಳದ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಲಾಗುವುದು.
  • ಇದಾದ ನಂತರ ಅಭ್ಯರ್ಥಿಗಳನ್ನು ಅವರು ತಮ್ಮ ಸಂದರ್ಶನದಲ್ಲಿ ಭಾಗವಹಿಸುವ ರೀತಿಯ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ತಯಾರು ಮಾಡಿ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು ಮೊದಲನೆಯದಾಗಿ SBI ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  • ಅಲ್ಲಿ “Careers” ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
  • ನಂತರ ಅಲ್ಲಿ ರಿಜಿಸ್ಟರ್ ಆಗಿ ಅದಾದ್ಮೇಲೆ ಅಪ್ಲಿಕೇಶನ್ ಅನ್ನು ತುಂಬಲು ಪ್ರಾರಂಭಿಸಬೇಕು.
  • ನಾವು ಮೇಲೆ ನೀಡಿರುವಂತಹ ಎಲ್ಲ ದಾಖಲೆಗಳನ್ನು ಅಲ್ಲಿ ಅಪ್ಲೋಡ್ ಮಾಡಬೇಕು.
  • ಎಲ್ಲಾ ಡಾಕ್ಯುಮೆಂಟ್ಸ್ಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿ ಶುಲ್ಕವನ್ನು ಕಟ್ಟಬೇಕು.
  • ನಂತರ ತಮ್ಮ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಬೇಕು.
  • ಇದಾದ ಮೇಲೆ ತಮ್ಮ ಆರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ10/01/2026
ಅಧಿಕೃತ ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇದೇ ರೀತಿಯ ಎಲ್ಲಾ ಹೊಸ ಹೊಸ ಉದ್ಯೋಗಗಳ ಮಾಹಿತಿಗಳನ್ನು ನಾವು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ನಿಮಗಾಗಿ ಹಂಚಿಕೊಳ್ಳುತ್ತಿರುತ್ತೇವೆ. ನೀವು ಇಂತಹ ಸುದ್ದಿಗಳನ್ನು ಮೊದಲು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ ಅನ್ನು ಕೂಡಲೆ ಜಾಯಿನ್ ಆಗಿ.

Leave a Comment