WhatsApp Float Button

PM Kusuma Yojane: ಈ ಯೋಜನೆ ಮೂಲಕ ರೈತರಿಗೆ ಈಗ ವರ್ಷಕ್ಕೆ 20 ಲಕ್ಷ ಆದಾಯ ಗಳಿಸುವ ಹೊಸ ಅವಕಾಶ! ಇಲ್ಲಿದೆ ಮಾಹಿತಿ.

PM Kusuma Yojane: ಈ ಯೋಜನೆ ಮೂಲಕ ರೈತರಿಗೆ ಈಗ ವರ್ಷಕ್ಕೆ 20 ಲಕ್ಷ ಆದಾಯ ಗಳಿಸುವ ಹೊಸ ಅವಕಾಶ! ಇಲ್ಲಿದೆ ಮಾಹಿತಿ.

ಭಾರತದ ಕೃಷಿ ಕ್ಷೇತ್ರವನ್ನು ಇನ್ನಷ್ಟು ಲಾಭದಾಯಕವಾಗಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದದ್ದು PM KUSUM Yojana. ಈಗ ಇದರ ಮುಂದುವರಿದ ಹಂತವಾದ ಪಿಎಂ ಕುಸುಮ್ 2.0 ಶೀಘ್ರದಲ್ಲೇ ಹೆಚ್ಚು ಸೌಲಭ್ಯಗಳೊಂದಿಗೆ ರೈತರ ಮುಂದೆ ಬರಲಿಡೆ, ಇದು ಕೃಷಿಯೊಂದಿಗೆ ಸೌರಶಕ್ತಿಯನ್ನು ಜೋಡಿಸುವ ಕ್ರಾಂತಿಕಾರಿ ಹೆಜ್ಜೆಯಾಗಿದೆ.

PM Kusuma Yojane

ಪಿಎಂ ಕುಸುಮ್ 2.0 ಯೋಜನೆ ಮಾಹಿತಿ 

ಪಿಎಂ ಕುಸುಮ್ ಯೋಜನೆಯ ಎರಡನೇ ಹಂತವು ರೈತರಿಗೆ ಸೌರಶಕ್ತಿಯ ಮೂಲಕ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಕೃಷಿ ಭೂಮಿಯಲ್ಲೇ ಸೌರ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು “ಅಗ್ರಿ-ವೋಲ್ಟೈಕ್” ತಂತ್ರಜ್ಞಾನ ಎಂದು ಕರೆಯುತ್ತಾರೆ.

ಈ ಯೋಜನೆ ಮೂಲಕ ವರ್ಷಕ್ಕೆ 20 ಲಕ್ಷದವರೆಗೆ ಆದಾಯಪಡೆಯುವುದು  ಹೇಗೆ?

ಈ ಯೋಜನೆಯಡಿ ರೈತರು 0.5 ಮೆಗಾವ್ಯಾಟ್‌ರಿಂದ 2 ಮೆಗಾವ್ಯಾಟ್‌ವರೆಗೆ ಸೌರ ಪ್ಲಾಂಟ್ ಸ್ಥಾಪಿಸಬಹುದು.

  • 0.5 ಮೆಗಾವ್ಯಾಟ್ ಪ್ಲಾಂಟ್‌ಗೆ ಸುಮಾರು ₹1.5 ಕೋಟಿ ಹೂಡಿಕೆ ಬೇಕಾಗುತ್ತದೆ.
  • ಬ್ಯಾಂಕ್‌ಗಳು ಸುಮಾರು 70% ಸಾಲ ನೀಡುತ್ತವೆ.
  • ವರ್ಷಕ್ಕೆ ಸುಮಾರು 7.5 ರಿಂದ 8 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಸಾಧ್ಯ.

ಸರ್ಕಾರ ನಿಗದಿಪಡಿಸಿದ ದರ ಎಷ್ಟು?

  • ಒಟ್ಟು ಆದಾಯ: ₹22 ಲಕ್ಷದಿಂದ ₹25 ಲಕ್ಷವರೆಗೆ
  • ವೆಚ್ಚ ಕಡಿತದ ನಂತರ ಶುದ್ಧ ಆದಾಯ: ₹15 ಲಕ್ಷದಿಂದ ₹20 ಲಕ್ಷವರೆಗೆ

ಇದರಲ್ಲಿ ವಿಶೇಷವೆಂದರೆ, ವಿದ್ಯುತ್ ಖರೀದಿಯನ್ನು BESCOM ಮುಂತಾದ ಡಿಸ್ಕಾಂಗಳು ನೇರವಾಗಿ ಮಾಡುತ್ತವೆ. ಆದ್ದರಿಂದ ಮಾರಾಟದ ಬಗ್ಗೆ ಯಾವುದೇ ಹೆದರಿಕೆ ಇರುವುದಿಲ್ಲ.

ಯೋಜನೆಯ ಲಾಭಗಳು ಏನು?

  • ಈ ಯೋಜನೆ ಮೂಲಕ ಡೀಸೆಲ್ ಪಂಪುಗಳ ಅವಲಂಬನೆ ಕಡಿಮೆಯಾಗುತ್ತದೆ.
  • ನೀರಾವರಿ ವೆಚ್ಚದಲ್ಲಿ ಉಳಿತಾಯ ಮಾಡಬಹುದು.
  • ಅಷ್ಟೇ ಅಲ್ಲದೆ ಬಂಜರು ಭೂಮಿಯೂ ಆದಾಯದ ಮೂಲವಾಗುತ್ತದೆ.
  • 25 ವರ್ಷಗಳವರೆಗೆ ಸ್ಥಿರ ಆದಾಯ ಹೊಂದಬಹುದು.
  • ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ಮಾಡಬಹುದು.
 ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಸಲ್ಲಿಕೆ ವಿಧಾನ ಏನು?

ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವ ರೈತರು 18 ವರ್ಷ ಮೇಲ್ಪಟ್ಟವರಾಗಿರಬೇಕು.
  • ರೈತ ಸಂಘಗಳನ್ನು ಹೊಂದಿರಬೇಕು.

ಅಗತ್ಯ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಭೂಮಿ ದಾಖಲೆ
  • ಬ್ಯಾಂಕ್ ಖಾತೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

  • ಹತ್ತಿರದ ಜಿಲ್ಲಾ ಕಚೇರಿ
  • ಅಧಿಕೃತ ಆನ್‌ಲೈನ್ ಪೋರ್ಟಲ್

ಪಿಎಂ ಕುಸುಮ್ 2.0 ಯೋಜನೆ ಕೃಷಿಯನ್ನು ಹೊಸ ಹಾದಿಗೆ ಕೊಂಡೊಯ್ಯುತ್ತಿದೆ. ಇದು ಕೇವಲ ವಿದ್ಯುತ್ ಉತ್ಪಾದನೆಯಲ್ಲ, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಪ್ರಮುಖ ಸಾಧನವಾಗಿದೆ.

ಇಂದು ಬಂಜರು ಭೂಮಿಯನ್ನೇ ಆದಾಯದ ಮೂಲವನ್ನಾಗಿ ಮಾಡುವ ಅವಕಾಶ ರೈತರ ಮುಂದೆ ಇದೆ. ಹಸಿರು ಇಂಧನದತ್ತ ಸಾಗುತ್ತಿರುವ ಭಾರತದಲ್ಲಿ, ಈ ಯೋಜನೆ ರೈತರಿಗೆ ದೀರ್ಘಕಾಲಿಕ ಲಾಭ ತರುವ ಭರವಸೆ ನೀಡುತ್ತಿದೆ.

ಕೃಷಿಯೊಂದಿಗೆ ಸೌರಶಕ್ತಿಯನ್ನು ಬೆಸೆದು, ಆದಾಯವನ್ನು ದ್ವಿಗುಣಗೊಳಿಸಲು ಇದು ಸೂಕ್ತ ಸಮಯ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಿ.

Leave a Comment